twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಮತ್ತೆ ಜೀವ ಬಂತು: ಸಿನಿಮಾ ಹಬ್ಬ ಯಾವಾಗ?

    |

    ಸಿನಿಪ್ರಿಯರಿಗೆ ಚಲನ ಚಿತ್ರೋತ್ಸವ ಹಬ್ಬ ಇದ್ದಂತೆ. ಸಿನಿಮಾ ನಿರ್ಮಾಣ ಮಾಡುವವರಿಗೆ ಹಾಗೂ ಸಿನಿಮಾ ನೋಡುವವರಿಗೆ ಚಿತ್ರೋತ್ಸವದಲ್ಲಿ ಭಾಗವಹಿಸುವುದೇ ಒಂದು ಹೆಮ್ಮೆ. ಸಿನಿಮಾ ಆಸಕ್ತರಿಗೆ ಪ್ರೋತ್ಸಾಹಿಸಲೆಂದೇ ವಿಶ್ವದಲ್ಲಿ ಸಾಕಷ್ಟು ಫಿಲ್ಮ್ ಫೆಸ್ಟಿವಲ್‌ಗಳು ನಡೆಯುತ್ತಲೇ ಇರುತ್ತವೆ. ಇಂತಹ ಚಲನ ಚಿತ್ರೋತ್ಸವದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಕೂಡ ಒಂದು.

    ಪ್ರತಿ ವರ್ಷದಂತೆ ಕಳೆದ ವರ್ಷ ಕೂಡ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದಾಗಿ ಈ ಚಿತ್ರೋತ್ಸವ ನಡೆಯಲಿಲ್ಲ. ಇದು ಸಿನಿಪ್ರಿಯರನ್ನು ಇನ್ನಿಲ್ಲದಂತೆ ಕಾಡಿತ್ತು. ಆದ್ರೀಗ ಮತ್ತೆ ಈ ಚಿತ್ರೋತ್ಸವವನ್ನು ನಡೆಸಲು ಚಲನ ಚಿತ್ರ ಅಕಾಡೆಮಿ ಮುಂದಾಗಿದೆ. ಹಾಗಿದ್ದರೆ, ಈ ಚಿತ್ರೋತ್ಸವ ಆರಂಭ ಯಾವಾಗ? ಸಿನಿಮಾ ಕಳುಹಿಸಲು ಕೊನೆಯ ದಿನ ಎಂದು? ಇಂತಹ ಮಾಹಿತಿಗಾಗಿ ಮುಂದೆ ಓದಿ.

    2022 ಫೆಬ್ರವರಿಯಲ್ಲಿ ನಡೆಯಲಿದೆ ಚಲನಚಿತ್ರೋತ್ಸವ

    2022 ನೇ ಫೆಬ್ರವರಿ ತಿಂಗಳಲ್ಲಿ 13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಸಿನಿಮಾಗಳನ್ನು ಕಳುಹಿಸಲು ಆಹ್ವಾನ ನೀಡಲಾಗಿದೆ. ಏಷಿಯನ್ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಕನ್ನಡ ಸೇರಿದಂತೆ ಕರ್ನಾಟಕದ ಉಪಭಾಷೆಯ ಸಿನಿಮಾಗಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಶಸ್ತಿ ವಿಜೇತ ಚಲನಚಿತ್ರಕ್ಕೆ ನಗದು, ಸ್ಮರಣ ಫಲಕದ ಜೊತೆಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ.

     The prestigious 13th Bengaluru international film festival will start on February 2022

    ಚಲನ ಚಿತ್ರೋತ್ಸವದ ನಿಯಮಗಳೇನು?

    13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರವೇಶ ಪಡೆಯಲು ಕೆಲವು ನಿಯಮಗಳೂ ಕೂಡ ಇವೆ. ಚಿತ್ರೋತ್ಸವಕ್ಕೆ ಕಳುಹಿಸುವ ಸಿನಿಮಾಗಳು ಜನವರಿ 01, 2021 ರಿಂದ 30 ನವೆಂಬರ್ 2021 ರ ಅವಧಿಯಲ್ಲಿ ನಿರ್ಮಾಣಗೊಂಡ ಸಿನಿಮಾವಾಗಿರಬೇಕು. ಸಿನಿಮಾಗಳು 70 ನಿಮಿಷದ ಅವಧಿಯ ಚಲನಚಿತ್ರವಾಗಿರಬೇಕು. ಕನ್ನಡ ಹಾಗೂ ಕರ್ನಾಟಕದ ಉಪಭಾಷೆಗಳಲ್ಲಿ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಸಿನಿಮಾ ನಿರ್ಮಾಣದ ದಿನಾಂಕವನ್ನು ನೀಡಬೇಕು. ಭಾರತ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ನೀಡಿದ ದಿನಾಂಕವನ್ನೇ ಗಣನೆಗೆ ತೆಗೆದುಕೊಳ್ಳಲಾಗುವುದೆಂದು ತಿಳಿಸಲಾಗಿದೆ.

     The prestigious 13th Bengaluru international film festival will start on February 2022

    ಸಿನಿಮಾ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

    13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಸಿನಿಮಾಗಳನ್ನು ಸಲ್ಲಿಸಲು ಕೊನೆ ದಿನಾಂಕವನ್ನೂ ತಿಳಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಸಿನಿಮಾಗಳು ಡಿಸೆಂಬರ್ 27, 2021ರ ಒಳಗೆ ತಲುಪಬೇಕು. ಚಲನಚಿತ್ರಗಳನ್ನು ಸಲ್ಲಿಸಲು ಅನುಸರಿಸಬೇಕಾದ ನಿಯಮಾವಳಿ ಹಾಗೂ ಮಾರ್ಗಸೂಚಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ Biffes.org ನಲ್ಲಿ ನೀಡಲಾಗಿದೆ.

    English summary
    The prestigious Bengaluru film festival will start on February 2022. December 27, 2021 last date to submit films.
    Friday, December 17, 2021, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X