'ಕ' ಅಕ್ಷರದಿಂದಲೇ ಸಿನಿಮಾ ಟೈಟಲ್ ಆರಂಭ; ಹೊಸ ಪೋಸ್ಟರ್‌ಗಳು ಏನು ಹೇಳುತ್ತಿವೆ?

'ಯುಗಾದಿ' ಹಬ್ಬ ಸಿನಿಮಾ ಮಂದಿಗೂ ಸ್ಪೆಷಲ್. ಒಂದು ಕಾಲವಿತ್ತು. ಯುಗಾದಿ ಹಬ್ಬಕ್ಕೆ ಅಂತಲೇ ಸ್ಟಾರ್ ಸಿನಿಮಾಗಳು ಕ್ಯೂನಲ್ಲಿ ನಿಲ್ಲುತ್ತಿದ್ದವು. ಹೊಸ ವರ್ಷದ ಶುಭ ದಿನದಂದು ಸಿನಿಮಾ ರಿಲೀಸ್ ಮಾಡುವುದಕ್ಕೆ ತುದಿಗಾಗಲ್ಲಿ ನಿಲ್ಲುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಯುಗಾದಿಗೆ ಹೊಸ ಸಿನಿಮಾಗಳು ರಿಲೀಸ್ ಆಗೋದು ತೀರಾ ವಿರಳವಾಗಿಬಿಟ್ಟಿದೆ.

ಹಾಗಂತ ಸಂಭ್ರಮ ನಿಂತಿಲ್ಲ. ಸಿನಿಮಾ ತಂಡ ಹಬ್ಬಕ್ಕೆ ಹೊಸ ಹೊಸ ಪೋಸ್ಟರ್‌ಗಳನ್ನು ರಿಲೀಸ್ ಮಾಡಿ ಶುಭ ಕೋರುತ್ತಾರೆ. ಈ ಬಾರಿ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಯುಗಾದಿ ಹಬ್ಬ ಜೋರಾಗಿದೆ. ಫಿಲ್ಮ್ ಮೇಕರ್ಸ್ ತಮ್ಮ ಸಿನಿಮಾದ ಹೊಚ್ಚ ಹೊಸ ಪೋಸ್ಟರ್‌ಗಳನ್ನು ರಿಲೀಸ್ ಮಾಡುತ್ತಿವೆ. ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿವೆ.

ಬೇವು ಬೆಲ್ಲ ತಿಂದು ಹೊಸ ವರ್ಷದ ಆಚರಿಸುತ್ತಿರುವ ಈ ಸಂಭ್ರಮದಲ್ಲಿ ಕೆಲವು ಸಿನಿಮಾಗಳ ಪೋಸ್ಟರ್‌ಗಳು ಗಮನ ಸೆಳೆದಿವೆ. ವಿಶೇಷ ಏನಂದರೆ, ಆ ಎಲ್ಲಾ ಸಿನಿಮಾಗಳ ಪೋಸ್ಟರ್ 'ಕ' ದಿಂದಲೇ ಆರಂಭ ಆಗುತ್ತಿವೆ. ಅಂತಹ ಸಿನಿಮಾಗಳು ಯಾವುವು? ಆ ಪೋಸ್ಟರ್‌ನ ವಿಶೇಷತೆಯೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

These are the Kannada movie posters released on Ugadi festival 2024

ಧನಂಜಯ್ ಸಿನಿಮಾ 'ಕೋಟಿ'

