ಈ ವೀಕೆಂಡ್‌ನಲ್ಲಿ ಸಿನಿಮಾನೇ ಯಾಕೆ.. ಬೇರೆ ಟ್ರೈ ಮಾಡ್ತೀರಾ? ಇಲ್ಲೊಂದ್ಕಡೆ ವಿಶಿಷ್ಟ ನಾಟಕ ಪ್ರದರ್ಶನವಿದೆ.. ಹೋಗಿ ಬನ್ನಿ!

ವೀಕೆಂಡ್‌ನಲ್ಲಿ ಬರೀ ಸಿನಿಮಾವನ್ನೇ ಯಾಕೆ ನೋಡ್ಬೇಕು? ಓಟಿಟಿ ರಿಲೀಸ್‌ಗೆ ಯಾಕೆ ಕಾಯಬೇಕು. ಫಾರ್ ಎ ಚೇಂಜ್ ಈ ವಾರಾಂತ್ಯದಲ್ಲಿ ನೀವೊಂದು ನಾಟಕ ಯಾಕೆ ನೋಡಬಾರದು? ನಾಟಕ ಪ್ರಿಯರಿಗೊಂಡು ಖುಷಿ ಸುದ್ದಿ ಇದೆ. ಬರೋಬ್ಬರಿ 6 ವರ್ಷಗಳ ಬಳಿಕ ನಾಟಕ ತಂಡವೊಂದು ಪ್ರೇಕ್ಷಕರನ್ನು ರಂಜಿಸಲು ಈ ವೀಕೆಂಡ್‌ನಲ್ಲಿ ಸಜ್ಜಾಗಿದೆ. ಅದುವೇ 'ಮಿಸ್ಪಿಟ್' ರಂಗ ತಂಡ.

ತಮ್ಮ ಅದ್ಭುತ ಆಕ್ಟಿಂಗ್‌ನಿಂದ ಪ್ರೇಕ್ಷಕರ ಮನ ಗೆದ್ದಿದ್ದ 'ಮಿಸ್ಪಿಟ್' ರಂಗ ತಂಡವು ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು 6 ವರ್ಷಗಳ ನಂತರ ಬರುತ್ತಿದೆ. ಈ ತಂಡ 'ಕನೆಕ್ಟೋಲೋಗ್ಸ್‌-V3.0 ದಿ ಫೀನಿಕ್ಸ್' ನಾಟಕವನ್ನು ಮತ್ತೆ ರಂಗದ ಮೇಲೆ ತರುತ್ತಿದೆ.

Connectologs v3.0 the phoenix, Drama

ಕನೆಕ್ಟೋಲೋಗ್ಸ್‌ ಅಂದ್ರೆ ಏನು?

ಒಬ್ಬ ವ್ಯಕ್ಕಿ ಒಂದಕ್ಕಿಂತ ಹೆಚ್ಚಿನ ಪಾತ್ರಗಳನ್ನು ಒಂದೇ ಸಮಯದಲ್ಲಿ ಪ್ರದರ್ಶಿಸುವುದೇ 'ಕನೆಕ್ಟೋಲೋಗ್ಸ್‌'. ಸಾಮಾನ್ಯವಾಗಿ ಒಬ್ಬ ನಟ ತನ್ನ ಪಾತ್ರವನ್ನು ಮಾತ್ರ ಮಾಡುತ್ತಾನೆ. ಆದರೆ, ಕನೆಕ್ಟೋಲೋಗ್ಸ್‌ನಲ್ಲಿ ಒಬ್ಬ ವ್ಯಕ್ತಿ ಒಂದು ದೊಡ್ಡ ಕಥೆಯನ್ನು ರೂಪಿಸಲು ಹಲವಾರು ಪಾತ್ರಗಳ ಮೂಲಕ ಒಬ್ಬನೇ ಅನೇಕ ವ್ಯಕ್ತಿತ್ವಗಳನ್ನು ಪ್ರದರ್ಶಿಸುವ ಮೂಲಕ ತನ್ನ ಪರ್ಫಾಮೆನ್ಸ್ ಅನ್ನು ಅಭಿವೃದ್ದಿಪಡಿಸಿಕೊಳ್ಳುತ್ತಾನೆ.

ಈ ಮೂಲಕ ಕಥೆಯನ್ನು ಹೇಳುವ ವಿಶಿಷ್ಟ ಶೈಲಿಯನ್ನು ಮಿಸ್ಟ್‌ಪಿಟ್‌ ಎಂಬ ಪ್ರಕಾರವನ್ನು ರೂಪಿಸಲಾಗಿದೆ. ಇದು ರೇಖಾತ್ಮಕವಲ್ಲದ ಹಾಗೂ ಸಮಯ ಮತ್ತು ಸ್ಥಳದ ಪರಿಜ್ಞಾನದೊಂದಿಗೆ ನಟನ ಕಾರ್ಯಕ್ಷಮತೆಯನ್ನು ಪರಿಗಣಿಸುತ್ತದೆ.

