ಕನ್ನಡದ ಲವ್ ಮಾಕ್‌ಟೇಲ್ ವೀಕ್ಷಿಸಿ ಫಿದಾ ಆದ ತೆಲುಗು ನಟ ಅಲ್ಲು ಸಿರೀಶ್

ಈ ವರ್ಷ ಜನರ ಸಂಕಷ್ಟದ ನಡುವೆಯೂ ಚರ್ಚೆಯಲ್ಲಿರುವ ಕನ್ನಡದ ಎರಡು ಸಿನಿಮಾಗಳೆಂದರೆ 'ದಿಯಾ' ಮತ್ತು 'ಲವ್ ಮಾಕ್‌ಟೇಲ್'. ಈ ಎರಡೂ ಸಿನಿಮಾಗಳು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಬಳಿಕ ಸಾವಿರಾರು ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದಾರೆ. ಪರಭಾಷೆಯ ಸಿನಿಮಾ ಆಸಕ್ತರೂ ನೋಡಿ ಖುಷಿಪಟ್ಟಿದ್ದಾರೆ.

ಹೀಗೆ ಸಿನಿಮಾಗಳನ್ನು ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾಗಳನ್ನು ನೋಡಿ ಎಂದು ತಮ್ಮ ಸ್ನೇಹಿತರಿಗೆ ಸಲಹೆ ನೀಡುತ್ತಿದ್ದಾರೆ. ಬಿಡುಗಡೆಯಾದ ಎರಡೇ ತಿಂಗಳಲ್ಲಿ 'ಲವ್ ಮಾಕ್‌ಟೇಲ್' ಟಿವಿಯಲ್ಲಿಯೂ ಪ್ರಸಾರಗೊಂಡಿದೆ. ಹೀಗಾಗಿ ಅದು ಇನ್ನಷ್ಟು ಜನರಿಗೆ ತಲುಪಿದೆ. ಜನರು ಸಿನಿಮಾವನ್ನು ಮೆಚ್ಚಿಕೊಂಡ ಖುಷಿಯಲ್ಲಿ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ, ಲವ್ ಮಾಕ್‌ಟೇಲ್ 2 ಗೆ ಸಿದ್ಧತೆ ಆರಂಭಿಸಿದ್ದಾರೆ. ಈ ಸಿನಿಮಾಕ್ಕೆ ನೆರೆಯ ಭಾಷೆಯ ಜನರೂ ಪ್ರಶಂಸೆಯ ಮಾತನ್ನಾಡುತ್ತಿದ್ದಾರೆ. ಮುಂದೆ ಓದಿ...

ಹೃದಯ ಮುಟ್ಟಿದ ಸಿನಿಮಾ

'ಲವ್ ಮಾಕ್‌ಟೇಲ್ (ಕನ್ನಡ) ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ನೋಡಿದೆ. ಅದು ಬಹಳ ಖುಷಿ ಕೊಟ್ಟಿತು ಜತೆಗೆ ಹೃದಯಕ್ಕೂ ಮುಟ್ಟಿತು. ಎಲ್ಲಾ 90ರ ದಶಕ ಹಾಗೂ 2000ರ ಆರಂಭದ ಮಕ್ಕಳೆಲ್ಲರೂ ಅದನ್ನು ಇಷ್ಟಪಡುತ್ತಾರೆ. ಟ್ಯೂಷನ್ ಕ್ರಶ್, ಎಸ್‌ಎಂಎಸ್ ಯುಗದ ರೊಮ್ಯಾನ್ಸ್, ಗಲ್ಲಿ ಕ್ರಿಕೆಟ್, ಸ್ಮಾರ್ಟ್ ಫೋನ್‌ಗಿಂತ ಮುಂಚಿನ ಲವ್. ನನ್ನ ಕ್ಷಣಗಳನ್ನು ಹಿಂದಕ್ಕೆ ಕೊಂಡೊಯ್ದಿತು' ಎಂದು ಅಲ್ಲು ಸಿರೀಶ್ ಟ್ವೀಟ್ ಮಾಡಿದ್ದಾರೆ.

ಇದೇ ರೀತಿಯ ಸಿನಿಮಾ ಮಾಡುವಾಸೆ

ಇದೇ ರೀತಿಯ ಸಿನಿಮಾ ಮಾಡುವಾಸೆ

ಅಲ್ಲು ಸಿರೀಶ್ ಅವರ ಟ್ವೀಟ್‌ಗೆ ಅವರ ಅಭಿಮಾನಿಯೊಬ್ಬರು, ಈ ಸಿನಿಮಾವನ್ನು ರಿಮೇಕ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಲ್ಲು ಸಿರೀಶ್, ಇಲ್ಲ ಇಲ್ಲ! ಆದರೆ ಇದೇ ರೀತಿಯ ಕಥೆಯನ್ನು ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಅನೇಕರು ಅವರಿಗೆ 'ದಿಯಾ' ಸಿನಿಮಾ ಕೂಡ ನೋಡಿ ಎಂದು ಸಲಹೆ ನೀಡಿದ್ದಾರೆ.

