ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಮಾಸ್ ಸಿನಿಮಾ 'ಸಂಬರಲ ಏಟಿ ಗಟ್ಟು'; ಗ್ಲಿಂಪ್ಸ್ ಕನ್ನಡದಲ್ಲೂ ರಿಲೀಸ್

ತೆಲುಗಿನ ಮೆಗಾ ಕುಟುಂಬದ ಹೀರೋ ಸಾಯಿ ಧರಮ್ ತೇಜ್ ಹೊಸ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಹೊರಬಿದ್ದಿದೆ. ಈ ಸಿನಿಮಾ ಆರಂಭಕ್ಕೂ ಮುನ್ನವೇ ತಮ್ಮ ಹೆಸರನ್ನು ತನ್ನ ತಾಯಿಯ ನೆನಪಿಗಾಗಿ ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಇವರು ಸಾಯಿ ಧರಮ್ ತೇಜ್ ಬದಲು ಸಾಯಿ ದುರ್ಗ ತೇಜ್ ಆಗಿ ಬದಲಾಗಿದ್ದಾರೆ. ಅಂದ್ಹಾಗೆ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಗ್ಯಾಪ್ ಕೊಟ್ಟು ಮಾಡಿರುವ ಸಿನಿಮಾ 'ಸಂಬರಲ ಏಟಿ ಗಟ್ಟು'. ಇದೇ ಸಿನಿಮಾ ಗ್ಲಿಂಪ್ಸ್ ಈಗ ರಿಲೀಸ್ ಮೆಚ್ಚುಗೆ ಗಳಿಸುತ್ತಿದೆ.

ಸಾಯಿ ದುರ್ಗ ತೇಜ್ ನಟಿಸಿದ್ದ 'ವಿರೂಪಾಕ್ಷ' ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಈ ನಟನ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾ ಆಗಿತ್ತು. ಇದೇ ವರ್ಷ ಪವನ್ ಕಲ್ಯಾಣ್ ಜೊತೆ ನಟಿಸಿದ್ದ 'ಬ್ರೋ' ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಸುಮಾರು ಎರಡು ವರ್ಷಗಳ ಕಾಲ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ.

Telugu Actor Sai Durgha Tej Mass Film Sambarala Yeti Gattu Glimpse trending in kannada

ಸಾಯಿ ದುರ್ಗಾ ತೇಜ್ ನಟಿಸುತ್ತಿರುವ ಈ ಪ್ಯಾನ್-ಇಂಡಿಯಾ ಸಿನಿಮಾ 'ಸಂಬರಲ ಏಟಿ ಗಟ್ಟು'(SYG)ದ ಗ್ಲಿಂಪ್ಸ್ ರಿಲೀಸ್ ಆಗಿದೆ. ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಐದು ಭಾಷೆಗಳಲ್ಲಿ ಈ ಸಿನಿಮಾದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಅದಕ್ಕೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಸಾಯಿ ದುರ್ಗ ತೇಜ್ ಮಾಸ್-ಆಕ್ಷನ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

'ಸಂಬರಲ ಏಟಿ ಗಟ್ಟು' ಗ್ಲಿಂಪ್ಸ್‌ನಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇವೆ. ಈ ಸಿನಿಮಾದಲ್ಲಿ ಅಬ್ಬರಿಸಿರುವ ಸಾಯಿ ದುರ್ಗಾ ತೇಜ್ ತೆರೆಮೇಲೆ ರಕ್ತ ಸಿಕ್ತ ಇತಿಹಾಸ ಬರೆಯೋದಕ್ಕೆ ಹೊರಟಿದ್ದಾರೆ. ಈ ಮೂಕ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಹೊರಟಿದ್ದಾರೆ. ಸದ್ಯ ಈ ಚಿತ್ರದ ಗ್ಲಿಂಪ್ಸ್‌ನಲ್ಲಿ ಸಾಯಿ ದುರ್ಗ ತೇಜ್‌ ಭರ್ಜರಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಬಗ್ಗೆನೂ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಸಾಯಿ ಧರಂ ತೇಜ್ ಅಪಘಾತದ ಬಳಿಕ ಒಂದಿಷ್ಟು ತಿಂಗಳು ಸಿನಿಮಾದಿಂದ ದೂರ ಉಳಿದಿದ್ದರು. ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದ ನಟ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಎರಡು ವರ್ಷಗಳ ಹಿಂದೆ ಬ್ಲಾಕ್ ಬಸ್ಟರ್ ಸಿನಿಮಾ 'ವಿರೂಪಾಕ್ಷ'ದ ಬಳಿಕ ಸಾಯಿ ಧರಂ ತೇಜ್ ಚಿತ್ರರಂಗದಿಂದ ಸ್ವಲ್ಪ ಸಮಯ ದೂರ ಉಳಿಯುವುದಾಗಿ ಹೇಳಿಕೊಂಡಿದ್ದರು. ಅದರಂತೆ ದೂರಾನೇ ಇದ್ದರು, ಆದರೆ, ಸೈಲೆಂಟ್ ಆಗಿ 'ಸಂಬರಲ ಏಟಿ ಗಟ್ಟು'ದಂತಹ ಮೆಗಾ ಬಜೆಟ್ ಸಿನಿಮಾದಲ್ಲಿ ನಟಿಸಿದ್ದಾರೆ.

