ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಮಧು ಮಕ್ಕಳು; ತರುಣ್-ಸೋನಾಲ್​ ಸಂಭ್ರಮದಲ್ಲಿ ಭಾಗಿಯಾದ ತಾರೆಯರ್‍ಯಾರು?

ಸ್ಯಾಂಡಲ್‌ವುಡ್‌ನ ಮತ್ತೊಂದು ಕ್ಯೂಟ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ತಮ್ಮ ಮ್ಯಾಟರ್ ಅನ್ನು ರಹಸ್ಯವಾಗಿಯೇ ಇಟ್ಟಿತ್ತು. ಮದುವೆ ಬೇಕಿರುವ ತಯಾರಿಗಳನ್ನು ಕೂಡ ಗುಟ್ಟಾಗಿಯೇ ಮಾಡಿಕೊಳ್ಳುತ್ತಿದ್ದರು. ಆದರೂ ಇವರಿಬ್ಬರ ಮದುವೆ ವಿಚಾರ ಹೊರಬಂದು ಲೀಕ್ ಆಗಿತ್ತು.

ಒಂದಿಷ್ಟು ದಿನಗಳ ಬಳಿಕ ಸೋನಾಲ್ ಮಾಂಥೆರೋ ಜೊತೆ ಮದುವೆ ಆಗುತ್ತಿರುವ ವಿಷಯವನ್ನು ತರುಣ್ ಸುಧೀರ್ ಅಧಿಕೃತಗೊಳಿಸಿದ್ದರು. ಈ ಜೋಡಿ ನಾಳೆ (ಆಗಸ್ಟ್ 11) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಅದಕ್ಕೂ ಮುನ್ನ ಇಂದು (ಆಗಸ್ಟ್ 10) ಚಿತ್ರರಂಗದ ಗಣ್ಯರಿಗಾಗಿ, ಆತ್ಮೀಯರಿಗಾಗಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನವೇ ಮದುವೆ ಸಂಭ್ರಮ, ಶಾಸ್ತ್ರಗಳು ಆರಂಭ ಆಗಿವೆ.

Tharun Sudhir and Sonal Monteiro wedding haldi celebration photos trending

ಆರತಕ್ಷತೆಗೂ ಮುನ್ನ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಹಳದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಹಳದಿ ಶಾಸ್ತ್ರದಲ್ಲಿ ಈ ಜೋಡಿ ಸಂಭ್ರಮಿಸಿದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇಬ್ಬರ ಅಭಿಮಾನಿಗಳು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ತರುಣ್-ಸೋನಾಲ್ ಹಸೆಮಣೆ ಏರುವುದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಹಳದಿ ಶಾಸ್ತ್ರವನ್ನು ಕೂಡ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ವಿಶಿಷ್ಟವಾಗಿ ನೆರವೇರಿದೆ. ಡಿಸೈನರ್ ವೇರ್‌ಗಳನ್ನು ಧರಿಸಿ, ಈ ಜೋಡಿ ಮಿಂಚಿದೆ. ಅರಿಶಿಣದ ನೀರಿನಲ್ಲಿ ಮಿಂದೆದ್ದಿದೆ. ಈ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನಟರಾದ ಶರಣ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಜೋಡಿಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರೇಮ್, ಶರಣ್ ಕೂಡ ಹಳದಿ ಹಚ್ಚಿಕೊಂಡು ಖುಷಿ ಪಟ್ಟಿದ್ದಾರೆ.

Tharun Sudhir and Sonal Monteiro wedding haldi celebration photos trending

ತರುಣ್ ಸುಧೀರ್-ಸೋನಾಲ್ ಮಾಂಥೆರೋ ಆರತಕ್ಷತೆಗೆ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ ಸಿದ್ಧವಾಗುತ್ತಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಈ ಪ್ಯಾಲೇಸ್‌ನಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದು, ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜಕೀಯ ಮುಖಂಡರು, ಉದ್ಯಮಿಗಳು ಕೂಡ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

ತರುಣ್ ಸುಧೀರ್ ನಿರ್ದೇಶಿಸುತ್ತಿದ್ದ 'ರಾಬರ್ಟ್' ಸಿನಿಮಾದಲ್ಲಿ ಸೋನಾಲ್ ಮಾಂಥೆರೋ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ತರುಣ್ ಸುಧೀರ್ ಹಾಗೂ ಸೋನಾಲ್‌ಗೆ ಪರಿಚಯವಾಗಿತ್ತು. ದರ್ಶನ್‌ ಬಳಗದ ಜೊತೆ ಸೋನಾಲ್ ಮಾಂಥೆರೋ ಆತ್ಮೀಯರಾಗಿದ್ದರು. ಹೀಗಾಗಿ ಇಬ್ಬರ ವಿಷಯ ದರ್ಶನ್‌ಗೆ ಮೊದಲೇ ಗೊತ್ತಿತ್ತು. ಈ ಕಾರಣಕ್ಕೆ ಆಗಾಗ ದರ್ಶನ್ ಇವರಿಬ್ಬರ ಕಾಲೆಳೆಯುತ್ತಿದ್ದರು. ದರ್ಶನ್ ಕೊಟ್ಟ ಧೈರ್ಯದಿಂದಲೇ ಈ ಜೋಡಿ ಇಬ್ಬರ ಮನೆಯವರನ್ನು ಒಪ್ಪಿಸುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ನಿರ್ದೇಶಕ-ನಟಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ನಾಳೆ (ಆಗಸ್ಟ್ 11) ಹಿಂದೂ ಸಂಪ್ರದಾಯದಂತೆ ತರುಣ್ ಹಾಗೂ ಸೋನಾಲ್ ಮಾಂತೆರೋ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ. ಬಳಿಕ ಸೋನಾಲ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದರಿಂದ ಆ ಸಂಪ್ರದಾಯದಂತೆಯೂ ಮದುವೆ ಆಗಲಿದ್ದಾರೆ. ಸದ್ಯ ಹಳದಿ ಶಾಸ್ತ್ರದ ಫೋಟೊಗಳು ವೈರಲ್ ಆಗುತ್ತಿವೆ.

More from Filmibeat

English summary
Tharun Sudhir and Sonal Monteiro haldi celebration photos:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X