'ಅಪ್ಪು' ಸ್ಥಾನ ತುಂಬ ಬಲ್ಲರೇ ಕಿರೀಟಿ.. ಪುನೀತ್ ಡ್ಯಾನ್ಸ್, ಸ್ಟಂಟ್ ಮಿಸ್ ಮಾಡಿಕೊಂಡವರಿಗೆ ಕಿರೀಟಿ ಇಷ್ಟ ಆದರೇ?

ಗಾಲಿ ಜನಾರ್ಧನ ರೆಡ್ಡಿಯ ಪುತ್ರಿ ಕಿರೀಟಿಯ ಸಿನಿಮಾ ಅನೌನ್ಸ್ ಮಾಡಿದಾಗ ಯಾರೂ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ, 'ಜೂನಿಯರ್' ತೆರೆಕಂಡ ಬಳಿಕ ಪ್ರೇಕ್ಷಕರ ಅಭಿಪ್ರಾಯ ಬದಲಾಗಿದೆ. ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರೆಲ್ಲರೂ "ಅಪ್ಪು ನೋಡಿದಂತೆ ಆಯ್ತು", "ಅಪ್ಪುನೇ ಕಣ್ಮುಂದೆ ಬಂದಂತಾಯ್ತು" ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಎರಡು ಕಾರಣಗಳಿವೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅನ್ನು ಸಿನಿಪ್ರಿಯರ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ಸಿನಿಮಾ ಅಂದರೆ, ಕುಟುಂಬ ಸಮೇತ ಹೋಗಿ ಮುಜುಗರವಿಲ್ಲದೆ ನೋಡಿ ಬರಬಹುದಾಗಿತ್ತು. ಸಿನಿಮಾ ಕಮರ್ಷಿಯಲ್ ಆಗಿದ್ದರೂ ಅಲ್ಲೊಂದು ಸಂದೇಶ ಇರುತ್ತಿತ್ತು. ಕೇವಲ ಮೆಸೇಜ್ ಕೊಡೋಕೆ ಸಿನಿಮಾ ಮಾಡುತ್ತಿರಲಿಲ್ಲ. ಪ್ರೇಕ್ಷಕರನ್ನು ರಂಜಿಸುವುದಕ್ಕೆ ಡ್ಯಾನ್ಸ್ ಇರುತ್ತಿತ್ತು. ಜಬರ್ದಸ್ತ್ ಆಗಿರುವ ಆಕ್ಷನ್ ಸೀಕ್ವೆನ್ಸ್ ಇರುತ್ತಿತ್ತು. ಅದಕ್ಕೆ ಇಂದಿಗೂ ಸಿನಿಮಾ ಪ್ರೇಮಿಗಳು 'ಅಪ್ಪು' ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

This is one reason why audience remember Puneeth Rajkumar in Kireeti in the junior movie

ಪುನೀತ್ ರಾಜ್‌ಕುಮಾರ್ ಡ್ಯಾನ್ಸ್, ಆಕ್ಷನ್‌ಗೆ ಫಿದಾ ಆದವರೇ ಹೆಚ್ಚು. ಸಿನಿಮಾ ಏನಿಲ್ಲ ಅಂದರೂ, ಅಪ್ಪು ಡ್ಯಾನ್ಸ್, ಸ್ಟಂಟ್‌ಗಳು ಕಿಕ್ ಕೊಡುತ್ತಿದ್ದವು. ಇದನ್ನು ನೋಡಿ ಸ್ಪೂರ್ತಿ ಪಡೆದುಕೊಂಡು ಇಂದು ಹೀರೋ ಆಗಿ ನಿಂತಿರೋದು ಗಾಲಿ ಜನಾರ್ಧನ ರೆಡ್ಡಿಯ ಪುತ್ರ ಕಿರೀಟಿ. ಈ ಹಿಂದೆ ಹಲವು ಬಾರಿ ಸ್ವತ: ಕಿರೀಟಿಯೇ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅದು ಚೊಚ್ಚಲ ಸಿನಿಮಾ 'ಜೂನಿಯರ್'ನಲ್ಲಿ ಎದ್ದು ಕಾಣುತ್ತಿದೆ. ಪುನೀತ್ ನಾಯಕನಾಗಿ ನಟಿಸಿದ 'ಅಪ್ಪು' ಹಾಗೂ ಕಿರೀಟಿ ಹೀರೋ ಆಗಿ ನಟಿಸಿದ 'ಜೂನಿಯರ್‌'ನಲ್ಲಿ ಇರುವ ಸಾಮ್ಯತೆಯನ್ನು ಪ್ರೇಕ್ಷಕರು ಕಂಡುಕೊಂಡಿದ್ದಾರೆ.

ಮುಂದೆ ಓದಿ

ಪುನೀತ್ ಮಿಸ್ ಮಾಡಿಕೊಳ್ಳುತ್ತಿದ್ದವರ ಮುಖದಲ್ಲಿ ನಗು
ಅಪ್ಪು ಡ್ಯಾನ್ಸ್, ಫೈಟ್ ಅನ್ನು ಕಿರೀಟಿಯಲ್ಲಿ ಪ್ರೇಕ್ಷಕರ ನಿರೀಕ್ಷೆಯೇನು?
ಪುನೀತ್ ಸ್ಪೂರ್ತಿ ಅಂತ ಕಿರೀಟಿ ಹೇಳಿದ್ದು ಸುಳ್ಳಲ್ಲ?
ಕಿಕ್ ಕೊಡುತ್ತಿದೆಯೇ 'ಜೂನಿಯರ್' ಸ್ಟಂಟ್ ಮೇಕಿಂಗ್?

