ಟೆನ್ನಿಸ್ ಕೃಷ್ಣ ಪುತ್ರ ಸಿನಿಮಾಗ್ಯಾಕೆ ಇನ್ನೂ ಎಂಟ್ರಿ ಕೊಟ್ಟಿಲ್ಲ? 'ಅವನ ಹಣೆಬರಹ" ಎಂದು ನಿಟ್ಟುಸಿರು ಬಿಟ್ಟಿದ್ದೇಕೆ?
ಹಿರಿಯ ಕಲಾವಿದರ ಮಕ್ಕಳು ಒಬ್ಬೊಬ್ಬರೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಂದೆ-ತಾಯಿಯಂತೆಯೇ ಅವರೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರಲ್ಲಿ ಕೆಲವರಿಗೆ ಸಕ್ಸಸ್ ಸಿಕ್ಕಿದೆ. ಮತ್ತೆ ಕೆಲವರಿಗೆ ಇನ್ನೂ ಯಶಸ್ಸು ಮರೀಚಿಕೆಯಾಗಿಯೇ ಉಳಿದಿದೆ. ಆದರೆ, ಕನ್ನಡ ಚಿತ್ರರಂಗದ ಹಿರಿಯ ನಟ ಟೆನ್ನಿಸ್ ಕೃಷ್ಣ ಕೂಡ ತಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಮುಂದಾಗಿದ್ದರು.
2019ರಲ್ಲಿ ಹಿರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ತಮ್ಮನ ಬಗ್ಗೆ ಇಂತಹದ್ದೊಂದು ಆಸೆಯನ್ನು ಹಂಚಿಕೊಂಡಿದ್ದರು. ಪುತ್ರ ನಾಗಾರ್ಜುನರನ್ನು ಚಿತ್ರರಂಗಕ್ಕೆ ಪರಿಚಯ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ನೋಡುವುದಕ್ಕೆ ವಿಲನ್ ತರಾನೇ ಇದ್ದಾನೆ. ಅವನಿಗಾಗಿ ಕಥೆ ಬರೆಯುತ್ತಿದ್ದು, ತಾವೇ ನಿರ್ದೇಶನ ಮಾಡುವುದಾಗಿ ಹೇಳಿದ್ದರು.

ಟೆನ್ನಿಸ್ ಕೃಷ್ಣ ಈ ಮಾತನ್ನು ಹೇಳಿ ಐದು ವರ್ಷಗಳ ಮೇಲಾಗಿದೆ. ಆದರೆ, ಇನ್ನೂ ಪುತ್ರ ನಾಗಾರ್ಜುನ ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆಗಲಿಲ್ಲ. ಆದ್ರೀಗ ಪುತ್ರನ ಭವಿಷ್ಯದ ಬಗ್ಗೆ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪುತ್ರನ ಬಗ್ಗೆ ಕೆಲವು ಮಾಹಿತಿಗಳನ್ನು ಹೊರಗೆ ಹಾಕಿದ್ದಾರೆ.
ಪುತ್ರ ನಾಗಾರ್ಜುನನನ್ನು ಸಿನಿಮಾರಂಗಕ್ಕೆ ಎಂಟ್ರಿ ಕೊಡಿಸುವುದಕ್ಕೆ ಟೆನ್ನಿಸ್ ಕೃಷ್ಣ ಪೂರ್ವ ತಯಾರಿ ಮಾಡಿಸಿದ್ದರು. ನಟನಾಗುವುದಕ್ಕೆ ಬೇಕಿರುವ ಎಲ್ಲಾ ಕಲೆಗಳಿಗೂ ತರಬೇತಿ ಕೊಡಿಸಿದ್ದರು. ಆದರೂ, ಟೆನ್ನಿಸ್ ಕೃಷ್ಣ ಆಸೆ ಪಟ್ಟಂತೆ ಅವರ ಪುತ್ರ ನಾಗಾರ್ಜುನನನ್ನು ಲಾಂಚ್ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಆದರೆ, ಕೆಲವೇ ತಿಂಗಳ ಹಿಂದಷ್ಟೇ ಹೊಸ ಆಸೆ ಚಿಗುರಿತ್ತು. ದಕ್ಷಿಣ ಭಾರತದ ಅತೀ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದ್ರೀಗ ಅದೂ ಕೂಡ ಅಲ್ಲಿಗೆ ನಿಂತಿದೆ.

