ಥೇಟ್ ಅಪ್ಪು ಅನ್ನೇ ಹೋಲುವ ಈ ಬಾಲಕ ಯಾರು? ಎಲ್ಲಿದ್ದಾನೆ? 'ಬೆಟ್ಟದ ಹೂವು' ನೆನಪಾಯಿತೇ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವ್ಯಕ್ತಿಯವರೆಗೂ ತುಂಬಾನೇ ಇಷ್ಟ. ಅವರ ಸಿನಿಮಾಗಳು ಫ್ಯಾಮಿಲಿ ಕೂತು ನೋಡುವಂತಹವೇ ಆಗಿರುತ್ತಿದ್ದವು. ಅದಕ್ಕೆ ಚಿಕ್ಕ ಮಕ್ಕಳಿ ಪಾಲಿಗೆ ಪುನೀತ್ ರಾಜ್‌ಕುಮಾರ್ 'ಅಪ್ಪು' ಆಗಿ ಕಂಡಿದ್ದೇ ಹೆಚ್ಚು. ಕನ್ನಡಿಗರ ಪಾಲಿಗೆ ದೇವರಾಗಿರುವ ಈ ಪರಮಾತ್ಮ ಈಗ ಕೇವಲ ನೆನಪಷ್ಟೇ.
ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಡುತ್ತಾರೆ. ಈಗ ಅಭಿಮಾನಿಗಳ ಪಾಲಿಗೆ ಸಿನಿಮಾಗಳೇ ಎಲ್ಲ. ಅಲ್ಲೇ ಅಪ್ಪು ನಗುವನ್ನು ಕಂಡು ಖುಷಿ ಪಡುತ್ತಾರೆ. ಆಕ್ಷನ್ ನೋಡಿ ಹಿಗ್ಗುತ್ತಾರೆ. ಡ್ಯಾನ್ಸ್ ಕಂಡು ಶಿಳ್ಳೆ ಹಾಕುತ್ತಾರೆ. ಪುನೀತ್ ರಾಜ್‌ಕುಮಾರ್ ನಡೆದುಕೊಂಡಂತೆ ಅವರ ಹಾದಿಯಲ್ಲಿಯೇ ಅಭಿಮಾನಿಗಳು ಸಾಗುತ್ತಿದ್ದಾರೆ. ಅವರ ಕನಸನ್ನು ನನಸು ಮಾಡುವುದಕ್ಕೆ ಫ್ಯಾನ್ಸ್ ಕೂಡ ಪಣ ತೊಟ್ಟು ನಿಂತಿದ್ದಾರೆ.

ಡೈ ಹಾರ್ಡ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಖುಷಿ ವಿಷಯವೊಂದಿದೆ. ಅಪ್ಪು ಅನ್ನೇ ಹೋಲುವ ಜೂ.ಅಪ್ಪು ಒಬ್ಬರು ಪ್ರತ್ಯಕ್ಷ ಆಗಿದ್ದಾರೆ. ಅದರಲ್ಲೇನಿದೆ? ಈಗಾಗಲೂ ಜೂನಿಯರ್ ಪುನೀತ್ ರಾಜ್‌ಕುಮಾರ್ ಅನ್ನು ನೋಡಿದ್ದೇವೆ ಅಂದುಕೊಳ್ಳಬೇಡಿ. ಆದರೆ, ಅಪ್ಪು ಬಾಲ್ಯದಲ್ಲಿ ನೋಡುವುದಕ್ಕೆ ಹೇಗಿದ್ದರೋ ಥೇಟ್ ಹಾಗೇ ಹೋಲುವ ಜೂನಿಯರ್ ಅಪ್ಪು ಒಬ್ಬರು ಕರ್ನಾಟಕದಲ್ಲಿಯೇ ಇದ್ದಾನೆ. ಆ ಪುಟ್ಟ ಬಾಲಕ ಯಾರು? ಯಾವ ಊರಿನವನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಪ್ಪು ಬಾಲ್ಯದಿಂದಲೇ ನಟನೆಗೆ ಇಳಿದವರು. ಸಿನಿಮಾಗೆ ಕಾಲಿಟ್ಟ ದಿನದಿಂದಲೇ ದೊಡ್ಮನೆ ಅಭಿಮಾನಿಗಳ ಪಾಲಿನ ಫೇವರಿಟ್ ಆಗಿದ್ದವರು. ಇಂದಿಗೂ ಬಾಲ್ಯದಲ್ಲಿ ಅಪ್ಪು ನಟಿಸಿದ ಸಿನಿಮಾಗಳನ್ನು ಇಷ್ಟ ಪಡುವ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಅವರು ಈ ಬಾಲಕನ ಹಾವ-ಭಾವಗಳು, ಧ್ವನಿಯನ್ನು ನೋಡಿದರೆ ಥೇಟ್ ಪುನೀತ್ ರಾಜ್‌ಕುಮಾರ್ ನೋಡದ ಹಾಗೇ ಆಗುತ್ತೆ.
