'ಸ್ತ್ರೀ 2' ಸಿನಿಮಾದ ನಟ 7.8 ಅಡಿ ಎತ್ತರದ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ; ಯಾವುದು ಆ ಸಿನಿಮಾ?

ಬಾಲಿವುಡ್‌ನಲ್ಲಿ ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್ ನಟಿಸಿದ್ದ 'ಸ್ತ್ರೀ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಈ ಸಿನಿಮಾದಲ್ಲಿ ಇವರಿಬ್ಬರ ಜೊತೆ ಮತ್ತೊಬ್ಬ ನಟ ಕೂಡ ಫೇಮಸ್ ಆಗಿದ್ದರು. ಇವರ ಹೈಟ್‌ ಕಂಡು ಬಾಲಿವುಡ್ ಮಂದಿನೇ ಬೆರಗಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ನಟನೊಂದಿಗೆ ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್, ತಮನ್ನಾ ಭಾಟಿಯಾ ನಿಂತು ಫೋಟೋ ತೆಗೆಸಿಕೊಂಡಿದ್ದು ವೈರಲ್ ಆಗಿತ್ತು. ಅಂದ್ಹಾಗೆ ಈ ನಟನ ಹೆಸರು ಸುನೀಲ್ ಕುಮಾರ್. 7.8 ಅಡಿ ಎತ್ತರವಿರುವ ಈ ನಟ ಜಮ್ಮು ಮತ್ತು ಕಾಶ್ಮೀರದ ನಟ. ಬಾಲಿವುಡ್‌ನಲ್ಲಿ ಈ ನಟ ಈಗ ಭಾರಿ ಫೇಮಸ್ ಆಗಿದ್ದಾರೆ.

The Great Khali of Jammu Sunil Kumar who is 7 8 feet tall actor came for Forest Kannada Movie

'ಸ್ತ್ರೀ 2' ಸಿನಿಮಾದಲ್ಲಿ ಸರ್ಕಟ್ ಎಂಬ ಪಾತ್ರದಲ್ಲಿ ಸುನೀಲ್ ಕುಮಾರ್ ನಟಿಸಿದ್ದರು. ಖಳನಾಯಕ ಪಾತ್ರದಲ್ಲಿ ಹಿಂದಿ ಪ್ರೇಕ್ಷಕರ ಮನಗೆದ್ದಿದ್ದರು. ಇದೇ ನಟನೀಗ ಕನ್ನಡಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಅದ್ಯಾವ ಸಿನಿಮಾ? ಪಾತ್ರವೇನು? ಅಂತ ಹೇಳುವುದಕ್ಕೂ ಮುನ್ನ ಈ ನಟನ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಇಲ್ಲಿದೆ.

ನಟ ಸುನೀಲ್ ಕುಮಾರ್ ಅವರನ್ನು 'ದಿ ಗ್ರೇಟ್ ಕಲಿ ಆಫ್ ಜಮ್ಮು' ಎಂದೇ ಕರೆಯುತ್ತಾರೆ. 7.8 ಅಡಿ ಎತ್ತರ ಇರುವ ಇವರ ಪರ್ಸನಾಲಿಟಿ ಸಿನಿಮಾ ಮಂದಿಯ ಗಮನ ಸೆಳೆಯುತ್ತಿದೆ. ಹಾಗಂತ ಸುನೀಲ್ ಕುಮಾರ್ ಕೇವಲ ನಟನಷ್ಟೇ ಅಲ್ಲ. ಮೂಲತ: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಧ್ಯೆ ಅವಕಾಶ ಸಿಕ್ಕಾಗಲೆಲ್ಲ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

'ಸ್ತ್ರೀ 2' ಸಿನಿಮಾದಲ್ಲಿ ನಟಿಸಿದ ಬಳಿಕ ಇವರ ಕ್ರೇಜ್ ನೋಡಿ ಬಿಗ್‌ಬಾಸ್ ಹಿಂದಿ ಸೀಸನ್‌ಗೂ ಆಫರ್ ಕೊಟ್ಟಿರುವ ಬಗ್ಗೆ ಸುದ್ದಿಯಿದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸುನೀಲ್ ಕುಮಾರ್‌ಗೆ ರಜೆಗಳ ಕೊರತೆಯಿದೆ. ಈ ಕಾರಣಕ್ಕೆ ಬಿಗ್‌ಬಾಸ್ ಮನೆಗೆ ಹೋಗುವುದು ಅಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದೇ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದ್ಯಾವಾಗ ಸಿನಿಮಾ ಅಂದರೆ, ಅದುವೇ 'ಫಾರೆಸ್ಟ್'.

The Great Khali of Jammu Sunil Kumar who is 7 8 feet tall actor came for Forest Kannada Movie

ಸುನೀಲ್ ಕುಮಾರ್‌ಗೆ ಆಫರ್‌ಗಳ ಮೇಲೆ ಆಫರ್ ಬರುತ್ತಿದೆಯಂತೆ. ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಸಿನಿಮಾಗೂ ಮಾತುಕತೆ ನಡೆಯುತ್ತಿದೆ ಎಂದು ಸಂದರ್ಶನವೊಂದರಲ್ಲಿ ಇವರೇ ಹೇಳಿಕೊಂಡಿದ್ದಾರೆ. ಆದರೆ, ಅದಕ್ಕೂ ಮುನ್ನ 'ದಿ ಗ್ರೇಟ್ ಕಲಿ ಆಫ್ ಜಮ್ಮು' ಸುನೀಲ್ ಕುಮಾರ್ ಕನ್ನಡಕ್ಕೆ ಕಾಲಿಟ್ಟಾಗಿದೆ. ಈಗಾಗಲೇ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿರುವ ದೃಶ್ಯಗಳಲ್ಲಿ ಏಳು ದಿನ ಶೂಟಿಂಗ್ ಕೂಡ ಮಾಡಿದ್ದಾರೆ. 'ಫಾರೆಸ್ಟ್' ಸಿನಿಮಾಗೆ ಚಂದ್ರಮೋಹನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಫಾರೆಸ್ಟ್' ಸಿನಿಮಾದಲ್ಲಿ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಹುತೇಕ ದೃಶ್ಯಗಳನ್ನು ಕಾಡಿನಲ್ಲಿಯೇ ಚಿತ್ರೀಕರಣ ಮಾಡಿರುವುದು ಮತ್ತೊಂದು ವಿಶೇಷ. ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ 'ದಿ ಗ್ರೇಟ್ ಕಲಿ ಆಫ್ ಜಮ್ಮು' ಸುನೀಲ್ ಕುಮಾರ್ ಕೂಡ ನಟಿಸುತ್ತಿದ್ದಾರೆ.

ಈ ಸಿನಿಮಾವನ್ನು ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಕಡೆಯಲ್ಲೆಲ್ಲ ಚಿತ್ರೀಕರಣ ಮಾಡಲಾಗಿದೆ. ಸುಮಾರು 80 ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಜೊತೆ ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ ಸೇರಿದಂತೆ ಹಲವರು 'ಫಾರೆಸ್ಟ್' ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
The Great Khali of Jammu Sunil Kumar who is 7.8 feet tall actor came for Forest Kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X