"ನಾನು ರಮ್ಯಾ ಅವರ ಮೇಲೆ ಕೇಸ್ ಹಾಕ್ತೀನಿ"; ದೂದ್ ಪೇಡಾ ದಿಗಂತ್ ಈ ನಿರ್ಧಾರಕ್ಕೆ ಬಂದಿದ್ದೇಕೆ?
ದೂದ್ ಪೇಡಾ ದಿಗಂತ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವಾರ ಕ್ರೇಜಿಸ್ಟಾರ್ ಜೊತೆ ನಟಿಸಿರುವ 'ದಿ ಜಡ್ಜ್‌ಮೆಂಟ್' ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೂದ್ ಪೇಡಾ ಸಂದರ್ಶನಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಮೋಹಕತಾರೆ ರಮ್ಯಾ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
ದಿಗಂತ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಶೈಲಿ ಬದಲಾಗಿದೆ. ಒಮ್ಮೆ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದರೆ, ಮತ್ತೊಮ್ಮೆ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನೊಮ್ಮೆ ಕೋರ್ಟ್ ರೂಮ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಹೀಗಾಗಿ ಮದುವೆ ಬಳಿಕ ದಿಗಂತ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಪರಿ ಬದಲಾಗಿದ್ದನ್ನು ಅವರ ಅಭಿಮಾನಿಗಳು ಕೂಡ ಗಮನಿಸುತ್ತಿದ್ದಾರೆ.

ಈಗ 'ದಿ ಜಡ್ಜ್‌ಮೆಂಟ್' ಸಿನಿಮಾ ಬಿಡುಗಡೆಗೆ ಸಜ್ಜಾಗಿವೆ. ಇದರಲ್ಲೂ ಪ್ರಮುಖ ಪಾತ್ರವೊಂದರಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ನಿರೂಪಕ ಗೌರೀಶ್ ಅಕ್ಕಿ, ನಟ ದಿಗಂತ್‌ಗೆ ನೀವು ಲಾಯರ್ ಅಥವಾ ಜಡ್ಜ್ ಆದರೆ, ಯಾರ ಮೇಲೆ ಕೇಸ್ ಹಾಕುವುದಕ್ಕೆ ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ದಿಗಂತ್ ರಮ್ಯಾ ಹೆಸರು ತೆಗೆದಿದ್ದಾರೆ. ಅದ್ಯಾಕೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..
ರಿಲೀಸ್‌ಗೆ ರೆಡಿಯಾಗಿರುವ ದಿಗಂತ್ ಸಿನಿಮಾದ ಹೆಸರೇ 'ದಿ ಜಡ್ಜ್‌ಮೆಂಟ್'. ಹೀಗಾಗಿ ಇದೊಂದು ಕೋರ್ಟ್ ರೂಮ್ ಡ್ರಾಮ ಅನ್ನೋದನ್ನು ಸುಲಭವಾಗಿ ಹೇಳಬಹುದು. ಹೀಗಾಗಿ ನಿರೂಪಕ ಗೌರೀಶ್ ಅಕ್ಕಿ ತಮಾಷೆಯಾಗಿ ನೀವು ಕೇಸ್ ಹಾಕುವ ಹಾಕಿದ್ದರೆ, ಯಾರ ಮೇಲೆ ಹಾಕುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ದಿಗಂತ್ ಮೋಹಕತಾರೆ ರಮ್ಯ ಹೆಸರು ತೆಗೆದು ಕೊಟ್ಟ ಉತ್ತರ ಮಜವಾಗಿದೆ.
"ನಾನು ನಿಜ ಜೀವನದಲ್ಲಿ ಲಾಯರ್ ಆಗಿದ್ದರೆ, ನಾನು ರಮ್ಯಾ ಅವರನ್ನು ಕರೆದು ಕೇಳುತ್ತೇನೆ. ಯಾಕೆ ನೀವು ಕಾಂಗ್ರೆಸ್ ಪಾರ್ಟಿಯಿಂದ ಹೊರಬಂದ್ರಿ ಅಂತ. ಅವರು ಇನ್ಫೋರ್ಮೆಷನ್ ಹೆಡ್ ಏನೋ ಆಗಿದ್ದರಂತಲ್ಲ. ಅದನ್ನು ಯಾಕೆ ಬಿಟ್ಟು ಬಂದ್ರಿ ಅಂತ. ಜನಕ್ಕೆ ಹೋಪ್ಸ್ ಇತ್ತಲ್ಲ. ರಮ್ಯಾ ಅವರು ಏನೋ ಬದಲಾವಣೆ ಮಾಡುತ್ತಾರೆ ಅಂತ." ಎಂದು ದಿಗಂತ್, ರಮ್ಯಾ ಬಗ್ಗೆ ತಮಾಷೆಯಾಗಿ ಮಾತಾಡಿದ್ದಾರೆ.

