"ಬಾಲಿವುಡ್‌ನಲ್ಲಿ ಶಾರುಖ್ ಗೊತ್ತು.. ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಗೊತ್ತು" - ತೆಲುಗು ಹಾಸ್ಯ ನಟ ಅಲಿ

ಸ್ಯಾಂಡಲ್‌ವುಡ್‌ ಮಂದಿಗೆ ರಾಜೀವ್ ಹೊಸಬರೇನಲ್ಲ. ಹಾಗೇ ಸಿನಿಪ್ರಿಯರಿಗೂ ಹೊಸಬರಲ್ಲ. ಸಿಸಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡಿರುವ ರಾಜೀವ್ ಹೊಸ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಅದುವೇ ಉಸಿರೇ ಉಸಿರೇ..

ರಾಜೀವ್ ಈಗಾಗಲೇ ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಾಗಿ ಅವರಿಗೂ ನಟನೆ ಅನ್ನೋದು ಹೊಸತೇನು ಅಲ್ಲ. ಇಷ್ಟೇ ಯಾಕೆ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದರು. ಎಲ್ಲೆಲ್ಲೂ ಕಾಣಿಸಿಕೊಳ್ಳುವ ನಟ ರಾಜೀವ್ ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

kichcha-sudeep-ali-shah-rukh-khan

ರಾಜೀವ್ ನಾಯಕರಾಗಿ ನಟಿಸಿರುವ 'ಉಸಿರೇ ಉಸಿರೇ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಹಾಸ್ಯ ದಿಗ್ಗಜರೇ ನಟಿಸಿದ್ದಾರೆ. ತೆಲುಗು ಜನಪ್ರಿಯ ಹಾಸ್ಯ ನಟ ಬ್ರಹ್ಮಾನಂದಂ, ಅಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಂಬಂಧ ಟ್ರೈಲರ್ ಲಾಂಚ್‌ಗೆ ಹಾಸ್ಯ ನಟ ಅಲಿ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಕಿಚ್ಚ ಸುದೀಪ್, ಶಾರುಖ್ ಖಾನ್, ಅಣ್ಣಾವ್ರು ಹಾಗೂ ಚಿರಂಜೀವಿ ಬಗ್ಗೆ ಮಾತಾಡಿದ್ದಾರೆ.

ಹಾಸ್ಯ ನಟ ಅಲಿ ವೇದಿಕೆ ಮೇಲೆ ಕನ್ನಡದಲ್ಲಿಯೇ ಮಾತಾಡಿದ್ದು ವಿಶೇಷವಾಗಿತ್ತು. 1250 ಸಿನಿಮಾಗಳಲ್ಲಿ ನಟಿಸಿದ್ದು, ನಿಮ್ಮ ಆಶೀರ್ವಾದದಿಂದಲೇ ಎಂದು ಅಲಿ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಇದಕ್ಕೂ ಮುನ್ನ ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಗೊತ್ತು. ಕರ್ನಾಟಕದಲ್ಲಿ ಸುದೀಪ್ ಗೊತ್ತು ಎಂದು ಹೇಳಿದ್ದಾರೆ.

kichcha-sudeep-ali-shah-rukh-khan

"ಹಲೋ ಬೆಂಗಳೂರು.. ಹಲೋ ಕರ್ನಾಟಕ.. ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಗೊತ್ತು. ಕರ್ನಾಟಕದಲ್ಲಿ ಸುದೀಪ್ ಗೊತ್ತು. ನನಗೆ 1250 ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದೆ ಅಂದರೆ, ಅದು ನಿಮ್ಮಿಂದ. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ." ಎಂದು ಹಾಸ್ಯ ನಟ ಅಲಿ ಹೇಳಿದ್ದಾರೆ.

ಹಾಗೇ ಅಣ್ಣಾವ್ರನ್ನು ನೆನಪಿಸಿಕೊಂಡಿದ್ದು, ಅವರ ಸಿನಿಮಾ ಹಾಡಿನ ಬಗ್ಗೆ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳಿದ್ದಾರೆ. "ಇಲ್ಲಿ ರಾಜ್‌ಕುಮಾರ್ ಅವರು ಎಂದೆಂದೂ ನಿನ್ನನ್ನು ಮರೆತು ನಾನಿರಲಾರೆ ಎಂದು ಈ ಬೆಂಗಳೂರಿನಲ್ಲಿ ಹಾಡಿದರೆ, ಚಿರಂಜೀವಿ ಅವರು ಈ ಹಾಡಿಗೆ ಡ್ಯಾನ್ಸ್ ಮಾಡು ಅಂದಿದ್ದರು. ರಾಜ್‌ಕುಮಾರ್ ಅವರು ಹಾಡು ಹೇಳಿದ್ದರು. ನಾನು ಡ್ಯಾನ್ಸ್ ಮಾಡಿದ್ದೆ. ಅದೇ ನನಗೆ ಗ್ರೇಟ್ ಅನಿಸುತ್ತೆ. ಅದು ನಿಜಕ್ಕೂ ನನ್ನ ಅದೃಷ್ಟ." ಎಂದು ಅಲಿ ಹೇಳಿದ್ದಾರೆ.

ಕಿಚ್ಚ ಸುದೀಪ್ ಅನ್ನು 'ಉಸಿರೇ ಉಸಿರೇ' ಸಿನಿಮಾದ ವೇದಿಕೆಯಲ್ಲಿ ಅಲಿ ಹೊಗಳಿದ್ದರು. ಅದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್ ಕೂಡ ನಿಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ಒಂದು ಗೌರವ ಎಂದಿದ್ದಾರೆ. "ಅಲಿ ಸರ್ ಅವರು ಟ್ರೈಲರ್ ಲಾಂಚ್‌ಗೆ ಇಲ್ಲಿಗೆ ಬಂದಿರೋದು ನಮಗೆ ಹೆಮ್ಮೆ. ನಿಮ್ಮೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದೇ ಒಂದು ಗೌರವ. ಈ ಸಿನಿಮಾಗೆ ನಿಮ್ಮೆಲ್ಲರ ಸಪೋರ್ಟ್ ಇರಲಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

More from Filmibeat

English summary
Telugu comedian Ali says in Bollywood he knows Shah Rukh Khan, in Karnataka he knows Sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X