ಕಳೆದ ಡಿಸೆಂಬರ್‌ನಲ್ಲೇ ಚೌಟ್ರಿನೂ ಬುಕ್.. 3 ಬಾರಿ ಮದುವೆ ಡೇಟ್ ಕ್ಯಾನ್ಸಲ್: 4ನೇ ಡೇಟ್‌ನಲ್ಲಿ ನಡೀತು ಮದುವೆ!
ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಇಂದು (ಆಗಸ್ಟ್ 11) ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡೂ ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಸತಿ-ಪತಿಗಳಾಗಿದ್ದಾರೆ. ಇಂದಿನಿಂದ ಈ ಜೋಡಿ ಹೊಸ ಜೀವನ ಆರಂಭ ಆಗುತ್ತಿದೆ. ವೃತ್ತಿ ಬದುಕಿನ ಜೊತೆ ಜೊತೆಗೆ ವೈಯಕ್ತಿಕ ಬದುಕಿನ ಕಡೆಗೂ ಗಮನ ಹರಿಸಬೇಕಿದೆ.
ತರುಣ್ ಹಾಗೂ ಸೋನಾಲ್ ಮದುವೆಯನ್ನು ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಜೊತೆಯಲ್ಲಿ ನಿಂತು ನಡೆಸಿಕೊಟ್ಟಿದ್ದಾರೆ. ಅದರಲ್ಲೂ ತರುಣ್ ಸುಧೀರ್ ಅವರ ಅಣ್ಣನ ಸ್ಥಾನದಲ್ಲಿ ನಿಂತು ಬಿಜೆಪಿ ಮುಖಂಡ ರಾಜುಗೌಡ ಈ ಮದುವೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ತರುಣ್ ಸುಧೀರ್ ಜೊತೆ ನೆನೆಪಿರಲಿ ಪ್ರೇಮ್ ನಿಂತಿದ್ದಾರೆ. ಹಿರಿಯ ನಟಿ ಶ್ರುತಿ ಎಲ್ಲರೂ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಆದರೆ, ಈ ಮದುವೆ ವೇಳೆ ಇಂಟ್ರೆಸ್ಟಿಂಗ್ ವಿಷಯವೊಂದನ್ನು ರಾಜು ಗೌಡ ಬಿಚ್ಚಿಟ್ಟಿದ್ದಾರೆ. ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಮದುವೆ ಕಳೆದ ವರ್ಷವೇ ನಡೆಯಬೇಕಿತ್ತು. ಚೌಟ್ರಿ ಕೂಡ ಬುಕ್ ಮಾಡಲಾಗಿತ್ತು. ಆದರೆ, ಕ್ಯಾನ್ಸಲ್ ಆಗಿತ್ತು. ಹೀಗೆ ಇನ್ನೇರಡು ಬಾರಿ ಮದುವೆ ಡೇಟ್ ಫಿಕ್ಸ್ ಮಾಡಿ ಕ್ಯಾನ್ಸಲ್ ಆಗಿದ್ದನ್ನು ರಾಜು ಗೌಡ ಫಿಲ್ಮಿಫಸ್ಟ್ ಜೊತೆ ಹೇಳಿಕೊಂಡಿದ್ದಾರೆ.
ತರುಣ್ ಸುಧೀರ್‌ಗೆ ಮನೆಯಲ್ಲಿ ಮದುವೆ ಮಾಡುವುದಕ್ಕೆ ಹೊರಟಿದ್ದರು. ಸಿನಿಮಾದ ಕಮಿಟ್ಮೆಂಟ್‌ಗಳು ಹೆಚ್ಚು ಇದ್ದಿದ್ದರಿಂದ ಆ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಇತ್ತ ತರುಣ್ ಸುಧೀರ್ ಅಮ್ಮ ಮಾಲತಿ ಸುಧೀರ್ ಮಗ ಮದುವೆ ಆಗುತ್ತಿಲ್ಲ ಅಂತ ಟೆನ್ಷನ್ ಆಗಿದ್ದರು. ಇತ್ತ ತರುಣ್ ಸಾಧನೆ ಮಾಡಿದ ಮೇಲೆ ಮದುವೆ ಅಂತಿದ್ದರು. ಟಿವಿ ಶೋ ಒಂದು ಮಾಲತಿ ಸುಧೀರ್ ಕಣ್ಣೀರು ಹಾಕಿದ್ದನ್ನು ನೋಡಿ ರಾಜು ಗೌಡ ಸೇರಿದಂತೆ ಸ್ನೇಹಿತರು ತರುಣ್ ಸುಧೀರ್ ಮೇಲೆ ಒತ್ತಡ ಹೆಚ್ಚು ಹಾಕಿದ್ದರು.