ಒಬ್ಬ ರಂಗ ನಟನ ದೃಷ್ಟಿಕೋನದಲ್ಲಿ ಹೇಳುವುದಾದರೇ, ಇದೊಂದು ಅತ್ಯಂತ ಕಠಿಣವಾದ ಪಾತ್ರವನ್ನು ನಿರ್ವಹಿಸುವ ಕಲೆಯಾಗಿದೆ. ಎಲ್ಲಾ ನಟರು ಒಂದೇ ವೇದಿಕೆಯಲ್ಲಿ ಇರುವಾಗ ಒಬ್ಬ ನಟ ಹಲವಾರು ಪಾತ್ರಗಳನ್ನು ಒಂದೇ ಸಮಯದಲ್ಲಿ ಒಂದು ಕಥೆಯಿಂದ ಇನ್ನೊಂದು ಕಥೆಗೆ ಪಾತ್ರ ಪ್ರವೇಶವನ್ನು ಮಾಡ ಬೇಕಾಗುತ್ತದೆ. ಈ ಶೈಲಿಯನ್ನು ಪ್ರದರ್ಶಿಸಲು ರಂಗ ನಟ ಒಂದೇ ಜಾಗದಲ್ಲಿ ಬೇರೆ ಬೇರೆ ಸಮಯದಲ್ಲಿ ಹಲವಾರು ಪಾತ್ರಗಳನ್ನು ಪ್ರದರ್ಶಿಸುವುದು ನೋಡುವುದು ಪ್ರೇಕ್ಷಕನಿಗೆ ಅನಿರೀಕ್ಷಿತ ಹಾಗೂ ಅದ್ಭುತವಾದ ಅನುಭವನ್ನು ನೀಡುತ್ತದೆ.

ನಾಟಕದ ವಿಶೇಷತೆ ಏನು?

ಮನುಷ್ಯ ಜೀವನದ ಜಂಜಾಟ, ಬದುಕಿಗೆ ಬೇಕಾದ ಭರವಸೆ, ನಂಬಿಕೆ ಮತ್ತು ಜೀವನದ ಮೌಲ್ಯಗಳನ್ನ ನಾಟಕ ಒಳಗೊಂಡಿದ್ದು, ಮಹಿಳೆ ಸಮಾಜದಲ್ಲಿ ಎದುರಿಸುತ್ತಿರುವ ನೋವು, ಅದರ ವಿರುದ್ಧದ ಹೋರಾಟದ ಮಹಿಳೆಯ ಸಬಲೀಕರಣದ ಮಹತ್ವವನ್ನು ನಾಟಕದಲ್ಲಿ ಹೇಳಲು ಮುಂದಾಗಿದ್ದಾರೆ. ಮನರಂಜನೆಯ ಜೊತೆಯಲಿ ಆಕ್ಷನ್, ಥ್ರಿಲ್ಲಿಂಗ್ ಹಾಗೂ ಕಾಮಿಡಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮಿಸ್ಪಿತ್ ತಂಡ ರೆಡಿಯಾಗಿದೆ. ಒಟ್ಟಿನಲ್ಲಿ ಒಂದು ಅದ್ಭುತ ಕಥೆಯನ್ನು ತಮ್ಮ ಅಭಿನಯದ ಮೂಲಕ ಆಡಿಯನ್ಸ್ ಮನಸ್ಸಿಗೆ ಮುಟ್ಟುವುದರ ಜೊತೆಗೆ ಸಮಾಜಕ್ಕೊಂದು ಸಂದೇಶ ನೀಡಲು ಮುಂದಾಗಿದೆ.

"ಒಂದು ಗುಂಪಿನಂತೆ 6 ವರ್ಷಗಳ ನಂತರ ತನ್ನ ಮೂಲ ನಾಟಕಗಳೊಂದಿಗೆ ಮರಳಿ ಬರುತ್ತಿದೆ. ಇದು ನಮ್ಮ ಮೂರನೇ ಆವೃತ್ತಿಯಾಗಿದೆ. ಸುಮಾರು 6 ವರ್ಷಗಳ ಅಂತರದ ನಂತರ ಕನೆಕ್ಟಲಾಗ್‌ಗಳು ಈ ಸೀಸನ್‌ನಲ್ಲಿ ಮತ್ತೆ ಪ್ರಸ್ತುತಪಡಿಸಲಾಗುತ್ತಿದೆ. ಭರವಸೆ, ನಂಬಿಕೆ ಮತ್ತು ಜೀವನದ ಸುತ್ತ ಕಥೆಗಳನ್ನು ಬಿಚ್ಚಿಡುವುದು - ಅವುಗಳಲ್ಲಿ ಹೆಚ್ಚಿನವು ಮಹಿಳೆಯರ ಸುತ್ತ ಕೇಂದ್ರೀಕೃತವಾಗಿವೆ. ಆಕೆಯ ಪ್ರಯಾಣ, ಹೋರಾಟ ಮತ್ತು ಹೆಚ್ಚು ಮುಖ್ಯವಾಗಿ, ಅವಳ ಗೆಲುವು ಇಲ್ಲಿ ಹೈಲೈಟ್. ಈ ನಾಟಕ ಎಲ್ಲಾ ಸಮಕಾಲೀನ ಶೈಲಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಇದು ಆಕ್ಷನ್, ಥ್ರಿಲ್ಲರ್, ಹಾಸ್ಯ, ನಾಟಕ ಪ್ರಕಾರವನ್ನು ಹೊಂದಿದೆ. ಈ ನಾಟಕವು ಬಾಣಸವಾಡಿಯ ಬಟರ್‌ಫ್ಲೈ ಟ್ಯಾಲೆಂಟ್ ಅಕಾಡೆಮಿಯಲ್ಲಿ ಜುಲೈ 15 ಮತ್ತು 16 ರಂದು ನಡೆಯುತ್ತಿದೆ." ಎಂದು ತಂಡ ಹೇಳಿದೆ.

More from Filmibeat

English summary
This weekend Misfit Drama Team performing very different Connectologs v3.0 the phoenix, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X