For Quick Alerts
  ALLOW NOTIFICATIONS  
  For Daily Alerts

  ನೀಲಿ ರಾಣಿ ಸನ್ನಿ ಲಿಯೋನ್ ಗೆ ತರಚಿದ ಗಾಯಗಳು

  By Srinath
  |

  ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

  ನೀಲಿ ಚಿತ್ರಗಳಿಗಷ್ಟೇ ಸೀಮಿತವಾಗದೆ ಆಕ್ಷನ್ ಪ್ಯಾಕ್ಡ್ ಚಿತ್ರಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಸನ್ನಿ ಲಿಯೋನ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೇವತೆಯಾಗಿದ್ದಾರೆ. ಈ ಪ್ರಯತ್ನದಲ್ಲಿರುವಾಗಲೇ ಚಿತ್ರೀಕರಣದ ವೇಳೆ ಕಾರು ಅಪಘಾತದಲ್ಲಿ ಸನ್ನಿ ಲಿಯೋನ್ ಗಾಯ ಮಾಡಿಕೊಂಡಿದ್ದಾರೆ.

   'ಟೀನಾ' ಸನ್ನಿ ಲಿಯೋನ್ ಗೆ ಏನಾಯ್ತು

  'ಟೀನಾ' ಸನ್ನಿ ಲಿಯೋನ್ ಗೆ ಏನಾಯ್ತು

  ಏನಾಯ್ತು ಅಂದರೆ ಆಕ್ಷನ್ ಪ್ಯಾಕ್ಡ್ ಚಿತ್ರಕ್ಕಾಗಿ ಸ್ವತಃ ಸ್ಟಂಟ್ ಮಾಡಲು 'ಟೀನಾ' ಸನ್ನಿ ಲಿಯೋನ್ ಮುಂದಾಗಿದ್ದಾರೆ. ಆದರೆ ಸ್ವಲ್ಪ ಓವರ್ ಆಗಿ ಆ್ಯಕ್ಟ್ ಮಾಡಿದ ಸಹ ನಟ ಸೀದಾ ಆಕೆಯ ಕಿಬ್ಬೊಟ್ಟೆ ಮತ್ತು ಎದೆಗೂಡಿಗೆ ಡ್ಯಾಷ್ ಹೊಡೆದಿದ್ದಾನೆ. ಸನ್ನಿ ಲಿಯೋನ್ ಗೆ ನಿಜಕ್ಕೂ ಆಘಾತ/ ಅಪಘಾತಗಳೆರಡೂ ಆಗಿದೆ.

  ಶೀಘ್ರ ಚೇತರಿಕೆಗೆ ಅಭಿಮಾನಿಗಳ ಹಾರೈಕೆ

  ಶೀಘ್ರ ಚೇತರಿಕೆಗೆ ಅಭಿಮಾನಿಗಳ ಹಾರೈಕೆ

  ತತ್ಫಲವಾಗಿ ಸನ್ನಿ ಲಿಯೋನ್ ಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತ್ತ ಗಾಬರಿಗೊಂಡಿರುವ ಅಭಿಮಾನಿಗಳು ತಮ್ಮ ಪಾಲಿನ ಆರಾಧ್ಯ ದೇವತೆ ಬೇಗನೆ ಚೇತರಿಸಿಕೊಳ್ಳಲಿ ಹಾರೈಸಿದ್ದಾರೆ.

  Tina and Lolo ಮುಂದಿನ ಏಪ್ರಿಲಿನಲ್ಲಿ ಬಿಡುಗಡೆ

  Tina and Lolo ಮುಂದಿನ ಏಪ್ರಿಲಿನಲ್ಲಿ ಬಿಡುಗಡೆ

  Tina and Lolo ಎಂಬುದು ಸನ್ನಿ ಲಿಯೋನ್ ನೂತನ ಚಿತ್ರ. ಚಿತ್ರದಲ್ಲಿ ಸನ್ನಿ ಲಿಯೋನ್ ಟೀನಾ ಪಾತ್ರಧಾರಿ. ಲೊಲೊ ಪಾತ್ರಧಾರಿ ಕರಿಷ್ಮಾ ತನ್ನಾ. ಅಂದಹಾಗೆ ಮುಂದಿನ ಏಪ್ರಿಲ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

  ಸನ್ನಿಯಿಂದ ಶೂಟಿಂಗ್, ಬೈಕ್ ರೇಸ್, ಹಾರ್ಸ್ ರೈಡಿಂಗ್

  ಸನ್ನಿಯಿಂದ ಶೂಟಿಂಗ್, ಬೈಕ್ ರೇಸ್, ಹಾರ್ಸ್ ರೈಡಿಂಗ್

  ಚಿತ್ರಕ್ಕಾಗಿ ಹರಸಾಹಸ ಪಡುತ್ತಿರುವ ಸನ್ನಿ ಲಿಯೋನ್, ಮೂತು ತಿಂಗಳಿಂದ ಭಾರಿ ತರಬೇತಿ ನಡೆಸಿದ್ದಾರೆ. ಖುದ್ದಾಗಿ ಅವರೇ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಚಿತ್ರದಲ್ಲಿ ಸನ್ನಿ ಲಿಯೋನ್ ರಿಂದ ಶೂಟಿಂಗ್, ಬೈಕ್ ರೇಸ್, ಹಾರ್ಸ್ ರೈಡಿಂಗ್ ಎಲ್ಲಾ ಇದೆಯಂತೆ. ಇನ್ನೇನು ಸಿನಿಮಾ ಚಿತ್ರೀಕರಣ ಕೊನೆಯ ಹಂತದಲ್ಲಿರುವಾಗ ಅಪಘಾತವಾಗಿ ಸನ್ನಿ, ರೆಸ್ಟ್ ತೆಗೆದುಕೊಳ್ಳುವಂತಾಗಿದೆ.

  ಸನ್ನಿ ಲಿಯೋನ್ ಗೆ ತರಚಿದ ಗಾಯಗಳು

  ಸನ್ನಿ ಲಿಯೋನ್ ಗೆ ತರಚಿದ ಗಾಯಗಳು

  ಇದಕ್ಕೂ ಮೊದಲು, ಬರೀ ದೇಹ ಪ್ರದರ್ಶನದಲ್ಲಿ ತೊಡಗಿದ್ದ ಸನ್ನಿ ಲಿಯೋನ್, ಇದೀಗ ಒಮ್ಮಗೇ ಆಕ್ಷನ್ ಚಿತ್ರಗಳಲ್ಲಿ ನಟಿಸಲು ಹೋಗಿ ಈ ಹಿಂದೆ ಒಂದಷ್ಟು ತರಚಿದ ಗಾಯಗಳನ್ನು ಮಾಡಿಕೊಂಡಿದ್ದಾರೆ ಎಂದು ಚಿತ್ರ ತಂಡ ಹೇಳಿದೆ.

  English summary
  Tina and Lolo starer Sunny Leone injured while shooting. During high-octane moment, a car stunt, Sunny injured herself. A stuntman banged into her and hurt her solar plexus and ribs. While the injury isn't too severe, she will be out of action for a few days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X