'ರಂಗನಾಯಕ' ಸಿನಿಮಾಗೆ ಗುರುಪ್ರಸಾದ್ ಪಡೆದ ಸಂಭಾವನೆ ಎಷ್ಟು? ಅಷ್ಟು ಹಣ ಸಿಕ್ಕರೂ ಸಾಲ ಮಾಡಿದ್ದೇಕೆ?

ಗುರುಪ್ರಸಾದ್ ನಿರ್ದೇಶಿಸಿದ ಸಿನಿಮಾಗಳು ಇಂದಿಗೂ ಸಿನಿಪ್ರಿಯರ ಫೇವರಿಟ್. ಇವರು ನಿರ್ದೇಶಿಸಿದ 'ಮಠ' ಮತ್ತು 'ಎದ್ದೇಳು ಮಂಜುನಾಥ' ಎರಡೂ ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಸಿನಿಮಾಗಳಾಗಿವೆ. ಅಷ್ಟೇ ಅಲ್ಲ ಜಗ್ಗೇಶ್ ವೃತ್ತಿ ಬದುಕಿನ ಈ ಎರಡು ಅದ್ಭುತ ಸಿನಿಮಾಗಳು ಕೂಡ ಇವೇನೆ. ಕಡಿಮೆ ಬಜೆಟ್‌ನಲ್ಲಿ ಹೇಗೆ ಅದ್ಭುತ ಸಿನಿಮಾವನ್ನು ಮಾಡಬಹುದು ಎಂದು ತೋರಿಸಿಕೊಟ್ಟವರು ಗುರುಪ್ರಸಾದ್.

ಈ ನಿರ್ದೇಶಕ ಮನಸ್ಸು ಮಾಡಿದ್ದರೆ, ಕನ್ನಡಕ್ಕೆ ಇನ್ನೂ ಅದ್ಭುತ ಸಿನಿಮಾಗಳನ್ನು ಮಾಡಬಹುದಾಗಿತ್ತು. ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಗುರುಪ್ರಸಾದ್ ಕೂಡ ಒಬ್ಬರಾಗಿದ್ದಾರೆ. ಆದರೆ, ತಮ್ಮ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡರು ಎಂದು ಚಿತ್ರರಂಗ ಅಭಿಪ್ರಾಯ ಪಟ್ಟಿದ್ದಾರೆ. ಸಾಲದ ಜೀವನ ಗುರುಪ್ರಸಾದ್ ಅವರ ಜೀವನವನ್ನೇ ತೆಗೆದುಕೊಂಡು ಬಿಟ್ಟಿದೆ.

This is the last payment Kannada director Guruprasad got for movie Ranganayaka

ಗುರುಪ್ರಸಾದ್ ನಿರ್ದೇಶಿಸಿ, ಬಿಡುಗಡೆಯಾಗದ ಕೊನೆಯ ಸಿನಿಮಾ 'ರಂಗನಾಯಕ'. ಈ ಸಿನಿಮಾದಲ್ಲಿ ಸಿಕ್ಕಿದ ಸಂಭಾವನೆ ಕಮ್ಮಿಯೇನು ಇರಲಿಲ್ಲ. ಇದನ್ನೇ ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದರೆ, ಗುರುಪ್ರಸಾದ್ ತನ್ನ ಸಾಲವನ್ನೆಲ್ಲ ತೀರಿಸಿ ಆರಾಮಾಗಿ ಇರಬಹುದಿತ್ತು ಎಂದು ನವರಸ ನಾಯಕ ಜಗ್ಗೇಶ್ ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ, 'ರಂಗನಾಯಕ' ಸಿನಿಮಾಗೆ ಗುರುಪ್ರಸಾದ್ ಪಡೆದಿದ್ದ ಸಂಭಾವನೆ ಎಷ್ಟು?

ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಸುದ್ದಿ ಕೇಳಿದ ಬಳಿಕ ಜಗ್ಗೇಶ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯಾಕಂದ್ರೆ ಇವರಿಬ್ಬರ ಕಾಂಬಿನೇಷನ್ ಆ ಮಟ್ಟಿಗೆ ಸದ್ದು ಮಾಡಿತ್ತು. ಆದರೆ, ಇತ್ತೀಚೆಗೆ ತೆರೆಕಂಡಿದ್ದ 'ರಂಗನಾಯಕ' ಸಿನಿಮಾದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ, ಆ ಸಿನಿಮಾ ಕಟು ಟೀಕೆಗೆ ಒಳಗಾಗಿತ್ತು. ಪ್ರೇಕ್ಷಕರಿಗೆ 'ರಂಗನಾಯಕ' ಸಿನಿಮಾ ಇಷ್ಟ ಆಗಿರಲಿಲ್ಲ. ಗುರುಪ್ರಸಾದ್ ಹಾಗೂ ಜಗ್ಗೇಶ್ ಇಬ್ಬರೂ ಟೀಕೆಗೆ ಒಳಗಾಗಿದ್ದರು.

