ರಿಮೇಕ್ ಚಿತ್ರಗಳನ್ನು ಕನ್ನಡಿಗರು ಗೆಲ್ಲಿಸಿದ್ದ ಉದಾಹರಣೆ ಎಷ್ಟು ಬೇಕು?

ಕನ್ನಡ ಚಿತ್ರೋದ್ಯಮ ನಿಧಾನವಾಗಿ ಬೆಳೆಯುತ್ತಿದೆ, ಬಿಗ್ ಸ್ಟಾರ್ ಗಳ ಚಿತ್ರ ಕರ್ನಾಟಕ ಹೊರತಾಗಿ ಬೇರೆ ನಗರಗಳಲ್ಲೂ ಮತ್ತು ವಿದೇಶದಲ್ಲೂ ಬಿಡುಗಡೆಯಾಗುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಬಾಕ್ಸಾಫೀಸಿನಲ್ಲಿ ಸದ್ದು ಮಾಡುತ್ತಿರುವ ಚಿತ್ರಗಳ ಸಂಖ್ಯೆಯೂ ಗಣನೀಯವಾಗಿ ಸುಧಾರಿಸುತ್ತಿದೆ. ರಿಮೇಕಾಗಲಿ, ಸ್ವಮೇಕಾಗಲಿ ಪ್ರೇಕಕ್ಷಕನನ್ನು ಬೋರು ಹೊಡೆಸದಿದ್ದರೆ ಸಾಕು, ಚಿತ್ರ ಹಿಟ್ ಆಗುವುದಂತೂ ಗ್ಯಾರಂಟಿ. (ಕನ್ನಡ ಚಿತ್ರೋದ್ಯಮದ ತಾರಾ ದಂಪತಿಗಳು)

ಕನ್ನಡ ಸಿನಿಮಾಗಳಿಗೆ ಬೇರೆ ಭಾಷೆಯ ನಿರ್ಮಾಪಕರು ಬಂಡವಾಳ ಹೂಡಲು ಬರುತ್ತಿರುವ ಸಂಖ್ಯೆಯೂ ಹೆಚ್ಚುತ್ತಿರುವುದರ ಜೊತೆಗೆ ಕನ್ನಡ ಸಿನಿಮಾಗಳು ಇತರ ಭಾಷೆಗೆ ರಿಮೇಕ್ ಆಗುತ್ತಿರುವುದು ವಿಶೇಷ.

ಯುವ ನಿರ್ದೇಶಕರು, ಹೊಸತನ, ತಾಜಾತನ ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಬಹುದು. ಇದರ ಜೊತೆಗೆ ಬೇರೆ ಭಾಷೆಯಲ್ಲಿ ಸದ್ದು ಮಾಡಿದ ಚಿತ್ರಗಳನ್ನು ರಿಮೇಕ್ ಮಾಡುವ ಸಂಸ್ಕೃತಿಯೂ ಮುಂದುವರಿದಿದೆ.

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಫಸಲು ಗಳಿಸಿದ ಹದಿಮೂರು ರಿಮೇಕ್ ಚಿತ್ರಗಳನ್ನು (2011-2014ರ ಅವಧಿಯಲ್ಲಿ) ಸ್ಲೈಡಿನಲ್ಲಿ ಮುಂದುವರಿಸಲಾಗಿದೆ. ಈ 13ರಲ್ಲಿ ನಿಮ್ಮ ಆಯ್ಕೆ ಯಾವುದು?

ಕಿರಾತಕ

ಕಿರಾತಕ

ರಾಕಿಂಗ್ ಸ್ಟಾರ್ ಯಶ್ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ 'ಕಿರಾತಕ'. 2011ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು. ಇದು ತಮಿಳಿನ ಕಲಾವಣಿ ಚಿತ್ರದ ರಿಮೇಕ್.

ಹುಡುಗರು

ಹುಡುಗರು

ರಾಜ್ ಬ್ಯಾನರಿನಲ್ಲಿ ಮೂಡಿ ಬಂದ ಹುಡುಗರು ಚಿತ್ರವನ್ನು ಕೆ ಮಾದೇಶ ನಿರ್ದೇಶಿಸಿದ್ದರು. ಪುನೀತ್, ಯೋಗೀಶ್, ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಮೂಲ ತಮಿಳು ನಾಡೋಡಿಗಳ್ ಚಿತ್ರವನ್ನು ನಿರ್ದೇಶಿಸಿದ್ದ ಸಮುತಿರಖಣಿ ನಿರ್ದೇಶಿಸಿದ್ದರು. ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು.