ಇನ್ನು ರಮ್ಯಾ ಹಾಗೂ ದಿಗಂತ್ ಇಬ್ಬರೂ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸದೇ ಇದ್ದರೂ, ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇಬ್ಬರ ಒಳ್ಳೆಯ ಗೆಳೆಯರು. ತಮಾಷೆಯ ಪ್ರಶ್ನೆ ದಿಗಂತ್ ಅಷ್ಟೇ ಮಜವಾಗಿ ಉತ್ತರ ಕೊಟ್ಟಿದ್ದಾರೆ. "ನಾನು ಅವರೊಂದಿಗೆ ಎರಡು ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ್ದೆ. ಮೀರಾ ಮಾಧವ ರಾಘವ ಅಂತ ಸಿನಿಮಾ, ಕೋರ್ಟ್ ರೂಮ್ ಡ್ರಾಮಾ ಕಿಂಗ್ ಟಿ ಎನ್ ಸೀತಾರಾಮ್ ನಿರ್ದೇಶನದಲ್ಲಿ ಆ ಸಿನಿಮಾ ಮಾಡಿದ್ವಿ. ಆ ಮೇಲೆ ನಾಗರಹಾವು ಅಂತ ಸಿನಿಮಾ ಮಾಡಿದ್ವಿ." ಎಂದು ಆ ಎರಡು ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಬಾಲಿವುಡ್ ಸಿನಿಮಾದ ಶೂಟಿಂಗ್ ವೇಳೆ ನಾಯಕಿಯಿಂದ ಕಣ್ಣಿಗೆ ಪೆಟ್ಟು ಮಾಡಿಕೊಂಡ ಘಟನೆಯನ್ನು ವಿವರಿಸಿದ್ದಾರೆ. ತನ್ನದೇನು ತಪ್ಪು ಇರದೆ, ಕಣ್ಣು ಕಳೆದುಕೊಂಡ ಕ್ಷಣವನ್ನು ಡಿಟೈಲ್ ಆಗಿದ್ದಾರೆ ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ನನಗೆ ಶೂಟಿಂಗ್ ಮಾಡಬೇಕಾದರೆ ಕಣ್ಣಿಗೆ ಏಟಾಯ್ತು. ಆಗ ಅನಿಸೋದು ನಾನು ಯಾರಿಗೂ ಏನೂ ತಪ್ಪು ಮಾಡಿಲ್ಲ. ನನಗೆ ಯಾಕೆ ಹೀಗಾಗಬೇಕಿತ್ತು. ಒಂದು ಸೀನ್‌ನಲ್ಲಿ ನನ್ನ ಕೋ ಸ್ಟಾರ್ ಆ ದೃಶ್ಯದಲ್ಲಿ ನನ್ನ ಮೇಲೆ ಕೋಪ ಮಾಡಿಕೊಂಡಿರಬೇಕು. ಅದೊಂದು ಹೋಟೆಲ್ ರೂಮ್, ಅಲ್ಲಿ ಬಾಗಿಲು ತೆಗೆದು ಬಟ್ಟೆ ಎಸೆದು ನನ್ನನ್ನು ಆಚೆ ಹಾಕಬೇಕಿತ್ತು. ಅಷ್ಟೇ ಇತ್ತು ಸೀನ್. ಆಕೆಗೆ ಮಾಡೋಕೆ ಬರುತ್ತಿಲ್ಲ. 15-20 ಟೇಕ್ ಆಯ್ತು. ಡೈರೆಕ್ಟರ್ ಸ್ವಲ್ಪ ಕೋಪ ಮಾಡಿಕೊಂಡರು. ಟೈಮ್ ಆಗುತ್ತಿತ್ತು. ರಿಯಲ್ ಕೋಪ ತೋರಿಸುವುದಕ್ಕೆ ಹೋಗಿ ಬಟ್ಟೆ ಎಸೆದ ಮೇಲೆ ಇನ್ನೂ ಏನಾದರೂ ಎಸೆಯುವುದಕ್ಕೆ ಹೋಗಿದ್ದಾರೆ. ಆಗ ಅವರಿಗೆ ಪಾಯಿಂಟ್ ಇರುವ ಶೂ ಸಿಕ್ಕಿದೆ. ಅದನ್ನು ತೆಗೆದು ಎಸೆದರು. ಸಡನ್ ಆಗಿ ಬಂದು ಕಣ್ಣಿಗೆ ಹೊಡೀತು. ಆಗ ಅನಿಸುತ್ತೆ. ನಾನೇನು ತಪ್ಪು ಮಾಡಿದ್ದೆ ಅಂತ." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











