Toby Collection Day 1: 'ಟೋಬಿ' ಮೊದಲ ದಿನದ ಗಳಿಕೆ ಎಷ್ಟು? ವೀಕೆಂಡ್ ಕಲೆಕ್ಷನ್ ತುಂಬಾನೇ ಮುಖ್ಯ ಯಾಕೆ?
ರಾಜ್ ಬಿ ಶೆಟ್ಟಿಯ 'ಟೋಬಿ' ಜರ್ನಿ ಕೇಳಿದ್ದವರಿಗೆ ಸಹಜವಾಗಿಯೇ ಕುತೂಹಲ ಮೂಡಿತ್ತು. ಅದರಲ್ಲೂ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿದವರಿಗೆ 'ಟೋಬಿ'ಯನ್ನು ಕಣ್ತುಂಬಿಕೊಳ್ಳಲೇಬೇಕು ಅಂತ ಕಾದುಕುಳಿತಿದ್ದವರು ಅದೆಷ್ಟೋ ಮಂದಿ. ಕೊನೆಗೂ ನಿನ್ನೆ (ಆಗಸ್ಟ್ 25) 'ಟೋಬಿ' ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ.
ಮೊದಲ ದಿನ ಸಾಕಷ್ಟು ಮಂದಿ ಸಿನಿಮಾ ನೋಡಿದ್ದಾರೆ. ರಾಜ್ ಬಿ ಶೆಟ್ಟಿಯ ಸಿನಿಮಾ ರಾಜ್ಯದ ಹಲವು ಭಾಗಗಳಲ್ಲಿ ತುಂಬಿದ ಪ್ರದರ್ಶನ ಕಂಡಿದೆ. ಆದರೂ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ 'ಟೋಬಿ' ಮೊದಲ ದಿನದ ಕಲೆಕ್ಷನ್ ಬಗ್ಗೆ ಸಹಜವಾಗಿಯೇ ಕುತೂಹಲವಿದೆ.

ರಾಜ್ ಬಿ ಶೆಟ್ಟಿ ಇದೇ ಮೊದಲ ಬಾರಿಗೆ ಆಕ್ಷನ್ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ಮಾಸ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಅವಮಾನ ಮಾಡಿದವರಿಗೆ ಉತ್ತರ ಕೊಡುವುದಕ್ಕೆ 'ಟೋಬಿ' ಮಾಡಿದ್ದರು. ಈಗ ಅದೆಲ್ಲವನ್ನು ಪಕ್ಕಕ್ಕಿಟ್ಟು ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ರಾಜ್ ಬಿ ಶೆಟ್ಟಿ ಆಕ್ಷನ್ ಕಮರ್ಷಿಯಲ್ ಹೀರೊ ಆಗಿ ಗೆದ್ದರೇ? ಸಿನಿಮಾದ ಮುಂದಿನ ಭವಿಷ್ಯವೇನು? ಅನ್ನೋದು ತಿಳಿಯಲು ಮುಂದೆ ಓದಿ.
'ಟೋಬಿ' ಮೊದಲ ದಿನದ ಕಲೆಕ್ಷನ್ ಹೇಗಿದೆ?
ರಾಜ್ ಬಿ ಶೆಟ್ಟಿ ಕಮರ್ಷಿಯಲ್ ಹೀರೊ ಆಗಿ ಗೆದ್ದಿದ್ದಾರೆ. ರಾಜ್ ಬಿ ಶೆಟ್ಟಿ ಹಾಗೂ ಚೈತ್ರಾ ಆಚಾರ್ ಪಾತ್ರಗಳನ್ನು ತೆರೆಕಂಡು ಪ್ರೇಕ್ಷಕರು ಮೂಖ ವಿಸ್ಮಿತರಾಗಿದ್ದಾರೆ. ಮತ್ತೆ ಕೆಲವರು ಕಾಂತಾರದಷ್ಟೇ ಪವರ್‌ಫುಲ್ ಆಗಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಮೊದಲ ದಿನ ಅಡ್ವಾನ್ಸ್ ಬುಕಿಂಗ್ ಚೆನ್ನಾಗಿಯೇ ಆಗಿತ್ತು. ಹೀಗಾಗಿ 'ಟೋಬಿ'ಯ ಮೊದಲ ದಿನ ಗಳಿಕೆ ಮೇಲೆ ಎಲ್ಲರ ಕಣ್ಣಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಟೋಬಿ' ಮೊದಲ ದಿನ ರಾಜ್ಯಾದ್ಯಂತ 1.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಮೊದಲ ದಿನದ ಗಳಿಕೆ ಕಡಿಮೆ ಆಯ್ತಾ..? ಹೆಚ್ಚಾಯ್ತಾ?
'ಟೋಬಿ' ಫಸ್ಟ್ ಡೇ ಕಲೆಕ್ಷನ್ ಟ್ರೇಡ್ ಟ್ರ್ಯಾಕರ್ಸ್ ಹಾಕಿರುವ ಲೆಕ್ಕ ಅಷ್ಟೇ. ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಒಂದು ವೇಳೆ ಇದೆ ಅಂಕಿ ಅಂಶಗಳು ಇದ್ದಲ್ಲಿ 'ಟೋಬಿ' ಪಾಸಿಟಿವ್ ಡೈರೆಕ್ಷನ್‌ನಲ್ಲಿ ಇದ್ದಾನೆ ಎಂದಾಗುತ್ತೆ. ಪ್ಯಾನ್ ಇಂಡಿಯಾ ಸಿನಿಮಾ ಕಲೆಕ್ಷನ್ ನೋಡಿರುವವರಿಗೆ 'ಟೋಬಿ' ಕಲೆಕ್ಷನ್ ಚಿಕ್ಕದೆನಿಸಿರಬಹುದು. ಆದರೆ, ಕನ್ನಡದ ಮಟ್ಟಿಗೆ ಈ ಕಲೆಕ್ಷನ್ ಪಾಸಿಟಿವ್ ಆಗಿಯೇ ಇದೆ. ವೀಕೆಂಡ್‌ನಲ್ಲಿ ಸಿನಿಮಾ ಕಚ್ಚಿಕೊಂಡರೆ, ಮೊದಲ ಮೂರು ದಿನ ಆರೇಳು ಕೋಟಿ ರೂಪಾಯಿಗೆ ಮೋಸವಿಲ್ಲ.
ಸಪ್ತ ಸಾಗರದ ಜೊತೆ ಕ್ಲ್ಯಾಶ್
'ಟೋಬಿ' ಸಿನಿಮಾ ರಿಲೀಸ್ ಆದ ಒಂದು ವಾರದಲ್ಲಿಯೇ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ರಿಲೀಸ್ ಆಗುತ್ತಿದೆ. ಅಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ. ಹೀಗಾಗಿ ಮತ್ತೆ ಥಿಯೇಟರ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮೊದಲ ವಾರದಲ್ಲಿ ಅದೆಷ್ಟು ಕಲೆಕ್ಷನ್ ಮಾಡಲು ಸಾಧ್ಯವೋ ಅಷ್ಟು ಮಾಡಿದರೆ ತಂಡಕ್ಕೆ ಉತ್ತಮ. ಸದ್ಯ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ 'ಟೋಬಿ' 10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಮಾಸ್ ಅವತಾರದಲ್ಲಿ ಗೆದ್ದ 'ಟೋಬಿ'
ರಾಜ್ ಬಿ ಶೆಟ್ಟಿ ಮಾಸ್ ಹಾಗೂ ಕಮರ್ಷಿಯಲ್ ಹೀರೊ ಆಗಿ ಗೆದ್ದಿದ್ದಾರೆ. ಅವರು ಅಂದುಕೊಂಡಂತೆ 'ಟೋಬಿ' ಅವತಾರ ಸಿನಿಮಾ ಪ್ರಿಯರಿಗೆ ಕಿಕ್ ಕೊಟ್ಟಿದೆ. ಬೆಸಿಲ್ ಆಲ್ಚಕ್ಕಲ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ ಈ ಸಿನಿಮಾ ಮುಂದಿನ ದಿನಗಳಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ. ಸದ್ಯಕ್ಕೆ ವೀಕೆಂಡ್ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ಇದೆ.


Click it and Unblock the Notifications











