5 ತಿಂಗಳಲ್ಲಿ ಈ 5 ಸಿನಿಮಾ ರಿಲೀಸ್ ಆಗುತ್ತಾ? 2023ರ ಟಾಪ್ 5 ಸಿನಿಮಾಗಳು ಇವೇನೆ!

2022 ಕನ್ನಡ ಚಿತ್ರರಂಗಕ್ಕೆ ಬಂಗಾರದ ವರ್ಷ. ಒಂದಲ್ಲ ಎರಡಲ್ಲ ಐದು ಪ್ಯಾನ್ ಇಂಡಿಯಾ ಸಿನಿಮಾಗಳು ಇಂಡಿಯನ್ ಬಾಕ್ಸಾಫೀಸ್‌ ಅನ್ನೇ ನಡುಗಿಸಿದ್ದವು. ಆದರೆ, 2023 ಕಥೆಯೇ ಬೇರೆ ಇದೆ.

'ಕೆಜಿಎಫ್ 2', 'ಕಾಂತಾರ', '777 ಚಾರ್ಲಿ', 'ಜೇಮ್ಸ್', 'ವಿಕ್ರಾಂತ್ ರೋಣ'. ಈ ಐದೂ ಸಿನಿಮಾಗಳು ದಿಗ್ಗಜರನ್ನೇ ಮಣಿಸಿದ್ದವು. 2022ರಲ್ಲಿ ಈ ಐದು ಸಿನಿಮಾಗಳಿಂದಾನೇ ಬಾಕ್ಸಾಫೀಸ್ ಕಲೆಕ್ಷನ್ 2 ಸಾವಿರ ಕೋಟಿ ರೂ. ದಾಟಿತ್ತು. ಆದರೆ, 2023ರಲ್ಲಿ ಕನ್ನಡ ಚಿತ್ರರಂಗ ನೀರಸ ಅಂತ ಅನಿಸೋಕೆ ಶುರುವಾಗಿದೆ.

2023ರಲ್ಲಿ 7 ತಿಂಗಳು ಮುಗಿದೇ ಹೋಯ್ತು. ಇನ್ನು ಉಳಿದ ಐದು ತಿಂಗಳಲ್ಲಿ ಕಾತುರದಿಂದ ಕಾಯುತ್ತಿರುವ ಈ ಐದು ಸಿನಿಮಾಗಳು ರಿಲೀಸ್ ಆಗುತ್ತವೆಯೇ? ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತವೆಯೇ? ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತವೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Top 5- Most Anticipated- Kannada movies-2023

ರಕ್ಷಿತ್ ಶೆಟ್ಟಿ-'ಸಪ್ತ ಸಾಗರದಾಚೆ ಎಲ್ಲೋ'

'777 ಚಾರ್ಲಿ' ಬಳಿಕ ರಕ್ಷಿತ್ ಶೆಟ್ಟಿ ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಈ ವರ್ಷವೇ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಕೂಡ ಒಂದು. ಇದು ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಐದು ತಿಂಗಳ ಒಳಗೆ ಈ ಸಿನಿಮಾ ರಿಲೀಸ್ ಆಗೋದು ಕೂಡ ಪಕ್ಕಾ.

'ಸಪ್ತ ಸಾಗರದಾಚೆ ಎಲ್ಲೋ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಆದರೂ ಇದಕ್ಕಿರೋ ಹೈಪ್ ಏನೂ ಕಮ್ಮಿಯಿಲ್ಲ. 'ಗೋದಿ ಬಣ್ಣ ಸಾಧಾರಾಣ ಮೈ ಕಟ್ಟು' ಬಳಿಕ ಹೇಮಂತ್ ಹಾಗೂ ರಕ್ಷಿತ್ ಜೊತೆಯಾಗುತ್ತಿರುವ ಸಿನಿಮಾವಿದು. ಇದು ಸೆಪ್ಟೆಂಬರ್ 1ಕ್ಕೆ ಪಾರ್ಟ್ 1 ಹಾಗೂ ಪಾರ್ಟ್ 2 ಅಕ್ಟೋಬರ್ 30ಕ್ಕೆ ರಿಲೀಸ್ ಆಗಲಿದೆ.

