ನಮ್ಮ ಮೆಟ್ರೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಮೆರವಣಿಗೆ.. ಚರಿತ್ರೆ ಸೃಷ್ಟಿಸಿದ‌ ಕನ್ನಡದ ದಂತಕಥೆ

ಕಳೆದ ಕೆಲವು ದಿನಗಳಿಂದ ರಾಕಿಂಗ್ ಸ್ಟಾರ್ ಯಶ್ ಅಪ್‌ ಕಮ್ಮಿಂಗ್ ಸಿನಿಮಾ ಟಾಕ್ಸಿಕ್‌ ಬಗ್ಗೆ ಅಪ್‌ಡೇಟ್ ಸಿಗುತ್ತಿದೆ. ಸಿನಿಮಾದ ಒಂದೊಂದು ಪಾತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗುತ್ತಿದೆ. ಈಗ ಯಶ್ ಬರ್ತ್‌ಡೇಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಯಶ್ ಆಪ್ತರು, ಸ್ನೇಹಿತರೆಲ್ಲರೂ ಸೇರಿಕೊಂಡು ರಾಕಿಭಾಯ್ ಹಾಗೂ ಅವರ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನು ಕೊಟ್ಟಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಇದೇ ತಿಂಗಳು 8ರಂದು (ಜನವರಿ) ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. 40ನೇ ವಸಂತಕ್ಕೆ ಕಾಲಿಡುತ್ತಿರುವ ರಾಕಿ ಭಾಯ್‌ಗೆ ಬರ್ತ್‌ಡೇ ಗ್ರ್ಯಾಂಡ್ ಆಗಿ ಆಚರಣೆ ಮಾಡುವುದಕ್ಕೆ ಅವರ ಸ್ನೇಹಿತರು ನಿರ್ಧರಿಸಿದ್ದಾರೆ. ಈ ದಿನ ಯಶ್ ಕಡೆಯಿಂದಲೂ ತಮ್ಮ ಅಭಿಮಾನಿಗಳಿಗೆ ಭಾರೀ ಸರ್ಪ್ರೈಸ್ ಸಿಗುವ ಸಾಧ್ಯತೆಗಳಿವೆ. ಟಾಕ್ಸಿಕ್‌ನಿಂದ ಹಿಡಿದು ಹೊಸ ಸಿನಿಮಾಗಳ ಅನೌನ್ಸ್‌ಮೆಂಟ್ ಆಗುವ ನಿರೀಕ್ಷೆಯಿದೆ.

The first ever in the history of Bengaluru Metro takeover Yash Birthday celebration

ಸದ್ಯ ಯಶ್ 'ಟಾಕ್ಸಿಕ್' ಕಡೆಗೆ ಫೋಕಸ್ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿನಿಮಾ ಪ್ರಚಾರವನ್ನು ಅಧಿಕೃತವಾಗಿ ಆರಂಭ ಮಾಡಿದ್ದಾರೆ. ತಮ್ಮ ಬರ್ತ್‌ಡೇ ಸಂಭ್ರಮದಿಂದಲೇ 'ಟಾಕ್ಸಿಕ್' ಪ್ರಮೋಷನ್ ಶುರುವಾಗಿದೆ. ಈಗಾಗಲೇ ಸಿನಿಮಾದಲ್ಲಿರುವ ನಾಯಕಿಯರ ಫಸ್ಟ್‌ ಲುಕ್ ರಿಲೀಸ್ ಮಾಡಿ ಕಿಕ್ ಕೊಟ್ಟಿರುವ ಟೀಮ್‌, ಯಶ್‌ ಬರ್ತ್‌ಡೇ ದಿನ ಏನು ಸರ್ಪ್ರೈಸ್ ಕೊಡಬಹುದೆಂದು ಎದುರು ನೋಡುತ್ತಿದ್ದಾರೆ. ಅದಕ್ಕೂ ಮೊದಲು ಮೆಟ್ರೋ ರೈಲಿನ ಮೇಲೆ ಯಶ್‌ ಪೋಸ್ಟರ್ ರಾರಾಜಿಸುತ್ತಿದ್ದು, ಯಾವ ಮಾರ್ಗ? ಖರ್ಚು ಎಷ್ಟಾಯ್ತು? ಎಕ್ಸ್‌ಕ್ಲೂಸೀವ್ ಆರು ಕೋಚ್‌ಗಳ ಡಿಸೈನ್ ಇಲ್ಲಿದೆ.

ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲು

ಜನವರಿ 8ರಂದು ರಾಕಿ ಭಾಯ್ 40ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಗೆಳೆಯರಿಂದ ಅಚ್ಚರಿ ಉಡುಗೊರೆ ನೀಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಮೆಟ್ರೋ ಮೇಲೆ ಗೆಳೆಯ ರಾಕಿಭಾಯ್ ಅನ್ನು ರಾರಾಜಿಸಿದ್ದಾರೆ. ಇದು ಬೆಂಗಳೂರು ಮೆಟ್ರೋ ಇತಿಹಾಸದಲ್ಲಿಯೇ ಮೊದಲು. ಈಗಾಗಲೇ ರಾಕಿ ಭಾಯ್ ಪೋಸ್ಟರ್ ಅನ್ನು ಹೊತ್ತ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಿದೆ.

ಪೋಸ್ಟರ್‌ಗೆ ತೆಗುಲಿದ ಖರ್ಚು ಎಷ್ಟು?

ರಾಕಿಂಗ್ ಸ್ಟಾರ್ ಯಶ್ ಸ್ನೇಹಿತರೆಲ್ಲ ಸೇರಿಕೊಂಡು ಬೆಂಗಳೂರಿನ ನೇರಳೆ ಬಣ್ಣ ಅಂದರೆ, ಮೈಸೂರು ರಸ್ತೆಯಿಂದ ವೈಟ್‌ಫೀಲ್ಡ್ ಮಾರ್ಗದ ಬೋಗಿಗಳ ಮೇಲೆ ಬೃಹತ್ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ಆಪ್ತರು ನೀಡಿರುವ ಮಾಹಿತಿ ಪ್ರಕಾರ ಈ ಪೋಸ್ಟರ್‌ಗಾಗಿ ಅವರ ಸ್ನೇಹಿತರು ಸುಮಾರು ₹10 ರಿಂದ 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

The first ever in the history of Bengaluru Metro takeover Yash Birthday celebration

6 ಕೋಚ್‌ಗಳ ಡಿಸೈನ್ ಹೇಗಿದೆ?

ಮೈಸೂರು ರಸ್ತೆಯಿಂದ ವೈಟ್‌ಫೀಲ್ಡ್ ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ರೈಲಿನಲ್ಲಿ 6 ಬೋಗಿಗಳಿವೆ. ಒಂದು ಬೋಗಿಯ ಉದ್ದ 20 ರಿಂದ 22 ಮೀಟರ್ ಇದ್ದು, 6 ಬೋಗಿಗಳ ಉದ್ದ ಅಂದಾಜು 120 ರಿಂದ 130 ಮೀಟರ್ ಇದೆ ಎಂದು ವರದಿಯಾಗಿದೆ. ಹೀಗಾಗಿ ಈ ಆರು ಬೋಗಿಗಳಿಗೂ ವಿಶಿಷ್ಠವಾಗಿ ಡಿಸೈನ್ ಅನ್ನು ಮಾಡಲಾಗಿದೆ. ಅದರ ಎಕ್ಸ್‌ಕ್ಲೂಸಿವ್ ಡಿಸೈನ್ ಇಲ್ಲಿದೆ.

'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಾ?

ರಾಕಿಂಗ್ ಸ್ಟಾರ್ ಬರ್ತ್‌ಡೇಗೆ ಅವರ ಅಭಿಮಾನಿಗಳಿಗೆ ಯಶ್ ಸರ್ಪ್ರೈಸ್ ಕೊಡುತ್ತಾರಾ? ಈ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇದೆ. ಯಾಕಂದ್ರೆ, ಬ್ಯಾಕ್ ಟು ಬ್ಯಾಕ್ 'ಟಾಕ್ಸಿಕ್' ನಾಯಕಿಯರ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಹೀಗಾಗಿ ಯಶ್‌ ಬರ್ತ್‌ಡೇಯಂದು ರಾಕಿ ಭಾಯ್‌ಯ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಬಹುದೆಂಬ ನಿರೀಕ್ಷೆಯಿದೆ. ಸದ್ಯ ಯಶ್ ಟೀಮ್ ಈ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

More from Filmibeat

English summary
The first ever in the history of Bengaluru Metro takeover Yash Birthday celebration.
Read more about: yash toxic birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X