'ತಿಥಿ' ಸಿನಿಮಾದ ನಟಿ ಪೂಜಾ ನಿಶ್ವಿತಾರ್ಥ: ಡಿಸೆಂಬರ್‌ನಲ್ಲಿ ಮದುವೆ!

ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಬೇಜಾನ್ ಸದ್ದು ಮಾಡಿತ್ತು. ಆಮಿರ್ ಖಾನ್‌ರಿಂದ ಹಿಡಿದು ಸೂಪರ್‌ಸ್ಟಾರ್‌ಗಳೆಲ್ಲಾ ಆ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದರು. ಅದುವೇ 'ತಿಥಿ'. ಈ ಸಿನಿಮಾ ಕನ್ನಡಕ್ಕೆ ಒಂದಿಷ್ಟು ಹೊಸ ಪ್ರತಿಭೆಗಳ ಪರಿಚಯವಾಗಿತ್ತು. ಗಡ್ಡಪ್ಪ ಜೊತೆ ಸಿನಿಮಾದ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ ನಟಿ ಪೂಜಾ ಕೂಡ ಮೆಚ್ಚುಗೆ ಗಳಿಸಿದ್ದರು. ದಿಢೀರನೇ 'ತಿಥಿ' ಸಿನಿಮಾ ಖ್ಯಾತಿಯ ಪೂಜಾ ಮತ್ತೆ ಸುದ್ದಿಯಲ್ಲಿದ್ದಾರೆ.

'ತಿಥಿ' ಸಿನಿಮಾ ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅದ್ಯಾಕೋ ಕೆಲವು ವರ್ಷಗಳಿಂದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಪೂಜಾ ಸುದ್ದಿಯಲ್ಲಿರುವುದಕ್ಕೆ ಕಾರಣ ಸಿನಿಮಾ ಅಲ್ಲ. ಅವರು ಕೆಲವು ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪೂಜಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಇಂಜಿನಿಯರ್ ಜೊತೆ ನಿಶ್ಚಿತಾರ್ಥ

ಇಂಜಿನಿಯರ್ ಜೊತೆ ನಿಶ್ಚಿತಾರ್ಥ

ನಟಿ ಪೂಜಾ ಅವರ ಎಂಗೇಜ್ಮೆಂಟ್ ಪ್ರೇಮ್ ಎಂಬುವವರೊಂದಿಗೆ ನಡೆದಿವೆ. ಪ್ರೇಮ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಇವರ ಫೋಟೊಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆ ಫೋಟೊಗಳು ವೈರಲ್ ಆಗಿವೆ. ಸಿನಿಮಾ ಪ್ರೇಮಿಗಳಿಗೆ ಮತ್ತೆ 'ತಿಥಿ' ಸಿನಿಮಾ ಖ್ಯಾತಿಯ ಪೂಜಾ ನೆನಪಾಗಿದ್ದು, ಶುಭಾಶಯಗಳನ್ನು ತಿಳಿಸಿದ್ದಾರೆ. 'ತಿಥಿ' ಸಿನಿಮಾದಲ್ಲಿ ಪೂಜಾ, ಕಾವೇರಿ ಎಂಬ ಪಾತ್ರದಲ್ಲಿ ಸಿನಿಪ್ರಿಯರ ಮನಗೆದ್ದಿದ್ದರು.

ಡಿಸೆಂಬರ್‌ನಲ್ಲಿ ಪೂಜಾ ಮ್ಯಾರೇಜ್

ಡಿಸೆಂಬರ್‌ನಲ್ಲಿ ಪೂಜಾ ಮ್ಯಾರೇಜ್

ಸದ್ಯ ಪೂಜಾ ನಿಶ್ವಿತಾರ್ಥ ನೆರವೇರಿದೆ. ಇನ್ನು ಈ ವರ್ಷ ಕೊನೆಯಲ್ಲಿ ಅಂದ್ರೆ, ಡಿಸೆಂಬರ್ ತಿಂಗಳ 3 ಮತ್ತು 4ರಂದು ಪೂಜಾ ಹಾಗೂ ಪ್ರೇಮ್ ಅವರ ವಿವಾಹ ಜರುಗಲಿದೆ ಎಂದು ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಕೊನೆಯಲ್ಲಿ ಪೂಜಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

'ತಿಥಿ' ಬಳಿಕ ನಟಿಸಿದ ಸಿನಿಮಾ ಯಾವುದು?

'ತಿಥಿ' ಬಳಿಕ ನಟಿಸಿದ ಸಿನಿಮಾ ಯಾವುದು?

ತಿಥಿ ಸಿನಿಮಾದ ಕಾವೇರಿ ಪಾತ್ರಕ್ಕೆ ಪೂಜಾಗೆ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಲಭಿಸಿತ್ತು. ತಿಥಿ ಸಿನಿಮಾದಲ್ಲಿ ಉತ್ತಮ ಹೆಸರು ಗಳಿಸಿದ್ದ ಪೂಜಾಗೆ ಸಿನಿಮಾ ಜರ್ನಿಗೆ ಬ್ರೇಕ್ ಹಾಕಿದ್ದರು. 'ತಿಥಿ' ಬಳಿಕ ಪೂಜಾ 'ದಾರಿ ಯಾವುದಯ್ಯ ವೈಕುಂಠಕೆ' ಮತ್ತು 'ನೀವು ಕರೆ ಮಾಡಿದ ಚಂದದಾರರು ಬಿಜಿಯಾಗಿದ್ದಾರೆ' ಎಂಬ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಪೂಜಾ MCA ಗ್ರ್ಯಾಜುವೇಟ್

ಪೂಜಾ MCA ಗ್ರ್ಯಾಜುವೇಟ್

ನಟಿ ಪೂಜಾ ರಿಯಲ್ ಲೈಫ್ ಸಿನಿಮಾದಿಂದ ಕೊಂಚ ಬೇರೆಯಾಗಿ ಕಾಣಿಸುತ್ತೆ. ಸಿನಿಮಾದಲ್ಲಿ ನಟಿಸಿದ್ದರೂ, MCA ಮುಗಿಸಿ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಮತ್ತೆ ಸ್ಯಾಂಡಲ್​ವುಡ್​ಗೆ ಕಂಬ್ಯಾಕ್ ಮಾಡುತ್ತಾರಾ? ಅನ್ನೋ ಬಗ್ಗೆ ಮಾಹಿತಿ ಇಲ್ಲ.

More from Filmibeat

English summary
Thithi Movie Actress Pooja Engagement With Software Engineer Prem, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X