ಶಿವಣ್ಣನ ಮನೆಯಲ್ಲಿ 'ಹಾಯ್ ನಾನ್ನ' ನಟ ನಾನಿ: ಇಬ್ಬರು ನಟರ ನಡುವೆ ನಡೆದ ಸಂಭಾಷಣೆ ಏನು?

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಹೊಸ ಸಿನಿಮಾ 'ಹಾಯ್ ನಾನ್ನ' ಸಂಚಲನ ಸೃಷ್ಟಿಸುತ್ತಿದೆ. 'ದಸರಾ' ಅನ್ನೋ ಪಕ್ಕಾ ಮಾಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ ದಿಢೀರನೇ ಕೌಟುಂಬಿಕ ಭಾವನಾತ್ಮಕ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ತುಣುಕುಗಳು ಸಿನಿಪ್ರಿಯರಿಗೆ ಕಿಕ್ ಕೊಟ್ಟಿವೆ.

ಫ್ಯಾಮಿಲಿ ಮ್ಯಾನ್ ಆಗಿ ಮತ್ತೆ ಥಿಯೇಟರ್‌ ಲಗ್ಗೆ ಇಡಲು ಸಜ್ಜಾಗಿರುವ ನಟ ನಾನಿ, ಸಿನಿಮಾ ಬಗ್ಗೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಬಂದಿರೋ ನಟ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಶಿವಣ್ಣ ಹಾಗೂ ನಾನಿ ಇಬ್ಬರೂ ಕೆಲ ಹೊತ್ತು ಪರಸ್ಪರ ಮಾತಾಡಿಕೊಂಡಿದ್ದಾರೆ.

Telugu actor Nani meets Shivarajkumar during Hi Naanna Movie Promotion

ಇತ್ತೀಚೆಗೆ 'ಹಾಯ್ ನಾನ್ನ' ಸಿನಿಮಾದ ಎರಡನೇ ಹಾಡನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ಶುಭ ಹಾರೈಸಿದ್ದರು. ಈಗ ಇದೇ 'ಹಾಯ್ ನಾನ್ನ' ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಬೆಂಗಳೂರಿಗೆ ಪ್ರಚಾರ ಮಾಡುವುದಕ್ಕೆ ಬಂದಿದ್ದಾರೆ. ಇದೇ ವೇಳೆ ಬೆಂಗಳೂರಿನ ನಾಗಾವರದಲ್ಲಿರುವ ಶಿವಣ್ಣನ ಮನೆಗೆ ಭೇಟಿ ಕೊಟ್ಟು ಕೆಲ ಕಾಲ ಸಮಯ ಕಳೆದಿದ್ದಾರೆ. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಜೊತೆಗಿದ್ದರು.

ಪರಭಾಷೆ ಸಿನಿಮಾ ಮಂದಿ ತಮ್ಮ ಸಿನಿಮಾ ರಿಲೀಸ್ ಮಾಡುವಾಗ ಕನ್ನಡದ ಹಿರಿಯ ನಟರನ್ನು ಭೇಟಿ ಮಾಡಿ ಮುಂದುವರೆಯುತ್ತಾರೆ. ಈ ಹಿಂದೆ ನಾನಿ ಸಿನಿಮಾ ಆಗುವಾಗ ಕ್ರೇಜಿಸ್ಟಾರ್ ರವಿಚಂದ್ರನ್ ಭೇಟಿ ಮಾಡಿದ್ದರು. ಈ ಬಾರಿ 'ಹಾಯ್ ನಾನ್ನ' ಸಿನಿಮಾ ರಿಲೀಸ್ ವೇಳೆ ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಇಬ್ಬರು ಸ್ಟಾರ್ ನಟರ ನಡುವೆ ಏನು ಮಾತುಕತೆ ನಡೀತು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಶಿವಣ್ಣ ಹಾಗೂ ತೆಲುಗು ನಟ ನಾನಿ ನಡುವೆ ಸಿನಿಮಾ ಬಗ್ಗೆನೇ ಹೆಚ್ಚು ಚರ್ಚೆಯಾಗಿದೆ. ನಾನಿಯ 'ದಸರಾ' ಸಿನಿಮಾ ಬಗ್ಗೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ದಸರಾ' ಸಿನಿಮಾದ ಟ್ರೈಲರ್ ನೋಡಿ ನಿರ್ಮಾಪಕರಿಗೆ ಫೋನ್ ಮಾಡಿದ್ದಾಗಿ ನಾನಿ ಹೇಳಿದ್ದಾರೆ. ಹಾಗೇ ತಮ್ಮ ಮುಂದಿನ ಪ್ರಾಜೆಕ್ಟ್‌ಗಳು ಬಗ್ಗೆನೂ ಮಾತಾಡಿದ್ದಾರೆ. ಭೈರತಿ ರಣಗಲ್ ಸಿನಿಮಾ ಮಾಡುತ್ತಿರುವ ಬಗ್ಗೆ ಮಾತಾಡಿದ್ದಾರೆ. ಹಾಗೇ ನಾನಿಗೆ ಗೀತಾ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿಸಿ, ಬೇಕಿಂಗ್ ಐಟಂಗಳನ್ನು ಚೆನ್ನಾಗಿ ಮಾಡುತ್ತಾರೆ. ಇವರ ಕೈ ರುಚಿ ಅದ್ಭುತ ಎಂದು ಶಿವಣ್ಣ ಹೇಳಿದ್ದಾಗಿ ಆಪ್ತ ಮೂಲಗಳು ತಿಳಿಸಿವೆ.

Telugu actor Nani meets Shivarajkumar during Hi Naanna Movie Promotion

ಇತ್ತ ನಾನಿ ಕೂಡ ಶಿವಣ್ಣನ 'ಘೋಸ್ಟ್' ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಭೈರತಿ ರಣಗಲ್ ಹಾಗೂ 'ಮಫ್ತಿ' ಸಿನಿಮಾ ಬಗ್ಗೆ ಹೆಚ್ಚು ಚರ್ಚೆ ಮಾಡಿದ್ದಾರೆ. ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಜೊತೆಯಲ್ಲಿದ್ದು, ನಾನಿ ಜೊತೆ ತಮ್ಮ ಆಕಾಶ್ ಆಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದೆ ತೆಲುಗು ಸಿನಿಮಾಗಳ ಹಾಡುಗಳನ್ನು ಖರೀದಿ ಮಾಡಿದ್ದು, ಈಗ ರಾಜಕೀಯ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದಾಗಿ ಹೇಳಿಕೊಂಡಿದ್ದಾರೆ ಅಂತ ಮೂಲಗಳು ಹೇಳಿವೆ.

'ಹಾಯ್ ನಾನ್ನ' ಸಿನಿಮಾ ಡಿಸೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ಇನ್ನೆರಡು ದಿನ ಬಾಕಿ ಉಳಿದಿದ್ದು ನ್ಯಾಚುರಲ್ ಸ್ಟಾರ್ ನಾನಿ ಕೊನೆಯ ಹಂತದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾ. ಈ ವೇಳೆ ಶಿವಣ್ಣನ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಶಿವಣ್ಣ ಕೂಡ ನಾನಿ ಸಿನಿಮಾಗೆ ವಿಶ್ ಮಾಡಿದ್ದು, ಭಾನುವಾರ ಸಿನಿಮಾ ನೋಡುವುದಾಗಿ ಹೇಳಿಕೊಂಡಿದ್ದಾರೆ.

More from Filmibeat

English summary
Tollywood actor Nani meets Shivarajkumar in Bengaluru at his house|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X