Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಬಿರಿಯಾನಿ ನಮ್ದು.. ಕ್ರಾಂತಿ ನಿಮ್ದು" : ಒಂದಕ್ಕೊಂದು ಬಿರಿಯಾನಿ ಕೊಟ್ಟು ದರ್ಶನ್ ಫ್ಯಾನ್ಸ್ ಸಂಭ್ರಮ!
2022 ಕನ್ನಡ ಸಿನಿಮಾಗಳು ಅಬ್ಬರಿ ಬೊಬ್ಬಿರಿದಿವೆ. ಇನ್ನು 2023ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೊಸ ವರ್ಷದ ಮೊದಲ ತಿಂಗಳಲ್ಲಿಯೇ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗುತ್ತಿದ್ದು ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
ಬಹಳ ದಿನಗಳ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಅಭಿಮಾನಿಗಳೂ ಕೂಡ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಬಿಡುಗಡೆಗೆ ಇನ್ನೂ ಮೂರು-ನಾಲ್ಕು ವಾರ ಇರುವಾಗಲೇ ಡಿ ಬಾಸ್ ಫ್ಯಾನ್ಸ್ ಸೆಲೆಬ್ರೆಷನ್ ಶುರುವಾಗಿದೆ.
ಅಪ್ಪು
ಫ್ಯಾನ್ಸ್
ಮುತ್ತಿಗೆ
ಬಳಿಕ
ದರ್ಶನ್
ಜೊತೆ
ಚರ್ಚೆಗೆ
ಮುಂದಾದ
ಫಿಲ್ಮ್
ಚೇಂಬರ್:
ಮುಂದೇನು?
'ಕ್ರಾಂತಿ' ಇದೇ ಜನವರಿ 26ಕ್ಕೆ ರಾಜ್ಯಾದ್ಯಾಂತ ರಿಲೀಸ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳೇ ವಿಭಿನ್ನವಾಗಿ ಪ್ರಚಾರ ಮಾಡುವುದಕ್ಕೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಕೆಂಗೇರಿಯ ಬಿರಿಯಾನಿ ಹೊಟೇಲ್ ಒಂದಕ್ಕೊಂದು ಒಂದು ಬಿರಿಯಾನಿಯನ್ನು ಫ್ರೀಯಾಗಿ ನೀಡಲು ಮುಂದಾಗಿದೆ.

ಒಂದಕ್ಕೆ ಒಂದು ಬಿರಿಯಾನಿ ಫ್ರೀ
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಪ್ರಚಾರಕ್ಕೆ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದು ಕಡೆ ತಮ್ಮದೇ ರೀತಿಯಲ್ಲಿ ಸಂಭ್ರಮಿಸಲು ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಅದರಲ್ಲೊಬ್ಬರು "ಬಿರಿಯಾನಿ ನಮ್ದು.. ಕ್ರಾಂತಿ ನಿಮ್ದು" ಅಂತಿದ್ದಾರೆ. ಬೆಂಗಳೂರಿನ ಕೆಂಗೇರಿ ಉಪನಗರ ಸಮೀಪವಿರೋ ತೂಗುದೀಪ ದೊನ್ನೆ ಬಿರಿಯಾನಿ ಮನೆ ಹೊಟೇಲ್ ಒಂದು ಬಿರಿಯಾನಿಗೆ ಇನ್ನೊಂದು ಬಿರಿಯನಿಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.
Kranti
Movie
Trailer
:
ಬಹುನಿರೀಕ್ಷಿತ
ಕ್ರಾಂತಿ
ಚಿತ್ರದ
ಟ್ರೈಲರ್
ಬಿಡುಗಡೆ
ದಿನಾಂಕ
ಘೋಷಣೆ

ಒಂದು ದಿನ ಮಾತ್ರ ಈ ಆಫರ್
ಒಂದು ಬಿರಿಯಾನಿಗೆ ಇನ್ನೊಂದು ಬಿರಿಯಾನಿ ಉಚಿತವಾಗಿ ನೀಡುತ್ತಿದ್ದಾರೆ. ಆದರೆ, ಇದು ಲಿಮಿಟೆಡ್ ಆಫರ್. 'ಕ್ರಾಂತಿ' ಸಿನಿಮಾ ಬಿಡುಗಡೆಯಾಗುತ್ತಿರುವ ದಿನ ಮಾತ್ರ ಆಫರ್ ಚಾಲ್ತಿಯಲ್ಲಿ ಇರುತ್ತೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಮಾತ್ರ ಬಿರಿಯಾನಿ ಆಫರ್ ಇರುತ್ತೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿರಿಯಾನಿ ಆಫರ್ ಟ್ರೆಂಡಿಂಗ್‌ನಲ್ಲಿದೆ.

'ಕ್ರಾಂತಿ' ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ
ದರ್ಶನ್ ಕಾಲಿಗೆ ಚಕ್ರ ಕಟ್ಟಿಕೊಂಡು 'ಕ್ರಾಂತಿ' ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಮೈಸೂರು,ಹೊಸಪೇಟೆ ಹಾಗೂ ಹುಬ್ಬಳ್ಳಿಯಲ್ಲಿ ಸಿನಿಮಾದ ಒಂದೊಂದು ಹಾಡುಗಳನ್ನು ರಿಲೀಸ್ ಮಾಡಿದ್ದಾಗಿದೆ. ಜನವರಿ 7ನೇ ತಾರೀಕಿನಂದು 'ಕ್ರಾಂತಿ' ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ಟ್ರೈಲರ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ.

'ಕ್ರಾಂತಿ' ಟ್ರೈಲರ್‌ಗೆ ಬರುತ್ತಾರಾ ಕಿಚ್ಚ?
ಕಿಚ್ಚ ಸುದೀಪ್ ಪತ್ರಕ್ಕೆ ದರ್ಶನ್ ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ಕುಚಿಕುಗಳು ಮತ್ತೆ ಒಂದಾದ್ರು ಅಂತ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆನೇ ಇಬ್ಬರ ಅಭಿಮಾನಿಗಳು ಕೂಡ 'ಕ್ರಾಂತಿ' ಟ್ರೈಲರ್ ಲಾಂಚ್‌ಗೆ ಕಿಚ್ಚ ಸುದೀಪ್ ಅನ್ನು ಅತಿಥಿಯಾಗಿ ಕರೆಸಿ ಎಂದು ಬೇಡಿಕೆ ಇಟ್ಟಿದ್ದರು. ಹೀಗಾಗಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಬರುತ್ತಾರಾ? ಅನ್ನೋದು ಕುತೂಹಲದಲ್ಲಿದ್ದಾರೆ.