KGF 2 vs Beast box office collection: 'ಬೀಸ್ಟ್' ಹಾಗೂ 'ಕೆಜಿಎಫ್ 2' ಕಲೆಕ್ಷನ್ ನಡುವಿನ ಅಂತರವೆಷ್ಟು?

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ದಳಪತಿ ವಿಜಯ್ 'ಬೀಸ್ಟ್' ಹಾಗೂ ಯಶ್ 'ಕೆಜಿಎಫ್ 2' ಎರಡೂ ಇತ್ತು. ಆದರೆ ಈ ಎರಡೂ ಸಿನಿಮಾಗಳೂ ಬಿಡುಗಡೆ ಮುನ್ನ ಒಂದಕ್ಕೊಂದು ಪೈಪೋಟಿ ನೀಡಲಿವೆ ಎಂದು ಭವಿಷ್ಯ ನುಡಿಯಲಾಗಿತ್ತು. 'ಕೆಜಿಎಫ್ 2' ಸಿನಿಮಾಗೆ 'ಬೀಸ್ಟ್' ಟಕ್ಕರ್ ಕೊಡುತ್ತೆ ಎನ್ನಲಾಗಿತ್ತು.

'ಕೆಜಿಎಫ್ 2' ಸಿನಿಮಾಗಿಂತ 'ಬೀಸ್ಟ್' ಒಂದು ದಿನ ಮುನ್ನವೇ ಸಿನಿಮಾ ರಿಲೀಸ್ ಆಗಿತ್ತು. ಹೀಗಾಗಿ 'ಬೀಸ್ಟ್' ಚಿತ್ರ ಕೆಜಿಎಫ್‌ಗೆ ಪ್ರಬಲ ಪೈಪೋಟಿ ಎಂದು ಭಾವಿಸಿದ್ದರು. 'ಕೆಜಿಎಫ್ 2'ಗಿಂತ ಒಂದು ದಿನ ಮುನ್ನ ರಿಲೀಸ್ ಆಗಿದ್ದು, 'ಕೆಜಿಎಫ್ 2' ಒಂದು ದಿನ ತಡವಾಗಿ ಬಿಡುಗಡೆಯಾಗಿತ್ತು. ದಕ್ಷಿಣ ಭಾರತದ ಎರಡು ಬಿಗ್ ಸಿನಿಮಾಗಳ ಹವಾ ಹೇಗಿದೆ? ಬಾಕ್ಸಾಫೀಸ್‌ನಲ್ಲಿ ಎರಡು ಸಿನಿಮಾಗಳ ಕಲೆಕ್ಷನ್ ಏನು? ಅನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿದೆ.

5 ದಿನಗಳಲ್ಲಿ 'ಬೀಸ್ಟ್' ಸಿನಿಮಾ ಎಲ್ಲೆಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? 'ಕೆಜಿಎಫ್ 2' ಕಲೆಕ್ಷನ್ ನಡುವಿನ ಅಂತರವೆಷ್ಟು? ಯಾವ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಬೀಸ್ಟ್-ಕೆಜಿಎಫ್ 2 ಕಲೆಕ್ಷನ್ ಎಷ್ಟು?

ಬೀಸ್ಟ್-ಕೆಜಿಎಫ್ 2 ಕಲೆಕ್ಷನ್ ಎಷ್ಟು?

'ಬೀಸ್ಟ್' ದಕ್ಷಿಣ ಭಾರತದ ಬಿಗ್ ಬಜೆಟ್ ಸಿನಿಮಾ. ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಏಪ್ರಿಲ್ 13ರಿಂದ 5 ದಿನಗಳಲ್ಲಿ ಡಿಸೆಂಟ್ ಅಮೌಂಟ್ ಗಳಿಕೆ ಮಾಡಿದೆ. ವಿಶ್ವದಾದ್ಯಂತ 'ಬೀಸ್ಟ್' ಸಿನಿಮಾ 185.50 ಕೋಟಿ ಗಳಿಸಿದೆ. ಅದೇ 'ಕೆಜಿಎಫ್ 2' 4 ದಿನಗಳಿಗೆ 552 ಕೋಟಿ ಲೂಟಿ ಮಾಡಿದೆ. ಎರಡು ಸಿನಿಮಾಗಳಿಗೂ ತುಂಬಾನೇ ಅಂತರವಿದೆ. ಆದರೆ, 'ಬೀಸ್ಟ್' ಕಲೆಕ್ಷನ್ ಕೂಡ ತೀರಾ ಕಮ್ಮಿಯೇನಲ್ಲಾ ಎಂದೇ ಭಾವಿಸಲಾಗಿದೆ.

ಎಲ್ಲೆಲ್ಲಿ 'ಬೀಸ್ಟ್' ಕಲೆಕ್ಷನ್ ಎಷ್ಟಿದೆ?