ಟೆನ್ನಿಸ್ ಕೃಷ್ಣ ಪುತ್ರ ನಾಗಾರ್ಜುನಗೆ ನಿಖಿಲ್ ಕುಮಾರ್ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. "ಲೈಕಾ ಸಿನಿಮಾದಲ್ಲಿ ನಮ್ಮ ಸ್ನೇಹಿತರು ಚಿದಂಬರಂ ಎಂಬುವವರು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿದಂಬರಂ ಅವರನ್ನು ಉತ್ತರ ಕರ್ನಾಟಕಕ್ಕೆ ಹೋದರೆ ಕರೆದುಕೊಂಡು ಹೋಗುತ್ತಿದ್ದೆ. ಅವರು ನನ್ನ ಮಗ ನಾಗಾರ್ಜನಗೆ ನಾನು ಕೆಲಸ ಕಲಿಸಿಕೊಡುತ್ತೇನೆ. ನನ್ನ ಜೊತೆ ಅಸಿಸ್ಟೆಂಟ್ ಆಗಿ ಮಾಡಲಿ. ಕೆಲಸ ಕಲಿತರೆ, ಸಿನಿಮಾದ್ದು ಏನೇನಿ ಎಲ್ಲವೂ ಗೊತ್ತಾಗುತ್ತೆ. ಅವನು ನೋಡುವುದಕ್ಕೆ ಹೀರೋ ತರಾನೂ ಇದ್ದಾನೆ. ಅವನನ್ನು ಹೀರೋ ಮಾಡಿದರೆ, ಎಷ್ಟು ದಿನಾನೋ ಅನ್ನೋದು ಅವನಿಗೂ ಗೊತ್ತಾಗಿ ಹೋಗಿದೆ. ಅದಕ್ಕೆ ವಿಲನ್ ಮಾಡುತ್ತೇನೆ ಅಂದ್ಕೊಂಡಿದ್ದಾನೆ." ಎಂದು ಟೆನ್ನಿಸ್ ಕೃಷ್ಣ ಸಂದರ್ಶನದಲ್ಲಿ ಹೇಳಿದ್ದಾರೆ.
ಟೆನ್ನಿಸ್ ಕೃಷ್ಣ ಪುತ್ರ ನಾಗಾರ್ಜುನ ತಮಿಳಿನ ಲೈಕಾ ನಿರ್ಮಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಹೀರೋ ಅಲ್ಲ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ನಿಖಿಲ್ ಕುಮಾರಸ್ವಾಮಿ ಜೊತೆಯಲ್ಲಿ ಒಂದು ಪಾತ್ರವನ್ನೂ ಮಾಡುತ್ತಿದ್ದ. ಆದರೆ, ಮಾನ್ಯ ಕುಮಾರಸ್ವಾಮಿಯವರಿಗೆ ಕೇಂದ್ರ ಮಂತ್ರಿ ಸ್ಥಾನ ಸಿಗುತ್ತಿದ್ದಂತೆ ನಿಖಿಲ್ ಅವರ ತಂದೆಯೊಂದಿಗೆ ಬ್ಯುಸಿಯಾದರು. ಆ ಸಿನಿಮಾ ಆಗುತ್ತೋ ಇಲ್ವೋ ಗೊತ್ತಿಲ್ಲ. ಆ ಹಂತದಲ್ಲಿದೆ. ಮೊನ್ನೆಯಿಂದ ಉಪೇಂದ್ರ ಅವರ ಟಿಎಂಟಿ ಕಂಪನಿ ಆಡ್ ಶೂಟ್ ಅದಕ್ಕೂ ಕೆಲಸ ಮಾಡಿದ್ದಾನೆ. ನೋಡಬೇಕು ಅವನ ಹಣೆಬರಹ ಹೇಗಿದೆ ಅಂತ." ಎಂದು ಹಿರಿಯ ನಟ ಟೆನ್ನಿಸ್ ಕೃಷ್ಣ ಬೇಸರಿಂದಲೇ ಹೇಳಿದ್ದಾರೆ.


Click it and Unblock the Notifications











