Nani: ಬೆಂಗಳೂರಿಗೆ ಬರುತ್ತಿದ್ದಂತೆ ರವಿಚಂದ್ರನ್ ಮನೆಗೆ ತೆಲುಗು ನಟ ನಾನಿ: 'ದಸರಾ' ಸಂಭ್ರಮಕ್ಕೆ ಕ್ರೇಜಿ ಕಿಕ್

ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಮೆಗಾ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಪ್ರಚಾರ ಮಾಡುವುದಕ್ಕೆ ಬಂದಿದ್ದಾರೆ. ಈ ವೇಳೆ ದಿಢೀರನೇ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಗೆ ವಿಸಿಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ.

ಈಗಾಗಲೇ ನಾನಿ 'ದಸರಾ' ಸಿನಿಮಾದಲ್ಲಿ ತಮ್ಮ ರಗಡ್ ಲುಕ್‌ನಿಂದ ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಐದು ಭಾಷೆಗಳಲ್ಲಿ ಪ್ರಚಾರ ಮಾಡುವುದಕ್ಕೆ ಈಗಿನಿಂದಲೇ ಆರಂಭಿಸಿದ್ದಾರೆ. ಈ ಸಂಬಂಧ ನ್ಯಾಚುರಲ್ ಸ್ಟಾರ್ ನಾನಿ ಮತ್ತವರ ತಂಡ ಬೆಂಗಳೂರಿಗೆ ಬಂದಿದ್ದಾರೆ.

Telugu Actor Nani Met Crazy Star Ravichandran In Bengaluru While Dasara Movie Promotion

ನಾನಿ ಅಭಿನಯದ 'ದಸರಾ' ಈ ವರ್ಷ ರಿಲೀಸ್ ಆಗುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದು. ಅದರಲ್ಲೂ ನಾನಿ ಇದೇ ಮೊದಲ ಬಾರಿಗೆ ಸಿಕ್ಕಾಪಟ್ಟೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇ ಅಂದ್ರೆ ಈ ಸಿನಿಮಾ 'ದಿಯಾ' ಸಿನಿಮಾದ ಹೀರೊ ದೀಕ್ಷಿತ್ ಶೆಟ್ಟಿ ಕೂಡ ನಟಿಸಿದ್ದಾರೆ.

ಇಂದು(ಮಾರ್ಚ್ 15) ನಾನಿ ಹಾಗೂ ದೀಕ್ಷಿತ್ ಶೆಟ್ಟಿ ಇಬ್ಬರೂ ಕ್ರೇಜಿಸ್ಟಾರ್ ರವಿಚಂದ್ರನ್ ಮನೆಗೆ ಭೇಟಿ ನೀಡಿದ್ದರು. ಕೆಲವು ಹೊತ್ತು ಕ್ರೇಜಿಸ್ಟಾರ್ ಜೊತೆ ಮಾತುಕತೆಯನ್ನೂ ನಡೆಸಿದ್ದಾರೆ. ಆದರೆ, ನಾನಿ ಕ್ರೇಜಿಸ್ಟಾರ್ ಅನ್ನು 'ದಸರಾ' ಇವೆಂಟ್‌ಗೆ ಆಹ್ವಾನ ನೀಡಲು ಹೋಗಿದ್ದರೇ, ಅಥವಾ ಕೇವಲ ಔಪಚಾರಿಕ ಭೇಟಿನಾ ಅನ್ನೋದು ಇನ್ನಷ್ಟು ಗೊತ್ತಾಗಬೇಕಿದೆ,.

'ದಸರಾ' ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೇ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಈಗಾಗಲೇ ಈ ಟ್ರೈಲರ್ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ಬಝ್ ಅನ್ನೇ ಕ್ರಿಯೇಟ್ ಮಾಡಿದೆ. ಟ್ರೈಲರ್ ನೋಡಿದ್ರೆನೇ ಇದು ಮಾಸ್ ಆಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಈ ಮಟ್ಟಿಗೆ ಕ್ರೇಜ್ ಹುಟ್ಟಿಸಿರೋ 'ದಸರಾ' ಮಾರ್ಚ್ 30ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಇನ್ನು 15 ದಿನಗಳಲ್ಲಿ ನಾನಿ 'ದಸರಾ' ದರ್ಬಾರ್ ಥಿಯೇಟರ್‌ನಲ್ಲಿ ಆರಂಭ ಆಗಲಿದೆ.