ನೈಜ ಪ್ರೀತಿ ಜೀವನದಲ್ಲಿ ಒಮ್ಮೆಯಷ್ಟೇ

ನೈಜ ಪ್ರೀತಿ ಜೀವನದಲ್ಲಿ ಒಮ್ಮೆಯಷ್ಟೇ

'ಕನ್ನಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ದಿಯಾ ಬಳಿಕ ಈಗ ಲವ್ ಮಾಕ್‌ಟೇಲ್. ಮುದ ನೀಡುವ ಸಿನಿಮಾ. ಪ್ರೀತಿಯ ವಿವಿಧ ಹಂತಗಳನ್ನು ತೋರಿಸುತ್ತದೆ. ಜತೆಗೆ ನೈಜ ಪ್ರೀತಿ ಎನ್ನುವುದು ಜೀವನದಲ್ಲಿ ಒಮ್ಮೆಮಾತ್ರ ಬರುತ್ತದೆ ಎಂದು ಹೇಳುತ್ತದೆ. ಭಾವುಕತೆ ಮತ್ತು ಅನಿರೀಕ್ಷಿತ ಕ್ಲೈಮ್ಯಾಕ್ಸ್ ಕಣ್ಣಲ್ಲಿ ನೀರು ತರಿಸುತ್ತದೆ. ಮಿಲನಾ ನಾಗರಾಜ್ ಅವರ ನಟನೆ ಕಂಡು ಅವರಲ್ಲಿ ಪ್ರೀತಿಯಲ್ಲಿ ಬಿದ್ದಿದ್ದೇನೆ' ಎಂದು ಸಲೀಮ್ ರಿಯಾಸ್ ಎಂಬುವವರು ಹೇಳಿದ್ದಾರೆ.

ಸಿನಿಮಾ ಮೆಚ್ಚಿದ ತೆಲುಗು ನಿರ್ದೇಶಕ

ಸಿನಿಮಾ ಮೆಚ್ಚಿದ ತೆಲುಗು ನಿರ್ದೇಶಕ

ಲವ್ ಮಾಕ್‌ಟೇಲ್ ಸಿನಿಮಾದುದ್ದಕ್ಕೂ ಎಂಜಾಯ ಮಾಡಿದೆ. ಎಲ್ಲಾ ಫನ್‌ಗಳಾಚೆಗೆ ಆದಿ ಮತ್ತು ನಿಧಿ ಪಾತ್ರಗಳ ನಡುವಿನ ಪರಿಶುದ್ಧವಾದ ಲವ್ ಸ್ಟೋರಿ ನನ್ನ ಹೃದಯವನ್ನು ಸ್ಪರ್ಶಿಸಿತು ಎಂದು ತೆಲುಗಿನ ನಿರ್ದೇಶಕ/ ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಹೇಳಿದ್ದಾರೆ.

ನೋಡಬೇಕಾದ ಸಿನಿಮಾ

ನೋಡಬೇಕಾದ ಸಿನಿಮಾ

ಸುಂದರವಾದ ರೊಮ್ಯಾಂಟಿಕ್ ಸಿನಿಮಾ. ಮೂರು ಹಂತದ ಪ್ರೀತಿಯಲ್ಲಿ ಸಿನಿಮಾ ಸಾಗುತ್ತದೆ. ಆದರೆ ಈ ಸಿನಿಮಾ ಪ್ರೇಮಂ ಚಿತ್ರಕ್ಕಿಂತ ಬಹಳ ವಿಭಿನ್ನವಾಗಿದೆ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ಮುಖ್ಯವಾಗಿ ಡಾರ್ಲಿಂಗ್ ಕೃಷ್ಣ. ಕಾಮಿಡಿ ಬಹಳ ಚೆನ್ನಾಗಿ ಕೆಲಸ ಮಾಡಿದೆ. ಸಂಗೀತ ಕೂಡ ಚೆನ್ನಾಗಿದೆ ಎಂದು ಅನಿರುದ್ಧ್ ಎಂಬುವವರು ಹೇಳಿದ್ದಾರೆ.

ಅದ್ಭುತ ಲವ್ ಸ್ಟೋರಿ

ಅದ್ಭುತ ಲವ್ ಸ್ಟೋರಿ

ಎರಡು ಗಂಟೆ ಕುಳಿತು ಖುಷಿ ಕೊಡುವ ಸಿನಿಮಾ. ಒಂದು ಫ್ಯಾಂಟಸಿ ಲವ್ ಸ್ಟೋರಿಯಂತೆ ಅನಿಸುತ್ತದೆ. ಕ್ಲಾಸಿಕ್ ಲವ್ ಸ್ಟೋರಿಗಳಲ್ಲಿ ಸಾಮಾನ್ಯವಾಗಿ ನಡೆಯುವ ದುರಂತದ ಅಂತ್ಯಗೊಂದಿಗೆ ನಿರ್ದೇಶಕರು ಪ್ರೇಕ್ಷಕರ ಹೃದಯವನ್ನು ಚೂರು ಮಾಡುತ್ತಾರೆ. ಅದೇ ಇಲ್ಲಿಯೂ ಆಗಿದೆ. ಇದು ಕ್ಲಾಸಿಕ್ ಬ್ಯೂಟಿ ಅಲ್ಲ. ಆದರೆ ಸರಳ ಮತ್ತು ಪ್ರಾಮಾಣಿಕವಾಗಿ ಕಥೆ ಹೇಳುವ ಸಿನಿಮಾ ಎಂದು ಸರಿಲೇರು ಶಮ್ಶೆರಾ ಎಂಬುವವರು ಹೇಳಿದ್ದಾರೆ.

More from Filmibeat

English summary
Telugu actor Allu Sirish and many from other states has praised Kannada movie Love Mocktail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X