ಕೆಂಪೇಗೌಡ

ಕೆಂಪೇಗೌಡ

ಶಂಕರ್ ಗೌಡ ನಿರ್ಮಾಣದ, ಕಿಚ್ಚ ಸುದೀಪ್ ನಟಿಸಿ, ನಿರ್ದೇಶಿಸಿದ್ದ ಕೆಂಪೇಗೌಡ ಚಿತ್ರ 2011ರಲ್ಲಿ ಬಿಡುಗಡೆಯಾಯಿತು. ಸುದೀಪ್, ರಾಗಿಣಿ, ರವಿಶಂಕರ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು. ಇದು ತಮಿಳು ಸಿಂಗಂ ಚಿತ್ರದ ರಿಮೇಕ್.

ಯಾರೇ ಕೂಗಾಡಲಿ

ಯಾರೇ ಕೂಗಾಡಲಿ

ರಾಜ್ ಬ್ಯಾನರಿನಲ್ಲಿ ಮೂಡಿ ಬಂದ ರಿಮೇಕ್ ಚಿತ್ರ. 2012ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಸಮುತಿರಖಣಿ ನಿರ್ದೇಶಿಸಿದ್ದರು. ಪುನೀತ್, ಭಾವನಾ, ಯೋಗೀಶ್, ಗಿರೀಶ್ ಕಾರ್ನಾಡ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು. ಇದು ತಮಿಳು ಪೊರಾಲಿ ಚಿತ್ರದ ರಿಮೇಕ್.

ಕಲ್ಪನಾ

ಕಲ್ಪನಾ

ರಿಯಲ್ ಸ್ಟಾರ್ ಉಪೇಂದ್ರ ಅಮೋಘ ಅಭಿನಯದ ಕಲ್ಪನಾ ಸಿನಿಮಾ ಮೂಲ ತಮಿಳಿನ ಕಾಂಚನ ಚಿತ್ರದ ರಿಮೇಕ್, ಈ ಚಿತ್ರ 2012ರಲ್ಲಿ ಬಿಡುಗಡೆಯಾಯಿತು. ರಾಮ್ ನಾರಾಯಣ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಉಪ್ಪಿ, ಲಕ್ಷ್ಮಿ ರೈ, ಸಾಯಿಕುಮಾರ್ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದಾರೆ.

ವರದನಾಯಕ

ವರದನಾಯಕ

ಸುದೀಪ್, ಚಿರಂಜೀವಿ ಸರ್ಜಾ, ಸಮೀರಾ ರೆಡ್ಡಿ, ನಿಖಿಶಾ ಪಟೇಲ್ ಪ್ರಮುಖ ಭೂಮಿಕೆಯಲ್ಲಿರುವ ವರದನಾಯಕ ಚಿತ್ರ ತೆಲುಗಿನ ಲಕ್ಷ್ಯಂ ಚಿತ್ರದ ರಿಮೇಕ್. 2013ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಅಯ್ಯಪ್ಪ ಶರ್ಮಾ ನಿರ್ದೇಶಿಸಿದ್ದರು.

ಬುಲ್ ಬುಲ್

ಬುಲ್ ಬುಲ್

2013ರಲ್ಲಿ ಬಿಡುಗಡೆಯಾದ ಬುಲ್ ಬುಲ್ ಚಿತ್ರ ತೆಲುಗಿನ ಡಾರ್ಲಿಂಗ್ ಚಿತ್ರದ ರಿಮೇಕ್. ಎಂ ಡಿ ಶ್ರೀಧರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ದರ್ಶನ್, ರಚಿತಾ ರಾಮ್ ಮುಂತಾದವರಿದ್ದಾರೆ.

ರಾಜಾಹುಲಿ

ರಾಜಾಹುಲಿ

ಕೊಬ್ರಿ ಮಂಜು ನಿರ್ಮಾಣದ ರಾಜಾಹುಲಿ 2013ರಲ್ಲಿ ಬಿಡುಗಡೆಯಾದ ಸಿನಿಮಾ. ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಮೇಘನಾ ರಾಜ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಇದು ತಮಿಳು ಸುಂದರಪಾಂಡ್ಯನ್ ಚಿತ್ರದ ರಿಮೇಕ್.

