ತಂಗಾಲನ್, ಸ್ತ್ರೀ 2, ವೇದ, ಮಿ. ಬಚ್ಚನ್, ಡಬಲ್ ಇಸ್ಮಾರ್ಟ್; ಕರ್ನಾಟಕದಲ್ಲಿ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಕಳೆದೊಂದು ವಾರದಿಂದ ಥಿಯೇಟರ್‌ಗಳಲ್ಲಿ ಜನರು ಕಾಣಿಸುವುದಕ್ಕೆ ಶುರು ಮಾಡಿದ್ದಾರೆ. 'ಭೀಮ' ಸಿನಿಮಾದಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರೋದು ಮತ್ತೆ ಹೆಚ್ಚಾಗಿದೆ. ಈ ವಾರವಂತೂ ಕನ್ನಡ ಸಿನಿಮಾ ಜೊತೆಗೆ ಪರಭಾಷೆಯ ಸಿನಿಮಾಗಳು ಕೂಡ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿವೆ. ಕರ್ನಾಟಕದಲ್ಲಿ ಉತ್ತಮ ಗಳಿಕೆಯನ್ನು ಮಾಡುತ್ತಿವೆ.
ದುನಿಯಾ ವಿಜಯ್ ನಟನೆಯ 'ಭೀಮಾ' ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಯಣ ಸಖಿ' ಹಾಗೂ 'ಗೌರಿ' ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ಇವೆ. ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಬರುತ್ತಿದ್ದಾರೆ. ಇದೇ ವೇಳೆ ಪರಭಾಷೆಯ ಸಿನಿಮಾಗಳಿಗೂ ಜನರು ಥಿಯೇಟರ್‌ನತ್ತ ಬರುತ್ತಿದ್ದು, ಕನ್ನಡ ಸಿನಿಮಾಗಳಿಗೆ ಪೆಟ್ಟು ಬೀಳಬಹುದಾ ಅನ್ನೋ ಆತಂಕ ಹೆಚ್ಚಾಗುತ್ತಿದೆ.

ಇದರೊಂದಿಗೆ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳಿಗೂ ಸಾಕಷ್ಟು ಸ್ಕ್ರೀನ್‌ಗಳು ಸಿಕ್ಕಿವೆ. ಚಿಯಾನ್ ವಿಕ್ರಮ್ ನಟನೆಯ 'ತಂಗಾಲನ್', ಹಿಂದಿ ಸಿನಿಮಾ 'ಸ್ತ್ರೀ 2', ಜಾನ್ ಅಬ್ರಾಹಂ ಸಿನಿಮಾ 'ವೇದ', ತೆಲುಗು ಸಿನಿಮಾ 'ಮಿಸ್ಟರ್ ಬಚ್ಚನ್', ಮತ್ತೊಂದು ತೆಲುಗು ಸಿನಿಮಾ 'ಡಬಲ್ ಇಸ್ಮಾರ್ಟ್' ಬಿಡುಗಡೆಯಾಗಿದೆ. ಈ ಸಿನಿಮಾಗಳು ಕರ್ನಾಟಕದಲ್ಲಿ ಹೇಗೆ ಕಲೆಕ್ಷನ್ ಮಾಡಿವೆ ಅನ್ನೋದನ್ನು ನೋಡೋಣ.
ಚಿಯಾನ್ ವಿಕ್ರಮ್- 'ತಂಗಾಲನ್'
ನಿರ್ದೇಶಕ ಪಾ.ರಂಜಿತ್ ನಿರ್ದೇಶಿಸಿದ ಸಿನಿಮಾ 'ತಂಗಾಲನ್'. ಒರಿಜಿನಲ್ 'ಕೆಜಿಎಫ್' ಇದೇ ಎಂದು ಹೇಳಿಕೊಂಡು ಸಿನಿಮಾ ಮಾಡಿದ್ದರು. ಚಿಯಾನ್ ವಿಕ್ರಮ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕರ್ನಾಟಕದಲ್ಲಿ ಈ ಸಿನಿಮಾ ಸುಮಾರು 140 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ 2.20 ಕೋಟಿ ರೂಪಾಯಿ ಹಾಗೂ ಎರಡನೇ ದಿನ 1.50 ಯಿಂದ 1.70 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುತ್ತಿದ್ದಾರೆ.

ಬಾಲಿವುಡ್ ಸಿನಿಮಾ 'ಸ್ತ್ರೀ 2'
ಬಾಲಿವುಡ್ ಸಿನಿಮಾ 'ಸ್ತ್ರೀ 2'ಗೆ ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಹಿಂದೆ ಬಂದಿದ್ದ 'ಸ್ತ್ರೀ' ಸಿನಿಮಾದ ಸೀಕ್ವೆಲ್ ಇದಾಗಿದ್ದು, ಜನರು ಸಿನಿಮಾವನ್ನು ನೋಡಲು ಆಸಕ್ತಿ ತೋರುತ್ತಿದ್ದಾರೆ. ಕರ್ನಾಟಕದಲ್ಲಿ ಈ ಸಿನಿಮಾ 80 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ ಎನ್ನಲಾಗಿದೆ. ನಿನ್ನೆ (ಆಗಸ್ಟ್ 15) ಹಾಗೂ ಇಂದು (ಆಗಸ್ಟ್ 16) ಎರಡೂ 1.80 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಒಟ್ಟು 3.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಜಾನ್ ಅಬ್ರಹಾಂ- 'ವೇದ'
ಬಾಲಿವುಡ್ ನಟ ಜಾನ್ ಅಬ್ರಾಹಂ ನಟಿಸಿರುವ 'ವೇದ' ಸಿನಿಮಾಗೆ ಕರ್ನಾಟಕದಲ್ಲಿ 65 ಸ್ಕ್ರೀನ್ ಸಿಕ್ಕಿತ್ತು. ಈ ಸಿನಿಮಾ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಿಲ್ಲ. ಮೊದಲ ದಿನ 40 ಲಕ್ಷ ರೂಪಾಯಿ ಹಾಗೂ ಎರಡನೇ ದಿನ 25 ಲಕ್ಷ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ರವಿತೇಜಾ ಸಿನಿಮಾ 'ಮಿಸ್ಟರ್ ಬಚ್ಚನ್'
ರವಿ ತೇಜಾ ನಟಿಸಿರುವ 'ಮಿಸ್ಟರ್ ಬಚ್ಚನ್' ಸಿನಿಮಾ ಕರ್ನಾಟಕದಲ್ಲಿ 110 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು 110 ಸ್ಕ್ರೀನ್‌ಗಳಲ್ಲಿ ತೆರೆಕಂಡಿರೋ ಸಿನಿಮಾ ಮೊದಲ ದಿನ 50 ಲಕ್ಷ ರೂಪಾಯಿ ಹಾಗೂ ಎರಡನೇ ದಿನ 25 ಲಕ್ಷ ರೂಪಾಯಿ ಗಳಿಕೆ ಕಂಡಿದೆ.
'ಡಬಲ್ ಇಸ್ಮಾರ್ಟ್ ಶಂಕರ್'
ಪುರಿ ಜಗನ್ನಾಥ್ ನಿರ್ದೇಶನದ 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಸುಮಾರು 120 ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮ ಮೊದಲ ದಿನ 55 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದರೆ, ಎರಡನೇ ದಿನ 30 ರಿಂದ 35 ಲಕ್ಷ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications











