»   » ಗಾಯನ ಕಲೆಯನ್ನೂ ಸಿದ್ಧಿಸಿಕೊಂಡಿರುವ ಕನ್ನಡದ ನಟರು

ಗಾಯನ ಕಲೆಯನ್ನೂ ಸಿದ್ಧಿಸಿಕೊಂಡಿರುವ ಕನ್ನಡದ ನಟರು

Posted By:
Subscribe to Filmibeat Kannada

ನಟನೆ ಮತ್ತು ಗಾಯನ ಎಲ್ಲರಿಗೂ ಒಲಿದು ಬರುವ ಕಲೆಯಲ್ಲ, ಪಡ್ಕೋಬಂದಿರ್ಬೇಕು. ಈ ಎರಡೂ ಕ್ಷೇತ್ರದಲ್ಲಿ ಸೈ ಎನಿಸಿಕೊಂಡವರು ಸ್ಯಾಂಡಲ್ ವುಡ್ ನಲ್ಲೂ ಕಮ್ಮಿಯೇನೂ ಇಲ್ಲ.

ಈ ಪಟ್ಟಿಯಲ್ಲಿ ಅಗ್ರ ತಾಂಬೂಲ ಸಲ್ಲ ಬೇಕಾಗಿರುವುದು ವರನಟ ಡಾ. ರಾಜಕುಮಾರ್ ಅವರಿಗೆ. ತನ್ನ ಚಿತ್ರಕ್ಕೆ ಪಿ ಬಿ ಶ್ರೀನಿವಾಸ್ ಹಾಡಿನ ಅಧ್ಯಾಯ ಮುಗಿದ ನಂತರ ರಾಜ್, ಗಾಯಕರಾಗಿಯೂ ಎಷ್ಟು ಜನಪ್ರಿಯರಾದರು ಎನ್ನುವುದು ಇಡೀ ಕರುನಾಡಿಗೆ ಗೊತ್ತು.

ಇನ್ನು, 'ನಾಗರಹೊಳೆ' ಚಿತ್ರದ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ಗಾಯಕರಾಗಿಯೂ ಯಶಸ್ವಿಯಾದರು. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅನ್ನೋ 'ಜಿಮ್ಮಿಗಲ್ಲು' ಚಿತ್ರದ ಹಾಡನ್ನು ಯಾರು ತಾನೆ ಮರೆಯಲು ಸಾಧ್ಯ?

ನವರಸ ನಾಯಕ ಜಗ್ಗೇಶ್, ತರ್ಲೆ ನನ್ಮಗ ಚಿತ್ರದಿಂದ ಹಿಡಿದು ಇತ್ತೀಚೆಗೆ ಅವರ ಅಭಿನಯದ ವಾಸ್ತುಪ್ರಕಾರ ಚಿತ್ರದ ವರೆಗೆ ಗಾಯಕರಾಗಿಯೂ ಪ್ರಯತ್ನ ಮಾಡಿದವರು.

ಹಾಗೇ, ಈಗಿನ ಪೀಳಿಗೆಯ ನಮ್ಮ ಸ್ಯಾಂಡಲ್ ವುಡ್ ನಾಯಕರು ಗಾಯಕರಾಗಿಯೂ ಸೌಂಡ್ ಮಾಡಿದವರು. ಅಂಥದ್ದೊಂದು ಪಟ್ಟಿ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ವಿಜಯ್ ರಾಘವೇಂದ್ರ

ಮಾವ ರಾಜಣ್ಣ ಅವರ ಚಲಿಸುವ ಮೋಡಗಳು ಚಿತ್ರದ ಮೂಲಕ (ಬಾಲನಟ) ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ವಿಜಯ್ ರಾಘವೇಂದ್ರ ನಟನೆಯ ಜೊತೆಗೆ ಗಾಯಕರಾಗಿಯೂ ಹೆಸರು ಮಾಡಿದವರು. ಅವರು ಹಾಡಿರುವ ಪಟ್ಟಿಯಲ್ಲಿ ಸೇವಂತಿ ಸೇವಂತಿ ಚಿತ್ರದ ಜಾಜಿ ಮಲ್ಲಿಗೆ ಹೂವೇ ಈಗಲೂ ಫೇಮಸ್.

ರಿಯಲ್ ಸ್ಟಾರ್

ತನ್ನದೇ ಆದ ಶೈಲಿಯಲ್ಲಿ, ವಿಭಿನ್ನತೆಗೆ ಹೆಸರಾದವರು ರಿಯಲ್ ಸ್ಟಾರ್ ಉಪೇಂದ್ರ. ತನ್ನದೇ ನಿರ್ದೇಶನದ, ನಟನೆಯ 'ಉಪೇಂದ್ರ' ಚಿತ್ರದ ಉಪ್ಪಿಗಿಂತ ರುಚಿ ಬೇರೆಯಿಲ್ಲ ಎನ್ನುವ ಹಾಡು ಇವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅವರು ಲೇಟೇಸ್ಟಾಗಿ ಹಾಡಿದ್ದು ಭರ್ಜರಿ ಯಶಸ್ಸು ಸಾಧಿಸಿದ ಕೃಷ್ಣಲೀಲಾ ಚಿತ್ರಕ್ಕಾಗಿ.

ಪವರ್ ಸ್ಟಾರ್ ಪುನೀತ್

ರಾಜ್ ವಂಶದ ಕುಡಿ ಪುನೀತ್ ಬಾಲ್ಯ ನಟನಾಗಿದ್ದಾಗಲೇ ಹಾಡುವುದನ್ನು ರೂಢಿಸಿಕೊಂಡಿದ್ದರು. ನಾಯಕ ನಟನಾಗಿ ತನ್ನ ಮೊದಲ ಚಿತ್ರದಲ್ಲೇ ತಾಲಿಬಾನ್ ಅಲ್ಲಾ ಅಲ್ಲಾ ಎಂದು ಹಾಡಿ ಮೋಡಿ ಮಾಡಿದ ಪುನೀತ್ ಅವರ ಗಾಯನದ ಅಭಿಯಾನ ಮುಂದುವರಿಯುತ್ತಲೇ ಇದೆ.

