ಅಭಿಷೇಕ್ ಅಂಬರೀಶ್-ಅವಿವಾ ಬೀಗರ ಊಟದಲ್ಲಿ 1000 ಮಂದಿಗೆ ಕೆಲಸ: ಯಾವ್ಯಾವ ಕೆಲಸಕ್ಕೆ ಎಷ್ಟೆಷ್ಟು ಮಂದಿ?

ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಮಂಡ್ಯದ ಜನರ ನಡುವಿನ ಸಂಬಂಧವೇ ಹೇಗಿತ್ತು? ಅನ್ನೋದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಂಡ್ಯ ಜನರ ಮೇಲೆ ರೆಬೆಲ್ ಸ್ಟಾರ್ ಪ್ರೀತಿ ಅಮರ. ಅವರೂ ಅಷ್ಟೇ ಅಂಬರೀಶ್‌ ಅನ್ನು ತಮ್ಮ ಮನೆ ಮಗ ಅಂತಲೇ ಭಾವಿಸಿದ್ದರು. ಅಂಬಿ ಬೈದರೂ ಅದು ಹೊಗಳಿಕೆ ಅಂತಲೇ ಭಾವಿಸಿದ್ದರು.

ಅಂಬರೀಶ್ ಮೇಲೆ ಮಂಡ್ಯದ ಜನತೆ ಇಟ್ಟಿರುವ ಪ್ರೀತಿಗೆ ಬೀಗರ ಊಟವನ್ನು ಅಲ್ಲೇ ಆಯೋಜನೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಮಂದಿ ಈ ಸಮಾರಂಭಕ್ಕೆ ಬರುವ ನಿರೀಕ್ಷೆಯಿದೆ. ಹೀಗಾಗಿ ಭರ್ಜರಿ ನಾನ್ ವೆಬ್ ಊಟವನ್ನು ಆಯೋಜನೆ ಮಾಡಲಾಗಿದೆ.

Thousand members working for Abhishek Ambareesh Aviva Bidapa beegara oota here is the details

ಈ ಒಂದು ದಿನ ಮಂಡ್ಯದ ಸುಮಾರು ಸಾವಿರ ಮಂದಿ ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಹಾಗಿದ್ದರೆ, ಬೀಗರ ಔತಣ ಕೂಟದಲ್ಲಿ ಎಷ್ಟು ಮಂದಿ ಅಡುಗೆ ಮಾಡಿದ್ದಾರೆ? ಸಾವಿರ ಮಂದಿ ಏನೇನು ಕೆಲಸ ಮಾಡುತ್ತಿದ್ದಾರೆ? ಎಷ್ಟು ಕೆಜಿ ಮಾಂಸ ಬಳಕೆಯಾಗಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

ಅಡುಗೆ ಮಾಡುವುದಕ್ಕೆ 400 ಮಂದಿ

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಇಬ್ಬರೂ ಮಂಡ್ಯದ ಗೆಜ್ಜಲಗೆರೆಯ ಬೀಗರ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಂಡ್ಯದ ಜನರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ನಿರೀಕ್ಷೆ ಮಾಡಿರುವ ಲಕ್ಷ ಮಂದಿಗೆ ಊಟದ ಜವಾಬ್ದಾರಿಯನ್ನು ಪರಿಪೂರ್ಣ ಕೇಟರಿಂಗ್‌ನ ಎನ್‌ಎಸ್ ಪ್ರಕಾಶ್ ವಹಿಸಿಕೊಂಡಿದ್ದಾರೆ.

Thousand members working for Abhishek Ambareesh Aviva Bidapa beegara oota here is the details

ನಾನ್ ವೆಜ್ ಊಟ ಸಿದ್ಧಪಡಿಸುವುದಕ್ಕೆ ಪ್ರಮುಖ ಬಾಣಸಿಗರೇ 200 ಮಂದಿ ನಿಯೋಜನೆ ಮಾಡಲಾಗಿದೆ. ಇವರು ಮಸಾಲೆಯಿಂದ ಹಿಡಿದು ರುಚಿಗೆ ತಕ್ಕಂತೆ ಪ್ರತಿಯೊಂದನ್ನು ನೋಡಿಕೊಳ್ಳುತ್ತಾರೆ. ಇವರಿಗೆ ಸಹಾಯಕರಾಗಿ 200 ಮಂದಿ ಕೆಲಸ ಮಾಡುತ್ತಿದ್ದಾರೆ. ಅಡುಗೆ ಡಿಪಾರ್ಟ್‌ಮೆಂಟ್‌ನಲ್ಲಿಯೇ ಸುಮಾರು 400 ಮಂದಿ ಕೆಲಸ ಮಾಡುತ್ತಿದ್ದಾರೆ.