'ಸಂಬರಲ ಏಟಿ ಗಟ್ಟು'ನ ಗ್ಲಿಂಪ್ಸ್‌ನಲ್ಲಿ ಸಾಯಿ ದುರ್ಗಾ ತೇಜ್ ಫೈಟರ್‌ನಂತೆ ಕಾಣಿಸುತ್ತಾರೆ. ಈ ಸಿನಿಮಾಗಾಗಿ ತಮ್ಮ ಲುಕ್‌ ಅನ್ನೇ ಬದಲಿಸಿಕೊಂಡಿದ್ದಾರೆ. ಇದಕ್ಕಾಗಿ ದೇಹವನ್ನು ಹುರಿಗೊಳಿಸಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿ, ಪವರ್‌ಫುಲ್ ಪಾತ್ರದಲ್ಲಿ ಮತ್ತೆ ಮೆಗಾ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ದುರ್ಗಾ ತೇಜ್‌ಗೆ ಜೋಡಿಯಾಗಿ ಐಶ್ವರ್ಯ ಲಕ್ಷ್ಮೀ ಸಾಥ್ ಕೊಟ್ಟಿದ್ದಾರೆ.

ಇನ್ನು ಇವರಿಬ್ಬರ ಜೊತೆಗೆ ಜಗಪತಿ ಬಾಬು, ಸಾಯಿ ಕುಮಾರ್, ಶ್ರೀಕಾಂತ್ ಹಾಗೂ ಅನನ್ಯಾ ನಾಗಲ್ಲ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಸಂಬರಲ ಏಟಿ ಗಟ್ಟು' ಸಿನಿಮಾವನ್ನ ಯುವ ಪ್ರತಿಭೆ ರೋಹಿತ್‌ ಕೆ.ಪಿ. ನಿರ್ದೇಶನ ಮಾಡುತ್ತಿದ್ದಾರೆ. ವೆಟ್ರಿವೇಲ್ ಪಳನಿಸ್ವಾಮಿ ಛಾಯಾಗ್ರಹಣ, ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ನವೀನ್ ವಿಜಯಕೃಷ್ಣ ಎಡಿಟಿಂಗ್ ಮಾಡುತ್ತಿದ್ದಾರೆ.

ಇನ್ನು ಈ ಸಿನಿಮಾವನ್ನು 'ಹನುಮಾನ್'ನಂತಹ ಹಿಟ್ ಕೊಟ್ಟಿರುವ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಪ್ರೈಮ್ ಶೋ ಎಂಟರ್‌ಟೈನ್ಮೆಂಟ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾವನ್ನು ಬಿಡುಗಡೆಯಾಗಲಿದ್ದು, ಕನ್ನಡದಲ್ಲೂ ಬಿಡುಗಡೆಯಾಗಿರುವ ಗ್ಲಿಂಪ್ಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

More from Filmibeat

English summary
Telugu Actor Sai Durgha Tej Mass Film Sambarala Yeti Gattu Glimpse trending in kannada.
Read more about: telugu actor telugu movie glimpse
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X