ತರುಣ್ ಸುಧೀರ್- ಸೋನಾಲ್ ಆರತಕ್ಷತೆಗೆ ಗಣ್ಯರ ದಂಡು; ಯಡಿಯೂರಪ್ಪ, ಹಂಸಲೇಖ ಸೇರಿ ಶುಭ ಹಾರೈಸಿದ ತಾರೆಯರು
ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ (ಆಗಸ್ಟ್ 11) ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮುನ್ನ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರಿಗಾಗಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಇಂದು (ಆಗಸ್ಟ್ 10) ಆರತಕ್ಷತೆ ಸಮಾರಂಭ ನಡೆದಿದೆ. ಸಿನಿಮಾ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದ ಮುಖಂಡರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ರೆಡ್ ರೋಸ್ ಹಾಗೂ ಸಿಲ್ವರ್ ಥೀಮ್‌ನಲ್ಲಿ ವೇದಿಕೆಯನ್ನು ಅಲಂಕಾರ ಮಾಡಲಾಗಿತ್ತು. ಸಿನಿಮಾದ ಇವೆಂಟ್ ನಡೆಯುವ ಶೈಲಿಯಲ್ಲಿಯೇ ಈ ವೇದಿಕೆಯನ್ನು ನಿರ್ಮಾಣ ಮಾಡಲಾಗಿತ್ತು. ಇದರ ಮಧ್ಯೆ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಅವರ ಬಾಲ್ಯದ ಫೋಟೊಗಳಿಂದ ಹಿಡಿದು ಇಲ್ಲಿವರೆಗಿನ ವಿಶೇಷವಾದ ಫೋಟೊಗಳನ್ನು ವೇದಿಕೆ ಮೇಲೆ ಇರಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ನಾದಬ್ರಹ್ಮ ಹಂಸಲೇಖ, ಹಿರಿಯ ನಟಿ ಮಾಲಾಶ್ರೀ ಸೇರಿದಂತೆ ಹಿರಿಯ ಕಲಾವಿದರು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇವರೊಂದಿಗೆ ಕೆ.ಮಂಜು, ಅನಿರುದ್ಧ್ ಜತ್ಕರ್, ಸಂತೋಷ್ ಆನಂದ್ರಾಮ್, ರವಿಶಂಕರ್ ಗೌಡ, ಪವನ್ ಒಡೆಯರ್, ಕಾರುಣ್ಯ ರಾಮ್, ಉಮಾಪತಿ ಶ್ರೀನಿವಾಸ್ ಗೌಡ, ಹರ್ಷಿಕಾ ಪೂಣಚ್ಚ ಹಲವು ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿ ಶುಭ ಹಾರೈಸಿದ್ದಾರೆ.
ಎರಡು ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ತರುಣ್ ಸುಧೀರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತರುಣ್ ಸುಧೀರ್ ಹೊಸ ಬದುಕಿಗೆ ಕಾಲಿಡುತ್ತಿರುವ ಬೆನ್ನಲೇ ಗಣ್ಯರು ಆಗಮಿಸುತ್ತಿದ್ದಾರೆ. ಇನ್ನು ತರುಣ್‌ಗೆ ಗಾಡ್ ಫಾದರ್ ಆಗಿರುವ ದರ್ಶನ್ ಜೈಲಿನಲ್ಲಿ ಇದ್ದಾರೆ. ಹೀಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮೊದಲ ಆಮಂತ್ರಣ ಪತ್ರಿಕೆ ನೀಡಿದ್ದರು. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ಬಂದು ಆಶೀರ್ವಾದ ಮಾಡುತ್ತಾರಾ? ಅನ್ನೋ ಕುತೂಹಲವಿದೆ.


Click it and Unblock the Notifications