ಊಟ ಬಡಿಸುವುದಕ್ಕೆ 400 ಮಂದಿ

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಬೀಗರ ಔತಣಕೂಟಕ್ಕೆ ಅಡುಗೆ ಮಾಡುವವರೇ 400 ಮಂದಿಯಾದ್ರೆ, ಊಟ ಬಡಿಸುವವರೂ 400 ಮಂದಿ ಇದ್ದಾರೆ. ಮಂಡ್ಯ, ಬೆಂಗಳೂರು ಸೇರಿದಂತೆ ವಿವಿದೆಡೆಯಿಂದ ಜನರು ಆಗಮಿಸುವ ಹಿನ್ನೆಲೆಯಲ್ಲಿ ಇಷ್ಟು ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೇ ಕ್ಲೀನಿಂಗ್ ಮಾಡುವುದಕ್ಕೆ 100 ಮಂದಿ ಮಹಿಳೆಯರು ಇದ್ದಾರೆ.

ಹಾಗೆ ಸೆಕ್ಯೂರಿಗೆ ಅಂತ 100 ಮಂದಿ, ದಿನಸಿ ಪದಾರ್ಥಗಳನ್ನು ಇಟ್ಟಿರುವ ಗೋಡನ್ ಕಾಯುವುದಕ್ಕೆ ಹಾಗೂ ಇನ್ನಿತರ ಕೆಲಸ 100 ಮಂದಿ ಇದ್ದಾರೆ. ಒಟ್ಟು ಇವತ್ತು ಒಂದೇ ದಿನ ಸುಮಾರು 1000 ಮಂದಿ ಈ ಬೀಗರ ಊಟದ ಸಮಾರಂಭದಲ್ಲಿ ಕೆಲಸ ಮಾಡುತ್ತಿದ್ದಾರೆ.

7 ಅಲ್ಲ 10 ಟನ್ ಚಿಕನ್, ಮಟನ್

ಬೀಗರ ಊಟ ಆರಂಭಕ್ಕೂ ಮುನ್ನ ಸುಮಾರು 7 ಟನ್ ಮಟನ್ ಹಾಗೂ 7 ಟನ್ ಚಿಕನ್‌ನಲ್ಲಿ ಬೀಗರ ಊಟ ಸಿದ್ಧಪಡಿಸುವುದಾಗಿ ಹೇಳಲಾಗಿತ್ತು. ಆದ್ರೀಗ ಬಾಣಸಿಗರೇ ಕೊಟ್ಟಿರುವ ಮಾಹಿತಿ ಪ್ರಕಾರ, 7 ಟನ್ ಮಟನ್, 3 ಟನ್ ಬೋಟಿ ಹಾಗೂ 10 ಟನ್ ಚಿಕನ್ ತರಿಸಲಾಗಿದೆ. ಮುದ್ದೆ, ಅನ್ನ ಸಾಂಬರ್, ಮಟನ್ ಚಾಪ್ಸ್, ಬೋಡಿ ಗೊಜ್ಜು, ಕೈಮಾ ಸೇರಿದಂತೆ ಹಲವು ರೀತಿ ನಾನ್ ವೆಜ್ ಖಾದ್ಯಗಳನ್ನು ಬಳಸಲಾಗಿದೆ.

ಬೆಳಗ್ಗೆ 11 ಗಂಟೆಯಿಂದಲೇ ಊಟಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗಾಗಿ ಕಿಕ್ಕಿರಿದು ಜನರು ಸೇರಿದ್ದಾರೆ. ಅಂಬರೀಶ್ ಪುತ್ರ ಅಭಿಷೇಕ್ ಹಾಗೂ ಅವಿವಾಗೆ ಆಶೀರ್ವಾದ ನೀಡಿ, ನಾನ್ ವೆಜ್ ಊಟ ಸವಿದು ಹಿಂತಿರುಗುತ್ತಿದ್ದಾರೆ.

More from Filmibeat

English summary
Thousand members working for Abhishek Ambareesh and Aviva Bidapa Beegara Oota here are the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X