This is the last payment Kannada director Guruprasad got for movie Ranganayaka

ಜಗ್ಗೇಶ್ ಹಾಗೂ ಗುರುಪ್ರಸಾದ್ ಇಬ್ಬರೂ 'ಎದ್ದೇಳು ಮಂಜುನಾಥ' ಸಿನಿಮಾ ಬಳಿಕ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಇಬ್ಬರ ನಡುವೆ ಅಸಮಧಾನ ಬಂದಿದ್ದ ಕಾರಣ 10 ವರ್ಷಗಳ ಕಾಲ ಸಿನಿಮಾ ಮಾಡಿರಲಿಲ್ಲ. ಆದರೆ, ನಿರ್ಮಾಪಕ ವಿಖ್ಯಾತ್ ಇಬ್ಬರನ್ನೂ ಒಟ್ಟಿಗೆ ಸೇರಿಸಿ, ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಜಗ್ಗೇಶ್ ಹಾಗೂ ಗುರುಪ್ರಸಾದ್ ಇಬ್ಬರದ್ದೂ ಹಿಟ್ ಕಾಂಬಿನೇಷನ್ ಆಗಿದ್ದರಿಂದ ಒಳ್ಳೆಯ ಸಂಭಾವನೆ ಸಿಕ್ಕಿತ್ತು ಎನ್ನಲಾಗಿದೆ.

'ರಂಗನಾಯಕ' ಸಿನಿಮಾಗೆ ನವರಸ ನಾಯಕ ಜಗ್ಗೇಶ್ ಅವರೇ ಗುರುಪ್ರಸಾದ್‌ಗೆ ಒಳ್ಳೆಯ ಸಂಭಾವನೆಯನ್ನು ಕೊಡಿಸಿದ್ದಾಗಿ ಹೇಳಿಕೊಂಡಿದ್ದಾರೆ. ಬಿಡುಗಡೆಯಾದ ಕೊನೆಯ ಸಿನಿಮಾಗೆ ಗುರುಪ್ರಸಾದ್ ಸುಮಾರು 90 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ಜಗ್ಗೇಶ್ ಮಾಧ್ಯಮಕ್ಕೆ ಹೇಳಿದ್ದಾರೆ. ಇಷ್ಟು ದೊಡ್ಡ ಸಂಭಾವನೆ ಪಡೆದರೂ, ಸಾಲದ ಹೊರೆ ಮಾತ್ರ ಕಡಿಮೆ ಆಗಿರಲಿಲ್ಲ.

ಗುರುಪ್ರಸಾದ್‌ಗೆ ಕೇವಲ ಸಾಲ ಅಷ್ಟೇ ಅಲ್ಲ. ಸಾಕಷ್ಟು ಆರೋಗ್ಯ ಸಮಸ್ಯೆ ಕೂಡ ಇತ್ತು. ಅವರಿಗೆ ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದರೊಂದಿಗೆ ಸಾಲ ಹೆಚ್ಚು ಮಾಡಿಕೊಂಡಿದ್ದರು. ಚೆಕ್ ಬೌನ್ಸ್ ಪ್ರಕರಣ ಇತ್ತು. ಇದರೊಂದಿಗೆ ಟೋಟಲ್ ಕನ್ನಡದ ಮಾಲೀಕ ಪುಸ್ತಕ ಖರೀದಿಸಿ ಹಣವನ್ನು ನೀಡಲ್ಲ ಎಂದೂ ದೂರನ್ನು ದಾಖಲು ಮಾಡಿದ್ದರು. ಇವೆಲ್ಲವೂ ಗುರುಪ್ರಸಾದ್ ಅವರ ಬದುಕನ್ನೇ ಕೊನೆಯಾಗುವಂತೆ ಮಾಡಿದೆ ಎಂದು ಚಿತ್ರರಂಗದ ಗಣ್ಯರು ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
This is the last payment Kannada director Guruprasad got for movie Ranganayaka
Read more about: guruprasad jaggesh filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X