ನಟ ರಾಕ್ಷಸ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾ 'ಕೋಟಿ'. ಯುಗಾದಿ ಹಬ್ಬಕ್ಕೆ ಈ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಜೊತೆ ಟೈಟಲ್ ರಿವೀಲ್ ಆಗಿದೆ. ವಿಶೇಷ ಅಂದರೆ, ಈ ಸಿನಿಮಾದ ಟೈಟಲ್ 'ಕ'ಯಿಂದಲೇ ಆರಂಭ ಆಗುತ್ತೆ. ಕಲರ್ಸ್ ಕನ್ನಡದ ಮಾಜಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 500 ರೂಪಾಯಿ ನೋಟನ್ನು ಮುಖಕ್ಕೆ ಅಂಟಿಸಿ ಮುಖವಾಡ ಮಾಡಿದ್ದು, ಕೋಟಿ ಕನಸು ಕಾಣುವ ಒಬ್ಬ ಕಾಮನ್‌ ಮ್ಯಾನ್‌ ಕಥೆ ಎಂದು ಹೇಳುವಂತಿದೆ. ಸದ್ಯ ಹೊಸ ವರ್ಷಕ್ಕೆ ಜಿಯೋ ಸಿನಿಮಾ ಹೊಸ ಆರಂಭ ಮಾಡಿದೆ. ಇದು ಜಿಯೋ ಸ್ಟುಡಿಯೋಸ್‌ನ ಮೊದಲ ಕನ್ನಡ ಸಿನಿಮಾ. ಇದೇ ಏಪ್ರಿಲ್ 13ಕ್ಕೆ‌ ಸಂಜೆ 5 ಗಂಟೆಗೆ 'ಕೋಟಿ' ಟೀಸರ್ ರಿಲೀಸ್ ಆಗುತ್ತಿದೆ.

These are the Kannada movie posters released on Ugadi festival 2024

ಗಣೇಶ್ 'ಕೃಷ್ಣಂ ಪ್ರಣಯ ಸಖಿ'

'ಕ' ಅಕ್ಷರದಿಂದ ಆರಂಭ ಆಗುವ ಮತ್ತೊಂದು ಸಿನಿಮಾದ ಟೈಟಲ್ 'ಕೃಷ್ಣಂ ಪ್ರಣಯಂ ಸಖಿ'. ಇದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 41ನೇ ಸಿನಿಮಾ. ಶ್ರೀನಿವಾಸ್ ರಾಜು ನಿರ್ದೇಶಿಸುತ್ತಿರುವ ಈ ಸಿನಿಮಾದ ಯುಗಾದಿ ಪೋಸ್ಟರ್ ರಿಲೀಸ್ ಆಗಿದೆ. ಮೇಲ್ನೋಟಕ್ಕೆ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಎನಿಸುತ್ತಿದೆ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ನಟಿಸಿದ್ದಾರೆ.

These are the Kannada movie posters released on Ugadi festival 2024

'ಕರಾವಳಿ'ಯಲ್ಲಿ ಪ್ರಜ್ವಲ್ ದೇವರಾಜ್

'ಕ' ಅಕ್ಷರದಿಂದ ಆರಂಭ ಆಗುವ ಮತ್ತೊಂದು ಸಿನಿಮಾ 'ಕರಾವಳಿ'. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ವಿಭಿನ್ನ ಸಿನಿಮಾ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯುಗಾದಿ ಹಬ್ಬಕ್ಕೆ ಸಿನಿಮಾ ತಂಡ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಗುರುದತ್ ಗಾಣಿಗ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಂಬಳದ ಜೊತೆಗೆ ಯಕ್ಷಗಾನ ಕೂಡ 'ಕರಾವಳಿ' ಸಿನಿಮಾದ ಹೈಲೈಟ್.

These are the Kannada movie posters released on Ugadi festival 2024

ಝೈದ್ ಖಾನ್ 'ಕಲ್ಟ್'

ಕೆಲವು ದಿನಗಳ ಹಿಂದಷ್ಟೇ ಝೈದ್ ಖಾನ್ ನಟಿಸುತ್ತಿರುವ ಎರಡನೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಆದರೆ, ಟೈಟಲ್ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. 'ಉಪಾಧ್ಯಕ್ಷ' ಸಿನಿಮಾದ ಬಳಿಕ ಅನಿಲ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈ ಸಿನಿಮಾ ಟೈಟಲ್ ಕೂಡ 'ಕ'ದಿಂದಲೇ ಆರಂಭ ಆಗುತ್ತೆ. ಅಂದ್ಹಾಗೆ ಸಿನಿಮಾದ ಟೈಟಲ್‌ 'ಕಲ್ಟ್'. ಇದೊಂದು ರಗಡ್ ಸಿನಿಮಾ ಅನ್ನೋದನ್ನು ಈ ಪೋಸ್ಟ್ ಪ್ರತಿಬಿಂಬಿಸಿದೆ.

More from Filmibeat

English summary
Kannada movie posters released in Ugadi Festival:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X