ಸುದೀಪ್

ವಾಲಿ, ರಂಗ SSLC, ಚಂದು, ಶಾಂತಿನಿವಾಸ ಮುಂತಾದ ತನ್ನದೇ ಅಭಿನಯದ ಚಿತ್ರದಲ್ಲಿ ಹಾಡಿದ್ದ ಸುದೀಪ್, ಧನಂಜಯ್, ಶೃತಿ ಅಭಿನಯದ, ಎ ಪಿ ಅರ್ಜುನ್ ನಿರ್ದೇಶನದ ರಾಟೆ ಚಿತ್ರಕ್ಕೆ ಇತ್ತೀಚೆಗೆ ಹಾಡಿದ್ದರು.

ಶರಣ್

ಹಾಸ್ಯ ಕಲಾವಿದನಾಗಿ ಬಣ್ಣದಲೋಕಕ್ಕೆ ಅಡಿಯಿಟ್ಟ ಶರಣ್ ಈಗ ಕನ್ನಡದ ಬಹುಬೇಡಿಕೆಯ ನಟರಲ್ಲೊಬ್ಬರು. ಮೂಲತಃ ಆರ್ಕೆಸ್ಟ್ರಾ ಗಾಯಕರಾಗಿದ್ದ ಶರಣ್ ಹಲವು ಚಿತ್ರಗಳಲ್ಲಿ ಹಾಡಿದ್ದಾರೆ. ಅವರು ಲೇಟೆಸ್ಟ್ ಆಗಿ ಹಾಡಿದ್ದು ಶಿವಣ್ಣ ಅಭಿನಯದ ವಜ್ರಕಾಯ ಚಿತ್ರಕ್ಕಾಗಿ.

ಯಶ್

ನವೀನ್ ಕುಮಾರ್ ಗೌಡ ಆಲಿಯಾಸ್ ಯಶ್ ಈಗ ಮುಟ್ಟಿದ್ದೆಲ್ಲಾ ಚಿನ್ನ. ಕನ್ನಡದಲ್ಲಿ ಸದ್ಯ ಟಾಪ್ ರೇಟಿಂಗ್ ನಲ್ಲಿ ನಿಲ್ಲುವ ಯಶ್, ಗಾಯಕನಾಗಿ ಗುರುತಿಸಿಕೊಂಡಿದ್ದು ತನ್ನದೇ ಅಭಿನಯದ ಮಿಸ್ಟರ್ ಎಂಡ್ ಮಿಸೆಸ್ ರಾಮಾಚಾರಿ ಚಿತ್ರದ ಸೂಪರ್ ಹಿಟ್ 'ಅಣ್ತಮ್ಮಾ' ಹಾಡಿನ ಮೂಲಕ.

ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಾಯಕರಾಗಿಯೂ ಸದ್ದು ಮಾಡಿದವರು. ಜನುಮದ ಜೋಡಿ ಚಿತ್ರದ ಮಣಿಮಣಿ ಹಾಡು ಇವರು ಹಾಡಿದ ಜನಪ್ರಿಯ ಹಾಡಿನಲ್ಲೊಂದು.

ಗಣೇಶ್

ಟಿವಿ ನಿರೂಪಕರಾಗಿ ನಂತರ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಗಣೇಶ್ ತನ್ನ ಅಭಿನಯದ ಕೂಲ್ ಮತ್ತೊ ರೊಮಿಯೋ ಚಿತ್ರದ ಹಾಡೊಂದನ್ನು ಹಾಡಿದ್ದಾರೆ.

ಜೋಗಿ ಪ್ರೇಮ್

ಬೋರೇಗೌಡ ಆಲಿಯಾಸ್ ಪ್ರೇಮ್ ಕರಿಯಾ, ಎಕ್ಸ್ ಕ್ಯೂಸ್ ಮಿ, ಜೋಗಿ ಹೀಗೆ ಮೂರು ಬ್ಯಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಜನಪ್ರಿಯರಾದರು. ಉತ್ತಮ ಗಾಯಕರೂ ಆಗಿರುವ ಪ್ರೇಮ್ ಹಲವು ಚಿತ್ರಗಳಿಗೆ ಹಾಡಿದ್ದಾರೆ. ಜೋಗಿ ಚಿತ್ರದ 'ಪೇಳುವೆನು ವರವನ್ನು', ಡಿಕೆ ಚಿತ್ರದ 'ಬಂದ ಬಂದ ಡಿಕೆ ಸಾಹೇಬ' ಇವರಿಗೆ ಹೆಸರು ತಂದು ಕೊಟ್ಟ ಹಾಡುಗಳು.

ಯೋಗೀಶ್

ಲೂಸ್ ಮಾದ ಆಲಿಯಾಸ್ ಯೋಗೀಶ್ ಕೂಡಾ ತನ್ನ ಒಂದೆರಡು ಚಿತ್ರದಲ್ಲಿ ಹಾಡಿದ್ದಾರೆ. ಕಾಲಯಾ ತಸ್ಮೈ ನಮಃ, ಬಂಗಾರಿ ಚಿತ್ರದ ಚಂಗು ಚಂಗ್ಲು ಹುಡ್ಗೀರು ಹಾಡನ್ನು ಯೋಗೀಶ್ ಹಾಡಿದ್ದಾರೆ.

English summary
Ten Sandalwood actors who are also playback singers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada