ಮೈನ್ ಥಿಯೇಟರ್ ಗಳಲ್ಲಿ ಜಾತ್ರೆ : 'ನರ್ತಕಿ'ಯಲ್ಲಿ 5 ಶೋ ಟಿಕೆಟ್ ಸೋಲ್ಡ್ ಔಟ್!

Recommended Video

the villain : ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್! | Filmibeat Kannada

ಒಂದು ಕಡೆ ದಸರಾ ಸಂಭ್ರಮ ಆದ್ರೆ, ಇನ್ನೊಂದು ಕಡೆ 'ದಿ ವಿಲನ್' ಸಿನಿಮಾದ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ. 'ದಿ ವಿಲನ್' ಸಿನಿಮಾದ ಟಿಕೆಟ್ ಗೆ ಈಗ ದೊಡ್ಡ ಬೇಡಿಕೆ ಸೃಷ್ಟಿಯಾಗಿದೆ.

ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ ಈ ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಅನೇಕ ಪ್ರಶ್ನೆಗಳಿವೆ, ಸಾಕಷ್ಟು ಕುತೂಹಲವಿದೆ. ಈ ಎಲ್ಲ ಪ್ರಶ್ನೆಗಳಿಗೆ ಎರಡು ದಿನಗಳಲ್ಲಿ ಉತ್ತರ ಸಿಗಲಿದೆ. ಅನೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಪ್ರದರ್ಶನ ಶುರು ಆಗಲಿದೆ.

ಗಾಂಧಿನಗರದ ಮೂರು ಚಿತ್ರಮಂದಿರಗಳಲ್ಲಿ 'ದಿ ವಿಲನ್' ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಕೆ ಜಿ ರಸ್ತೆಯ ಎರಡು ಮುಖ್ಯ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಮುಂದೆ ಓದಿ...

ಗಾಂಧಿನಗರದಲ್ಲಿ ಎರಡು ಚಿತ್ರಮಂದಿರ

ಗಾಂಧಿನಗರದಲ್ಲಿ ಎರಡು ಚಿತ್ರಮಂದಿರ

ಈ ಹಿಂದೆ 'ದಿ ವಿಲನ್' ಸಿನಿಮಾ ಗಾಂಧಿನಗರದ ಸಂತೋಷ್, ನರ್ತಕಿ ಹಾಗೂ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಗಾಂಧಿನಗರದ ನರ್ತಕಿ ಹಾಗೂ ತ್ರಿವೇಣಿ ಥಿಯೇಟರ್ ನಲ್ಲಿ ಮಾತ್ರ 'ದಿ ವಿಲನ್' ತೆರೆಗೆ ಬರುತ್ತಿದೆ. ಸಂತೋಷ್ ಚಿತ್ರಮಂದಿರದಲ್ಲಿ 'ದಿ ಟೆರರಿಸ್ಟ್' ರಿಲೀಸ್ ಆಗುತ್ತಿದೆ.

'ವಿಲನ್'ಗಾಗಿ ಇಡೀ ಥಿಯೇಟರ್ ಬುಕ್ ಮಾಡಿದ ಅಭಿಮಾನಿಗಳು
ನರ್ತಕಿ ಹೌಸ್ ಫುಲ್

ನರ್ತಕಿ ಹೌಸ್ ಫುಲ್

ನರ್ತಕಿ ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎನ್ನುವುದು ಅದೆಷ್ಟೋ ಅಭಿಮಾನಿಗಳ ಆಸೆಯಾಗಿತ್ತು. ಈಗಾಗಲೇ ನರ್ತಕಿ ಚಿತ್ರಮಂದಿರದಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮೊದಲ ದಿನದ ಐದೂ ಪ್ರದರ್ಶನದ ಟಿಕೆಟ್ ಗಳು ಮಾರಾಟವಾಗಿವೆ. ಚಿತ್ರಮಂದಿರ ಮುಂದೆ ಕಟ್ ಔಟ್ ಅಬ್ಬರ ಶುರುವಾಗಿದೆ.

ತ್ರಿವೇಣಿಯಲ್ಲಿ ಶುರುವಾಯ್ತು ಬುಕ್ಕಿಂಗ್

ತ್ರಿವೇಣಿಯಲ್ಲಿ ಶುರುವಾಯ್ತು ಬುಕ್ಕಿಂಗ್

ಇಂದಿನಿಂದ ಗಾಂಧಿನಗರದ ಮತ್ತೊಂದು ಚಿತ್ರಮಂದಿರವಾದ ತ್ರಿವೇಣಿಯಲ್ಲಿ ಬುಕ್ಕಿಂಗ್ ಶುರುವಾಗಿದೆ. ಇಲ್ಲಿಯೂ ಕೂಡ ಟಿಕೆಟ್ ಬಿಸಿ ಬಿಸಿ ದೋಸೆಯಂತೆ ಮಾರಾಟ ಆಗುತ್ತಿದೆ. ಹಾಗೆನಾದರೂ ನೀವು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವ ಆಸೆ ಇದ್ದರೆ, ಆದಷ್ಟು ಬೇಗ ಟಿಕೆಟ್ ಬುಕ್ ಮಾಡಿಕೊಳ್ಳಿ.

ಮಧ್ಯರಾತ್ರಿ ಶೋ ಶುರು

'ದಿ ವಿಲನ್' ಸಿನಿಮಾ ಗುರುವಾರ ಬಿಡುಗಡೆಯಾಗುತ್ತಿದೆ. ಆದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾವನ್ನು ಕರ್ನಾಟಕದ ಕೆಲವು ಭಾಗಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಶುರು ಮಾಡಲಾಗುತ್ತಿದೆ. ಮೈಸೂರು, ಹೊಸಪೇಟೆ, ಹುಬ್ಬಳ್ಳಿಯಲ್ಲಿ ಸಿನಿಮಾದ ಪ್ರದರ್ಶನ ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭ ಆಗಲಿದೆ.

More from Filmibeat

English summary
Actor Shivarajkumar and Sudeep starrer Kannada Movie 'The Villain' st day tickets sold out in nartaki theatre. The movie will be releasing on october 16th 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X