'ವಿಜಯ್ 69' ಅಲ್ಲ.. ಅಮೆರಿಕದಿಂದ ಮರಳಿದ ಬಳಿಕ ಶಿವಣ್ಣ ನಟಿಸಲಿರುವ ಬಿಗ್ ಸಿನಿಮಾ ಇದೇನೆ!
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್' ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಮತ್ತೊಮ್ಮೆ ಶಿವಣ್ಣನನ್ನು ಮಾಸ್ ಅವತಾರದಲ್ಲಿ ನೋಡುವುದಕ್ಕೆ ಅವರ ಹುಡುಗರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಶಿವಣ್ಣ ಕೂಡ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳ ಬಿಟ್ಟಿಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹೀರೋ ಶಿವರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಅನಾರೋಗ್ಯ ಹಿನ್ನೆಲೆ ಶೂಟಿಂಗ್ ಬ್ರೇಕ್ ಕೊಟ್ಟಿದ್ದು, ಸಿನಿಮಾಗಳ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರ ಇನ್ನೊಂದು ಸಿನಿಮಾ ಅರ್ಜುನ್ ಜನ್ಯ ನಿರ್ದೇಶಿಸಿದ '45' ಕೂಡ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ.

ಶಿವಣ್ಣ ಅನಾರೋಗ್ಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅವರೇ ಖುದ್ದಾಗಿ ತನ್ನ ಆರೋಗ್ಯ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೆಂಚುರಿ ಸ್ಟಾರ್ ಮುಂದಿನ ತಿಂಗಳು ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಲಿದ್ದಾರೆ. ಚಿಕಿತ್ಸೆಯ ಬಳಿಕ ಒಂದು ತಿಂಗಳು ವಿಶ್ರಾಂತಿ ಕೊಡಲು ವೈದ್ಯರು ಸೂಚಿಸಿದ್ದಾರೆ. ಆ ಬಳಿಕ ಮತ್ತೆ ಸಿನಿಮಾಗಳನ್ನು ಆರಂಭ ಮಾಡುತ್ತಾರೆ.
ಶಿವರಾಜ್‌ಕುಮಾರ್ ಒಂದು ದಿನವೂ ಸಿನಿಮಾ ಕೆಲಸ ಇಲ್ಲದೆ ಫ್ರೀಯಾಗಿ ಇದ್ದಿದ್ದೇ ಇಲ್ಲ. ಆದರೆ, ಅನಾರೋಗ್ಯ ಹಿನ್ನೆಲೆ ಎರಡು ತಿಂಗಳು ಬ್ರೇಕ್ ಕೊಡಬೇಕಿದೆ. ಇದು ಕಷ್ಟ ಅಂತಲೇ ಹೇಳಿಕೊಂಡಿರುವ ಶಿವಣ್ಣ ಅಮೆರಿಕಗೆ ತೆರಳಲಿದ್ದಾರೆ. ಅಲ್ಲಿ ಸರ್ಜರಿ ಮುಗಿಸಿದ ಬಳಿಕ ಭಾರತಕ್ಕೆ ಮರಳಿದ ಬಳಿಕವೇ ದೊಡ್ಡ ಪ್ರಾಜೆಕ್ಟ್‌ನಲ್ಲಿ ನಟಿಸಲಿದ್ದಾರೆ. ಈ ವಿಷಯವನ್ನು ಸ್ವತ: ಶಿವರಾಜ್‌ಕುಮಾರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಶಿವಣ್ಣ ಕೈಯಲ್ಲಿ ಒಂದೆರಡು ಸಿನಿಮಾಗಳಿಲ್ಲ. ಹುಷಾರಾದ ಬಳಿಕ ಸೆಂಚುರಿ ಸ್ಟಾರ್ ಯಾವ ಸಿನಿಮಾವನ್ನು ಮೊದಲು ಕೈಗೆತ್ತಿಕೊಳ್ಳುತ್ತಾರೆ ಅನ್ನೋ ಕುತೂಹಲ ಇದ್ದೇ ಇತ್ತು. ಯಾಕಂದ್ರೆ, ಈಗಾಗಲೇ ನಾಲ್ಕೈದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲಿ 'ಉತ್ತರಕಾಂಡ' ಸಿನಿಮಾ ಶೂಟಿಂಗ್ ಮುಗಿಸಬೇಕಿದೆ. ಈಗಾಗಲೇ ಹೇಮಂತ್ ರಾವ್ ನಿರ್ದೇಶನದ 'ಭೈರವನ ಕೊನೆ ಪಾಠ'ಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಶೂಟಿಂಗ್ ಪೋಸ್ಟ್‌ಪೋನ್ ಮಾಡಲಾಗಿದೆ. ಹಾಗೆ ಶ್ರೀನಿ ನಿರ್ದೇಶಿಸುತ್ತಿರುವ 'A ಫಾರ್ ಆನಂದ್' ಸಿನಿಮಾ ಕೂಡ ಅನೌನ್ಸ್ ಆಗಿದೆ. ಇದಲ್ಲದೆ ಇನ್ನೂ ಎರಡು ಬೇರೆ ಭಾಷೆಯ ಸಿನಿಮಾಗಳಿವೆ. ಇಷ್ಟರಲ್ಲಿ ಮೊದಲು ನಟಿಸುವ ಸಿನಿಮಾ ಯಾವುದು? ಅನ್ನುವ ಪ್ರಶ್ನೆಗೂ ತೆರೆಬಿದ್ದಿದೆ.
ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಹಾಗೂ 69ನೇ ಸಿನಿಮಾದಲ್ಲೂ ನಟಿಸಲಿದ್ದಾರೆ. ಆದರೆ, ಈ ಸಿನಿಮಾಗೂ ಮುನ್ನ ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸುತ್ತಿರುವ ಆರ್ ಸಿ 16 ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. ಶಿವಣ್ಣ ಸರ್ಜರಿ ಮುಗಿಸಿ ಬರುತ್ತಿದ್ದಂತೆ ಮೊದಲು ರಾಮ್ ಚರಣ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ಸಿನಿಮಾ ಸೆಟ್ಟಿಗೆ ಸೇರಿಕೊಳ್ಳಬೇಕಿತ್ತು. ಆದರೆ, ಸ್ವಲ್ಪ ತಡವಾಗಿ ಬರುತ್ತೇನೆ ಎಂದು ಹೇಳಿದ್ದು, ಅಮೆರಿಕದಲ್ಲಿ ಸರ್ಜರಿ ಮುಗಿಸಿ ಹಿಂತಿರುಗುತ್ತಿದ್ದಂತೆ ರಾಮ್ ಚರಣ್ ಸಿನಿಮಾ ಸೆಟ್ಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಚಿತ್ರತಂಡಕ್ಕೂ ಶಿವಣ್ಣ ತಮ್ಮ ಅನಾರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಮುಗಿದು ಅಮೆರಿಕದಿಂದ ಹಿಂತಿರುಗಿದ ಬಳಿಕ ತಂಡ ಸೇರಿಕೊಳ್ಳುವುದಾಗಿ ಶಿವಣ್ಣ ಹೇಳಿದ್ದು, ಅದಕ್ಕೆ ಆರ್‌ಸಿ 16 ತಂಡ ಕೂಡ ಒಪ್ಪಿದೆ. ಹೀಗಾಗಿ ಅಮೆರಿಕದಿಂದ ಮರಳುತ್ತಿದ್ದಂತೆ ರಾಮ್ ಚರಣ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