ಅಂದ್ಹಾಗೆ ಅಪ್ಪು ಅನ್ನೇ ಹೋಲುವ ಈ ಪುಟ್ಟ ಬಾಲಕ ಅಭಿಷೇಕ್ ತೀರ್ಥಹಳ್ಳಿ ಎಂಬುವವರ ಕಣ್ಣಿಗೆ ಬಿದ್ದಿದ್ದಾರೆ. ಕಾರ್ಯಕ್ರಮವೊಂದನ್ನು ಆಯೋಜಿಸಲು ಕುಂದಾಪುರದ ರಟ್ಟಾಡಿ ಹೋಗಿದ್ದರು. ಅಲ್ಲಿ ಅವರಿಗೆ ಬಾಲ್ಯದಲ್ಲಿದ್ದ ಅಪ್ಪು ಅನ್ನೇ ಹೋಲುವ ಪುಟ್ಟ ಬಾಲಕ ಕಣ್ಣಿಗೆ ಬಿದ್ದಿದ್ದಾನೆ. ಅವನೊಂದಿಗೆ ಅಭಿಷೇಕ್ ವಿಡಿಯೋ ಮಾಡಿ, ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪು ಅನ್ನೇ ಹೋಲುವ ಈ ಬಾಲಕನ ಹೆಸರು ಮಣಿಕಂಠ. ಈತನ ಮುಖಚರ್ಯೆ, ನಗು, ನೋಟ ಎಲ್ಲದರಲ್ಲೂ ಹೆಚ್ಚಿನ ವ್ಯತ್ಯಾಸವೇನು ಇಲ್ಲ. ಈ ಬಾಲಕ ಈಗ ಸದ್ಯ ಓದುತ್ತಿದ್ದಾನೆ. ಅಭಿಷೇಕ್ ಅವರು ಮಣಿಕಂಠನ ಹತ್ತಿರ ಮಾತಾಡಿಸಿದ್ದಾರೆ. ಯಾರಾದರೂ ನೀನು ಅಪ್ಪು ಸರ್ ಕಾಣಿಸಿದಂತೆ ಕಾಣುತ್ತೀಯ ಅಂತ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದಾಗ ಹೌದು ಹೇಳಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ಹಾರ್ಟ್ ಎಮೋಜಿ ಹಾಕಿ ಇಷ್ಟ ಪಟ್ಟಿದ್ದಾರೆ.
ಈ ವಿಡಿಯೋ ನೋಡಿನೆಟ್ಟಿಗರ ಕಾಮೆಂಟ್ ಹೀಗಿದೆ ನೋಡಿ. "ಪುಟ್ಟ ನೀನು ಚೆನ್ನಾಗಿ ಓದಿ, ಅಪ್ಪು ಸರ್ ಅವರ ಹಾದಿಯಲ್ಲಿ ಹೋಗು. ದೇವರು ನಿನಗೆ ಒಳ್ಳೆಯದು ಮಾಡುತ್ತಾನೆ" ಎಂದಿದ್ದಾರೆ. "ಪಕ್ಕದಲ್ಲಿ ಇರೋ ಹುಡುಗನ್ನು ಕೂಡ ಮಾತನಾಡಿಸಬೇಕಿತ್ತು ಬ್ರೋ, ಪಾಪ" ಎಂದು ಇನ್ನೊಬ್ಬರು ಹೇಳಿದ್ದಾರೆ. ಹಾಗೇ "ಅಹ್ ಹುಡುಗನ ನೋಡುವಾಗ ಕಣ್ಣಲ್ಲಿ ನೀರ್ ಬಂತು.." ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. "ನೋಡೋಕೆ ಅಷ್ಟೇ ಅಲ್ಲ ಅಪ್ಪು ಸರ್ ತರ .. ವಾಯ್ಸ್ ಕೂಡ ಹಾಗೆ ಇದೆ", "ನಿಜ ತುಂಬಾ ಖುಷಿ ಆಯಿತು.. ದೇವರು ಮಣಿಕಂಠ ಹುಡುಗನ ಚೆನ್ನಾಗಿ ಇಟ್ಟಿರಲಿ.. ಒಂದ್ ತರ ಒಳಗೆ ಮನಸಿಗೆ ಸಮಾಧಾನ ಆಯ್ತು.. ಅಪ್ಪು ಹಾದಿ ಅಲ್ಲಿ ನಡೆ ಕಂದ" ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