Telugu Actor Nani Met Crazy Star Ravichandran In Bengaluru While Dasara Movie Promotion

'ದಸರಾ' ರಗಡ್ ಹಾಗೂ ಮಾಸ್ ಲುಕ್‌ನಲ್ಲಿ ಧರಣಿ ಅವತಾರವೆತ್ತಿ ಸಖತ್ ಕಿಕ್ ಕೊಟ್ಟಿದ್ದಾರೆ. ಟ್ರೈಲರ್‌ನಲ್ಲಿ ನಾನಿ ಮಾಸ್ ಅವತಾರ ನೋಡಿ ಸಿಂಗರೇಣಿ ಕಲ್ಲಿದ್ದಲಿನ ರಕ್ತಸಿಕ್ತ ಲೋಕ ಪ್ರೇಕ್ಷಕರ ಕಣ್ಮುಂದೆ ಬಂದು ಬಿಟ್ಟಿದೆ.

ನ್ಯಾಚುರಲ್ ಸ್ಟಾರ್ ನಾನಿಯ ಮೇಕೋವರ್, ರಗಡ್ ಲುಕ್, ಹಾವ -ಭಾವ ಹಿಂದೆಂದೂ ನೋಡಿಯೇ ಇಲ್ಲ. ಇಲ್ಲಿವರೆಗೂ ನಾನಿ ತಮ್ಮ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಅಭಿಮಾನಿಗಳಲ್ಲೂ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ನಂಬಿಕೆಯಿದೆ.

ಅಂದ್ಹಾಗೆ 'ದಸರಾ' ಸಿನಿಮಾ ತೆಲಂಗಾಣದ ಗೋದಾವರಿಖಾನಿ ಸುತ್ತಮುತ್ತಲಿನ ಕಥೆ. ಇಲ್ಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಕರಾಳ ಜಗತ್ತನ್ನು ಮಾಸ್ ಆಕ್ಷನ್ ಎಲಿಮೆಂಟ್‌ಗಳನ್ನು ಇಟ್ಟುಕೊಂಡು ತೆರೆ ಮೇಲೆ ತರಲಾಗುತ್ತಿದೆ. ಈ ಕಾರಣಕ್ಕೆ 'ದಸರಾ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕುತೂಹಲವನ್ನು ಕೆರಳಿಸುತ್ತಿದೆ.

ಈ ಸಿನಿಮಾವನ್ನು ಸುಧಾಕರ್ ಚೆರುಕುರಿ ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ಶ್ರೀಕಾಂತ್ ಒಡೆಲಾ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದಲ್ಲಿ ಖ್ಯಾತ ನಟಿ ಕೀರ್ತಿ ಸುರೇಶ್ ನ್ಯಾಚುರಲ್ ಸ್ಟಾರ್ ನಾನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್,ಟ್ರೈಲರ್ ಹಾಗೂ ಹಾಡುಗಳ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿರೋ ಟೀಮ್ ಭರ್ಜರಿ ಪ್ರಚಾರವನ್ನು ಆರಂಭಿಸಿದೆ.

'ದಸರಾ'ದಲ್ಲಿ ನಾನಿ ಜೊತೆ 'ದಿಯಾ' ಹೀರೊ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ದೊಡ್ಡ ಹಿಂಡೇ ಇದೆ. ಜೊತೆಗೆ ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ, ನವೀನ್ ನೂಲಿ ಎಡಿಟಿಂಗ್ ಹಾಗೇ ಅನ್ಬರಿವ್ ಸಾಹಸ ನಿರ್ದೇಶನವಿದೆ. ಈಗ ಪ್ರಚಾರ ಆರಂಭಿಸಿರೋ ನಾನಿ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಗ್ಯಾಪ್‌ನಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ರನ್ನೂ ಭೇಟಿ ಮಾಡಿದ್ದಾರೆ.

More from Filmibeat

English summary
Telugu Actor Nani Met Crazy Star Ravichandran In Bengaluru While Dasara Movie Promotion, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X