ಎಲ್ಲೆಲ್ಲಿ 'ಬೀಸ್ಟ್' ಕಲೆಕ್ಷನ್ ಎಷ್ಟಿದೆ?

ದಳಪತಿ ವಿಜಯ್ 'ಬೀಸ್ಟ್' ತಮಿಳು ನಾಡು ಹಾಗೂ ವಿದೇಶದಲ್ಲಿ ಸಖತ್ ಗಳಿಕೆ ಕಂಡಿದೆ. ತಮಿಳು ನಾಡಿನಲ್ಲಿ ಐದು ದಿನಕ್ಕೆ 94.60 ಕೋಟಿ ಗಳಿಕೆ ಮಾಡಿದೆ. ಅದೇ ವಿದೇಶದಲ್ಲಿ ಈ 5 ದಿನಗಳಲ್ಲಿ 53 ಕೋಟಿ ಗಳಿಕೆ ಕಂಡಿದೆ. ಆಂಧ್ರ-ತೆಲಂಗಾಣ ಸೇರಿದಂತೆ ಎರಡು ರಾಜ್ಯಗಳಿಂದ ಸುಮಾರು 12.40 ಕೋಟಿ ಗಳಿಸಿದೆ. 'ಬೀಸ್ಟ್'ಗೆ ಬೇರೆ ಸ್ಟೇಟ್‌ಗಳಲ್ಲಿ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿಲ್ಲ. ಅದಲ್ಲದೆ ಹಿಂದಿ ಬೆಲ್ಟ್‌ನಲ್ಲೂ ಈ ಸಿನಿಮಾ ಗಳಿಕೆ ಅಷ್ಟಕ್ಕಷ್ಟೆ ಅಂತಲೇ ಹೇಳಬಹುದು.

 ಕರ್ನಾಟಕದಲ್ಲಿ 'ಬೀಸ್ಟ್' ಗಳಿಸಿದ್ದೆಷ್ಟು?

ಕರ್ನಾಟಕದಲ್ಲಿ 'ಬೀಸ್ಟ್' ಗಳಿಸಿದ್ದೆಷ್ಟು?

ದಳಪತಿ ವಿಜಯ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತೆ. ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ವಿಜಯ್ ಸಿನಿಮಾ ಕಮ್ಮಿಅಂದರೂ 20 ಕೋಟಿ ಗಳಿಕೆ ಮಾಡುತ್ತೆ. ಆದರೆ, ಈ ಬಾರಿ 'ಕೆಜಿಎಫ್ 2' ವಿರುದ್ಧ ರಿಲೀಸ್ ಆಗಿದ್ದರಿಂದ ಇಲ್ಲೂ ಗಳಿಕೆಯಲ್ಲಿ ಹಿಂದೆ ಬಿದ್ದಿದೆ. ಕರ್ನಾಟಕದಾದ್ಯಂತ 5 ದಿನಕ್ಕೆ 12.55 ಕೋಟಿ ಗಳಿಕೆ ಕಂಡಿದೆ. ಅದೇ 'ಕೆಜಿಎಫ್ 2' ಅಧಿಕೃತ ಗಳಿಕೆ ಹೊರಬೀಳದೆ ಹೋದರೂ, ಕರ್ನಾಟಕವೊಂದರಿಂದಲೇ 100 ಕೋಟಿ ಗಳಿಕೆ ಎನ್ನಲಾಗಿದೆ.

'ಬೀಸ್ಟ್‌'ಗೆ ಸಿಕ್ಕಿದ್ದು, ಸೋಲಾ ಗೆಲುವಾ?

'ಬೀಸ್ಟ್‌'ಗೆ ಸಿಕ್ಕಿದ್ದು, ಸೋಲಾ ಗೆಲುವಾ?

'ಬೀಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೆಜ್ಜೆ ಗಳಿಕೆ ಮಾಡದೆ ಹೋದರೂ, ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕೇವಲ ಎರಡು ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಹೀಗಾಗಿ 'ಕೆಜಿಎಫ್ 2' ಸಿನಿಮಾದಿಂದ ಕರ್ನಾಟಕ, ಆಂಧ್ರ-ತೆಲಂಗಾಣದ ಗಳಿಕೆಯಲ್ಲಿ ಕೊಂಚ ಹಿಂದೆ ಬಿದ್ದಿದೆ. ಆದರೂ, 'ಬೀಸ್ಟ್' ಮುಂದಿನ ದಿನಗಳಲ್ಲಿ 250 ಕೋಟಿ ಗಳಿಸಬಹುದು ಎನ್ನಲಾಗುತ್ತಿದೆ.

More from Filmibeat

English summary
Thalapathy Vijay Beast And Yash KGF 2 Box Office Collection Difference. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X