Top 5- Most Anticipated- Kannada movies-2023

ಧ್ರುವ ಸರ್ಜಾ- 'ಮಾರ್ಟಿನ್'

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಈ ಪ್ಯಾನ್ ಇಂಡಿಯಾ ಟೀಸರ್ ಐದು ಭಾಷೆಯ ಮಂದಿಗೂ ಇಷ್ಟ ಆಗಿತ್ತು. ಟೀಸರ್ ಹಿಟ್ ಆಗುತ್ತಿದ್ದಂತೆ ಬಿಡುಗಡೆ ಆಗೇ ಬಿಡುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಇನ್ನೂ ರಿಲೀಸ್ ಡೇಟ್ ಬಗ್ಗೆ ಸುದ್ದಿನೇ ಇಲ್ಲ. ಪ್ರಚಾರನೂ ಶುರು ಮಾಡಿಲ್ಲ. ಎ.ಪಿ ಅರ್ಜುನ್ ಹಾಗೂ ಧ್ರುವ ಕಾಂಬಿನೇಷನ್‌ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.

Top 5- Most Anticipated- Kannada movies-2023

ಉಪೇಂದ್ರ - 'UI'

ಈಗಾಗಲೇ 'ಕಬ್ಜ' ಮೂಲಕ ಪ್ಯಾನ್ ಇಂಡಿಯಾ ಕ್ಲಬ್‌ಗೆ ಉಪೇಂದ್ರ ಎಂಟ್ರಿ ಕೊಟ್ಟಿದ್ದಾಗಿದೆ. ಆದರೆ, ರಿಯಲ್‌ ಆಗಿ ರಿಯಲ್‌ಸ್ಟಾರ್ 'UI' ಮೂಲಕ ಎಂಟ್ರಿ ಕೊಡಲಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಉಪ್ಪಿ ಸಿನಿಮಾ ಮಾಡಿದ್ದಾರೆ. ಅಲ್ಲದೆ ಬಹಳ ವರ್ಷಗಳ ಬಳಿಕ ತಾವೇ ನಿರ್ದೇಶನ ಕೂಡ ಮಾಡುತ್ತಿರೋದ್ರಿಂದ 'UI' ರಿಲೀಸ್ ಕಾಯುತ್ತಿದ್ದಾರೆ. ಈ ಸಿನಿಮಾ ಕೂಡ 2023ರ ಫಸ್ಟ್ ಹಾಫ್‌ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಯಾಕೋ ಡಿಲೇ ಆಗುತ್ತಿದೆ.

Top 5- Most Anticipated- Kannada movies-2023

ದರ್ಶನ್- 'ಕಾಟೇರ'

ಚಾಲೆಂಜಿಂಗ್ ಸ್ಟಾರ್ ಸಿನಿಮಾ 'ಕಾಟೇರ' ಕೂಡ 2023 ಲಿಸ್ಟ್‌ನಲ್ಲಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಇನ್ನೂ ನಡೆಯುತ್ತಿದೆ. ದರ್ಶನ್ ಮಾಸ್, ರಗಡ್ ಲುಕ್‌ನಲ್ಲಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಾರೆ. ಇದೂ ಕೂಡ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಸ್ಯಾಂಡಲ್‌ವುಡ್ ಮೂಲಗಳ ಪ್ರಕಾರ, 'ಕಾಟೇರ' ಕೂಡ ಈ ವರ್ಷ ಕೊನೆಯಲ್ಲಿ ಡಿಸೆಂಬರ್ ರಜೆಯಲ್ಲಿ ರಿಲೀಸ್‌ಗೆ ಪ್ಲಾನ್ ಮಾಡುತ್ತಿದ್ದು, ಅಂದ್ಕೊಂಡಂತೆ ಸಿನಿಮಾ ಮುಗಿದಿದ್ದೇ ಆದರೆ, ಐದು ತಿಂಗಳ ಅಂತರದಲ್ಲಿ ರಿಲೀಸ್ ಆಗಬಹುದು.

Top 5- Most Anticipated- Kannada movies-2023

ಶಿವರಾಜ್‌ಕುಮಾರ್-'ಘೋಸ್ಟ್'

2023 ಅಖಾಡದಲ್ಲಿ ಶಿವರಾಜ್‌ಕುಮಾರ್ ಸಿನಿಮಾ 'ಘೋಸ್ಟ್' ಇದೆ. ಇದು ಮಲ್ಟಿಸ್ಟಾರರ್ ಕೂಡ ಸಿನಿಮಾ. ಈಗಾಗಲೇ ನಿರ್ದೇಶಕ ಶ್ರೀನಿ ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಆರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಅನುಪಮ್ ಖೇರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಮಲಯಾಳಂ ನಟರೂ ಕೂಡ ಈ ಸಿನಿಮಾದಲ್ಲಿ ನಟಿಸಿರೋದು ವಿಶೇಷ.

More from Filmibeat

English summary
Top 5 Most expected Kannada movies releasing in 2023, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X