ಇಂದು ನಡೆಯಲಿದೆ ಹರಿಕೃಷ್ಣ ಮೃತದೇಹದ ಅಂತ್ಯಕ್ರಿಯೆ

By Naveen

Recommended Video

ಇನ್ನೆರಡು ದಿನ ಕಳೆದಿದ್ರೆ ಹುಟ್ಟಹಬ್ಬ ಆಚರಿಸಿಕೊಳ್ತಿದ್ರು ಹರಿಕೃಷ್ಣ..! | Filmibeat Kannada

ಭೀಕರ ರಸ್ತೆ ಅಪಘಾತದಲ್ಲಿ ನಿನ್ನೆ ನಿಧನರಾದ ಟಾಲಿವುಡ್ ನಟ ಹರಿಕೃಷ್ಣ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಫಿಲ್ಮ್ ನಗರದ ಮಹಾಪ್ರಸ್ಥಾನಂ ನಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.

tollywood actor nandamuri harikrishna final rituals will be held today evening at 4

ಸದ್ಯ ಹರಿಕೃಷ್ಣ ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿದೆ. ಮಧ್ಯಾಹ್ನ 1.30 ರವರೆಗೆ ಅಂತಿಮ ದರ್ಶನ ನಡೆಯುತ್ತದೆ. ಆ ಬಳಿಕ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗುತ್ತದೆ. ಹರಿಕೃಷ್ಣ ಅವರ ನಿವಾಸದಿಂದ ಫಿಲ್ಮ್ ನಗರಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ.

ಹರಿಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಅವರ ನಿವಾಸಕ್ಕೆ ಆಗಮಿಸಿದ್ದಾರೆ. ಚಿತ್ರರಂಗ ಗಣ್ಯರು ಹಾಗೂ ರಾಜಕೀಯ ಗಣ್ಯರು ಕೂಡ ಅಗಲಿದ ನಾಯಕನಿಗೆ ನಮನ ಸಲ್ಲಿಸಿದ್ದಾರೆ.

tollywood actor nandamuri harikrishna final rituals will be held today evening at 4

ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಮೆರವಣಿಗೆಯ ಮಾರ್ಗದುದ್ದಕ್ಕೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಮೆಹದಿ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ಸಂಪೂರ್ಣ ಸಂಚಾರವನ್ನು ಬಂದ್ ಮಾಡಲಾಗಿದೆ.

ಅಂದಹಾಗೆ, ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಲು ನಿನ್ನೆ ಬೆಳಗಿನ ಜಾವ 4.30ರ ಸಮಯದಲ್ಲಿ ಹರಿಕೃಷ್ಣ ಅವರು ಮನೆಯಿಂದ ಹೊರಟಿದ್ದರು. ನೆಲ್ಲೂರು ಜಿಲ್ಲೆಯ ಕಾವಲಿಗೆ ತೆರಳುತ್ತಿದ್ದಾಗ ತೆಲಂಗಾಣದ ನಲ್ಗೊಂಡ ಬಳಿಯ ಅನ್ನೆಪರ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

More from Filmibeat

English summary
Popular tollywood actor and politician NT Ramarao's son Nandamuri Harikrishna died in an accident on Wednesday near Nalginda, Telangana. Nandamuri Harikrishna final rituals will be held today evening at 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X