ಕಿರೀಟಿ ಸಿನಿಮಾ ಅನೌನ್ಸ್ ಮಾಡಿದ ವೇಳೆ ಪುನೀತ್ ರಾಜ್‌ಕುಮಾರ್‌ರನ್ನು ನೆನೆದು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲೊಂದು ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ಹೀಗಿದೆ. "ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು. ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2010ರಲ್ಲಿ ಜಾಕಿ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್ ನಲ್ಲಿದ್ದ ರೀತಿ ಮನಸಿಗೆ ಹತ್ತಿರವಾಯಿತು. ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು ಮತ್ತು ಪುನೀತ್ ಸರ್ ಅವರೆ ನಮ್ಮಿಬ್ಬರಿಗೂ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಕಲಿತ ಅತ್ಯಮೂಲ್ಯವಾದ ಪಾಠ.

ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. "ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್". ನನ್ನ ಮೇಲಿನ ನಿಮ್ಮ ನಂಬಿಕೆಯೆ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ." ಎಂದು ಕಿರೀಟಿ ಬರೆದು ಪೋಸ್ಟ್ ಮಾಡಿದ್ದರು.

'ಅಪ್ಪು' ನೆನಪಿಸಿದ ಕಿರೀಟಿ

ಈಗ ಸಿನಿಮಾ ರಿಲೀಸ್ ಆಗಿದೆ. ಕಿರೀಟಿ ಸಿನಿಮಾ ಎಂಟ್ರಿ ಪುನೀತ್ ರಾಜ್‌ಕುಮಾರ್ ಎಷ್ಟು ಪ್ರಭಾವ ಬೀರಿದ್ದಾರೆ ಅನ್ನೋದು ಗೊತ್ತಾಗಿದೆ. ಪುನೀತ್ 'ಅಪ್ಪು' ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಾಗ ಎಲ್ಲರಲ್ಲೂ ಇದೇ ಭಾವವಿತ್ತು. ಅಪ್ಪು ಸ್ಟಂಟ್‌ಗಳಿಗೆ ಪ್ರೇಕ್ಷಕರು ಮೂಕವಿಸ್ಮಿತರಾಗಿದ್ದರು. ಪುನೀತ್ ಡ್ಯಾನ್ಸ್‌ ನೋಡಿ ಕಳೆದು ಹೋಗಿದ್ದರು. ಪುನೀತ್ ಕೂಡ ಸಿನಿಮಾದ ಎಲ್ಲಾ ವಿಭಾಗದಲ್ಲಿಯೂ ಸಂಪೂರ್ಣ ತಯಾರಿ ತೆಗೆದುಕೊಂಡೇ ಎಂಟ್ರಿ ಕೊಟ್ಟಿದ್ದರು.

ಈಗ ಕಿರೀಟಿ ಕೂಡ ಪುನೀತ್ ರಾಜ್‌ಕುಮಾರ್ ಹಾದಿಯಲ್ಲೇ ನಡೆದು ಬಂದಿದ್ದಾರೆ. ಚೊಚ್ಚಲ ಸಿನಿಮಾದಲ್ಲಿ ಅಪ್ಪುವಿನಂತೆ ಡ್ಯಾನ್ಸ್‌ನಿಂದ ಗಮನ ಸೆಳೆದಿದ್ದಾರೆ. ಕಿರೀಟಿಯ ಸ್ಟಂಟ್‌ಗಳಿಗೆ ಸಿನಿಮಾ ನೋಡಿದವರು ಥ್ರಿಲ್ ಆಗಿದ್ದಾರೆ. ಇಷ್ಟು ಅಪ್ಪು ಡ್ಯಾನ್ಸ್, ಸ್ಟಂಟ್‌ಗಳನ್ನು ಮಿಸ್ ಮಾಡಿಕೊಂಡವರನ್ನು ಕಿರೀಟಿ ಖುಷಿ ಪಡಿಸಬಹುದೇ? ಈ ಪ್ರಶ್ನೆಯಂತೂ ಹುಟ್ಟಿಕೊಂಡಿದೆ. ಜನರು ಕೂಡ ಅದೇ ಆಶಾಭಾವನೆಯಲ್ಲಿ ಇದ್ದಾರೆ.

ರೆಡ್ಡಿ ಮಗನಿಗೆ ಬಹುಪರಾಕ್

ಗಾಲಿ ಜನಾರ್ಧನ ರೆಡ್ಡಿ ಮಗನಿಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ಇತ್ತೀಚೆಗೆ ಕಿರೀಟಿ ಆಕ್ಷನ್ ಸೀಕ್ವೆನ್ಸ್ ಒಂದರ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಅದನ್ನು ನೋಡಿದ ಮೇಲಂತೂ ಅಪ್ಪು ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ. ಈಗೇನಿದ್ದರೂ ಕಿರೀಟಿಯ ಮುಂದಿನ ನಡೆ ಏನಿರುತ್ತೆ? ಅನ್ನೋದನ್ನು ಎದುರು ನೋಡುತ್ತಿದ್ದಾರೆ.

More from Filmibeat

English summary
This is one reason why audience remember Puneeth Rajkumar in Kireeti in the junior movie;
Read more about: puneeth rajkumar dance stunts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X