ಚಂದ್ರಲೇಖ

ಚಂದ್ರಲೇಖ

ತೆಲುಗಿನ ಪ್ರೇಮ ಕಥಾ ಚಿತ್ರಂ ರಿಮೇಕ್ ಚಂದ್ರಲೇಖ. ಓಂ ಪ್ರಕಾಶ್ ರಾವ್ ನಿರ್ದೇಶನದ ಚಂದ್ರಲೇಖ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವಾಸ್ತವ, ಸಾಧು ಕೋಕಿಲ ಮುಂತಾದವರಿದ್ದಾರೆ. ಈ ಚಿತ್ರ 2014ರಲ್ಲಿ ಬಿಡುಗಡೆಯಾಯಿತು.

ಮಾಣಿಕ್ಯ

ಮಾಣಿಕ್ಯ

2014ರಲ್ಲಿ ಬಿಡುಗಡೆಯಾದ ಮಾಣಿಕ್ಯ ಚಿತ್ರ, ತೆಲುಗಿನ ಮಿರ್ಚಿ ಚಿತ್ರದ ರಿಮೇಕ್. ಸುದೀಪ್ ನಟಿಸಿ, ನಿರ್ದೇಶಿಸಿದ್ದ ಈ ಚಿತ್ರದ ಪ್ರಮುಖ ತಾರಗಣದಲ್ಲಿ ರವಿಚಂದ್ರನ್, ರವಿಶಂಕರ್, ವರಲಕ್ಷ್ಮೀ ಶರತ್ ಕುಮಾರ್, ರಮ್ಯಕೃಷ್ಣ ಮುಂತಾದವರಿದ್ದಾರೆ.

ದೃಶ್ಯ

ದೃಶ್ಯ

ಕ್ರೇಜಿಸ್ಟಾರ್ ರವಿಚಂದ್ರನ್ ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ರೋಲ್ ನಲ್ಲಿ ಕಾಣಿಸಿಕೊಂಡ ಚಿತ್ರ ದೃಶ್ಯ. ಇದು ಮಲಯಾಳಂನ ದೃಶ್ಯಂ ಚಿತ್ರದ ರಿಮೇಕ್. ರವಿಚಂದ್ರನ್, ಅಚ್ಯುತ್ ಕುಮಾರ್, ಶ್ರೀನಿವಾಸಮೂರ್ತಿ, ನವ್ಯಾ ನಾಯರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಿದ್ದರು.

ಅಧ್ಯಕ್ಷ

ಅಧ್ಯಕ್ಷ

2014ರಲ್ಲಿ ಬಿಡುಗಡೆಯಾದ ಅಧ್ಯಕ್ಷ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶರಣ್, ಚಿಕ್ಕಣ್ಣ, ರವಿಶಂಕರ್, ಹೀಬಾ ಪಟೇಲ್ ಮುಂತಾದವರಿದ್ದಾರೆ. ಇದು ವರುತಪಡತ ವಾಲಿಬಾರ್ ಸಂಘಂ ಚಿತ್ರದ ರಿಮೇಕ್.

ಪವರ್ ಸ್ಟಾರ್***

ಪವರ್ ಸ್ಟಾರ್***

ಪವರ್ ಸ್ಟಾರ್ ಪುನೀತ್ ರಾಜಕುಮಾರ್, ತೃಷಾ ಕೃಷ್ಣನ್, ಕೆಲ್ಲಿ ದೊರ್ಜಿ, ಪ್ರಭು, ನೀತು ಚಂದ್ರ, ರಂಗಾಯಣ ರಘು ಮುಂತಾದವರಿದ್ದಾರೆ. ಇದು ಮೂಲ ದೂಕುಡು ಚಿತ್ರದ ರಿಮೇಕ್. ಪವರ್ ಸ್ಟಾರ್ ಚಿತ್ರವನ್ನು ಕೆ ಮಾದೇಶ ನಿರ್ದೇಶಿಸಿದ್ದು, ಚಿತ್ರ 2014ರಲ್ಲಿ ತೆರೆಕಂಡಿತ್ತು.

More from Filmibeat

English summary
Thirteen best remake movies of Sandalwood during 2011 to 2014 in terms of making and box office collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X