ಮದುವೆ ಬಗ್ಗೆ ಒತ್ತಡ ಹಾಕುತ್ತಿದ್ದಂತೆ ತರುಣ್ ಸುಧೀರ್ ನಿಧಾನವಾಗಿ ಚಿಕ್ಕದೊಂದು ಸುಳಿವು ಬಿಟ್ಟುಕೊಟ್ಟಿದ್ದರು. ಆಮೇಲೆ ದರ್ಶನ್ ಅವರೇ ಸೋನಾಲ್ ಮಾಂಥೆರೋ ಒಳ್ಳೆಯ ಹುಡುಗಿ. ಮದುವೆ ಆಗು ಅಂತ ಹೇಳಿದ್ದರು. ಆಗ ತರುಣ್ ಸುಧೀರ್ ಮದುವೆ ಆಗುವುದಕ್ಕೆ ನಿರ್ಧಾರಕ್ಕೆ ಬಂದಿದ್ದರು ಎಂದು ರಾಜು ಗೌಡ ಪ್ರತಿಕ್ರಿಯೆ ನೀಡುವ ವೇಳೆ ನೆನಪಿಸಿಕೊಂಡಿದ್ದಾರೆ.
ಆದರೆ, ತರುಣ್ ಸುಧೀರ್ ಮದುವೆಗೆ ಒಪ್ಪುತ್ತಿದ್ದಂತೆ ಸ್ನೇಹಿತರ ಬಳಗದಲ್ಲಿ ಸೋನಾಲ್ ಮಾಂಥೆರೋ ಹೆಸರು ರಿವೀಲ್ ಆಗಿತ್ತು. ತರುಣ್ ಅವರೇ ಎರಡೂ ಕುಟುಂಬವನ್ನೂ ಈ ಮದುವೆ ಒಪ್ಪಿಸಿದ್ದರು. ಹೀಗಾಗಿ ಕಳೆದ ವರ್ಷ ಡಿಸೆಂಬರ್ 9 ಮದುವೆ ಅಂತ ಚೌಟ್ರಿಯನ್ನು ಬುಕ್ ಮಾಡಿದ್ದರಂತೆ. ಆದರೆ, ಅದ್ಯಾಕೋ ಆ ಡೇಟ್‌ನಲ್ಲಿ ಮದುವೆ ಆಗುವುದಕ್ಕೆ ಸಾಧ್ಯವಾಗಿಲ್ಲ. ಬಳಿಕ 2024 ಫೆಬ್ರವರಿಯಲ್ಲಿ ಮತ್ತೊಂದು ಡೇಟ್ ಫಿಕ್ಸ್ ಆಗಿತ್ತು. ಅದನ್ನೂ ಮುಂದೂಡಲಾಗಿತ್ತು. ನಂತರ ಮಾರ್ಚ್ ತಿಂಗಳಲ್ಲಿ ಮೂರನೇ ಡೇಟ್ ಫಿಕ್ಸ್ ಮಾಡಲಾಯಿತು. ಅದನ್ನು ಕ್ಯಾನ್ಸಲ್ ಮಾಡಿ, ಕೊನೆಗೂ ನಾಲ್ಕನೇ ಬಾರಿ ಡೇಟ್ ಮಾಡಿದಾಗ ಅದರಲ್ಲಿ ಮದುವೆ ಆದರೆಂದು ರಾಜು ಗೌಡ ರಿವೀಲ್ ಮಾಡಿದ್ದಾರೆ.
ಕನ್ನಡದ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದಿಷ್ಟು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಬಹುದು. ಆ ಬಳಿಕ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕುವ ಸಾಧ್ಯತೆಯಿದೆ. ಇನ್ನು ಕಿರುತೆರೆಗೂ ಕಾಲಿಟ್ಟಿರುವುದರಿಂದ ತರುಣ್ ಸುಧೀರ್ ಮುಂದಿನ ನಡೆಯೇನು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications










