ಮೈಸೂರಿನಲ್ಲಿ 'ಗೇಮ್ ಚೇಂಜರ್': ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್

Mysore: ತೆಲುಗು ಚಿತ್ರರಂಗದ ಟಾಪ್ ಹೀರೊ ರಾಮ್ ಚರಣ್‌ ತೇಜಾ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಂಕರ್ ನಿರ್ದೇಶಿಸುತ್ತಿರುವ 'ಗೇಮ್ ಚೇಂಜರ್' ಶೂಟಿಂಗ್‌ಗಾಗಿ ಮೈಸೂರಿಗೆ ಬಂದಿರೋ ರಾಮ್ ಚರಣ್ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೈಸೂರಿಗೆ ಯಾವುದೇ ಚಿತ್ರರಂಗದ ನಟರು ಬಂದರೂ ಚಾಮುಂಡೇಶ್ವರಿ ಬೆಟ್ಟಕ್ಕೆ ಬಂದು ಮೈಸೂರಿನ ನಾಡದೇವತೆ ದರ್ಶನ್ ಪಡೆದು ಹೋಗುತ್ತಾರೆ. ಹೀಗಾಗಿ ಇಂದು (ಭಾನುವಾರ 3) ರಾಮ್‌ ಚರಣ್ ತೇಜಾ ತಮ್ಮ ಸಿನಿಮಾ 'ಗೇಮ್ ಚೇಂಜರ್' ತಂಡದೊಂದಿಗೆ ಬೆಟ್ಟಕ್ಕೆ ಆಗಮಿಸಿ, ಚಾಮುಂಡೇಶ್ವರಿ ತಾಯಿಯ ದರ್ಶನ್ ಪಡೆದು ತೆರಳಿದ್ದಾರೆ.

Tollywood mega power star Ram Charan visits chamundeshwari temple in mysore

ರಾಮ್ ಚರಣ್ ತೇಜಾ ಹಲವು ದಿನಗಳಿಂದ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ. ಶಂಕರ್ 'ಗೇಮ್ ಚೇಂಜರ್' ಶೂಟಿಂಗ್ ಶೆಡ್ಯೂಲ್ ಅನ್ನು ಮೈಸೂರಿನಲ್ಲಿ ಇಟ್ಟುಕೊಂಡಿದ್ದು, ಹಲವು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ರಾಮ್ ಚರಣ್ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಹೋಗಿದ್ದಾರೆ.

RRR ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ 'ಗೇಮ್ ಚೇಂಜರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ನಿರ್ದೇಶಕ ಶಂಕರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದರಿಂದ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದೆ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ, ಸಿನಿಮಾ ವೇಗವಾಗಿ ಶೂಟಿಂಗ್ ಮುಗಿಸುತ್ತಿಲ್ಲ. ಹೀಗಾಗಿ ರಾಮ್ ಚರಣ್ ಅಭಿಮಾನಿಗಳು ಕಾದೂ ಕಾದು ಸುಸ್ತಾಗುತ್ತಿದ್ದಾರೆ.

Tollywood mega power star Ram Charan visits chamundeshwari temple in mysore

ಶಂಕರ್ ಅತ್ತ ಕಮಲ್ ಹಾಸನ್ ನಟಿಸುತ್ತಿರುವ 'ಇಂಡಿಯನ್ 2' ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿದ್ದಾರೆ. ಇತ್ತ ರಾಮ್ ಚರಣ್ ನಟಿಸುತ್ತಿರುವ 'ಗೇಮ್ ಚೇಂಜರ್' ಶೂಟಿಂಗ್ ಕೂಡ ಮಾಡುತ್ತಿದ್ದಾರೆ. 'ಇಂಡಿಯನ್ 2' ಸೆಟ್ಟಿನಲ್ಲಿ ಅವಘಡ ನಡೆದಿದ್ದರಿಂದ ಸಿನಿಮಾ ಕೆಲವು ಕಾಲ ನಿಂತಿತ್ತು. ಆ ಗ್ಯಾಪ್‌ನಲ್ಲಿ ಶಂಕರ್ 'ಗೇಮ್ ಚೇಂಜರ್' ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಬಳಿಕ ಮತ್ತೆ 'ಇಂಡಿಯಾನ್ 2' ಆರಂಭ ಆಗಿದ್ದರಿಂದ ಎರಡೂ ಸಿನಿಮಾವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಸದ್ಯ ಶಂಕರ್ 'ಗೇಮ್ ಚೇಂಜರ್' ಶೂಟಿಂಗ್ ಮಾಡುತ್ತಿದ್ದು, ಆ ಸಿನಿಮಾ ಚಿತ್ರೀಕರಣಕ್ಕಾಗಿಯೇ ರಾಮ್ ಚರಣ್ ಮೈಸೂರಿಗೆ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಶೂಟಿಂಗ್ ನಡೆಯುತ್ತಿದ್ದು, ಇತ್ತೀಚೆಗೆ ತೆಲಂಗಾಣ ವಿಧಾನ ಸಭೆ ಚುನಾವಣೆಗೆ ವೋಟ್ ಮಾಡುವ ಸಲುವಾಗಿ ಹೈದರಾಬಾದ್‌ಗೆ ತೆರಳಿದ್ದರು. ಈಗ ಮತ್ತೆ ಮೈಸೂರಿಗೆ ಮರಳಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಗಳಾಗಿವೆ.

ಅಂದ್ಹಾಗೆ, ಸೆಲೆಬ್ರೆಟಿಗಳು ಮೈಸೂರಿಗೆ ಬಂದರೆ, ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದೇ ಮುಂದಕ್ಕೆ ಹೋಗುತ್ತಾರೆ. 'ಕೆಡಿ' ಸಿನಿಮಾ ಚಿತ್ರೀಕರಣಕ್ಕೆ ಮೈಸೂರಿಗೆ ಬಂದಿದ್ದ ಸಂಜಯ್ ದತ್ ಕೂಡ ಚಾಮುಂಡೇಶ್ವರಿ ಬೆಟ್ಟಕ್ಕೆ ಬಂದು, ದರ್ಶನ ಪಡೆದು ತೆರಳಿದ್ದರು. ಈಗ ರಾಮ್ ಚರಣ್ ತಾಯಿ ದರ್ಶನ ಪಡೆದಿರೋ ವಿಡಿಯೋ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
Amid Game Changer movie shooting Mega Power Star Ram Charan visits Chamundeshwari Temple
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X