Yash-Shivarajkumar:ಬಹಳ ದಿನಗಳ ನಂತ್ರ ರಾಕಿ- ದೇವ ಮುಖಾಮುಖಿ" ಯಶ್‌ಗೆ ಶಿವಣ್ಣ ನೆನಪಾಗಿದ್ದೇಕೆ ಏಕಾಏಕಿ?
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಶಿವಣ್ಣ 131ನೇ ಸಿನಿಮಾದ ಶೂಟಿಂಗ್ ಅನ್ನು ಶುರು ಮಾಡಿದ್ದಾರೆ. ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಷ್ಟೇ ಅಲ್ಲ. ಒಂದೇ ಕಡೆ ಶೂಟಿಂಗ್ ಮಾಡುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೂ ಮತ್ತಷ್ಟು ಥ್ರಿಲ್ ಕೊಟ್ಟಿದೆ.
'ಟಾಕ್ಸಿಕ್' ಸಿನಿಮಾಗಾಗಿ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದ ಸೆಟ್ ಹಾಕಲಾಗಿದೆ. ಇತ್ತೀಚೆಗೆಷ್ಟೇ ಈ ಸಿನಿಮಾದ ಮುಹೂರ್ತ ಕೂಡ ಆರಂಭ ಆಗಿತ್ತು. ಅತ್ತ ಇದೇ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಶಿವಣ್ಣ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗಿದೆ. ಇದೇ ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ 131ನೇ ಸಿನಿಮಾದ ಶೂಟಿಂಗ್ ಆರಂಭ ಆಗಿದೆ.

ಇಬ್ಬರ ಸಿನಿಮಾದ ಶೂಟಿಂಗ್ ಒಂದೇ ಕಡೆ ನಡೆಯುತ್ತಿದೆ. ಈ ಕಾರಣಕ್ಕೆ ಶಿವಣ್ಣ ನಟಿಸುತ್ತಿದ್ದ 131ನೇ ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ಯಶ್ ಭೇಟಿ ಕೊಟ್ಟಿದ್ದಾರೆ. ಶೂಟಿಂಗ್‌ಗೆ ಹೋಗುವುದಕ್ಕೂ ಮುನ್ನ ಯಶ್ ಸ್ಪಾಟ್‌ಗೆ ಭೇಟಿ ಕೊಟ್ಟು ಶಿವಣ್ಣನನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ರಾಕಿ ಭಾಯ್ ಯಶ್ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ ಗೆಳೆತನ ಚೆನ್ನಾಗಿದೆ. ಶಿವಣ್ಣ ಹಾಗೂ ಪುನೀತ್ ಜೊತೆ ಯಶ್ ಆತ್ಮೀಯರಾಗಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕವೂ ಶಿವಣ್ಣನೊಂದಿಗೆ ಅದೇ ಆತ್ಮೀಯತೆಯನ್ನು ಯಶ್ ಮುಂದುವರೆಸಿದ್ದಾರೆ. ಈ ಕಾರಣದಿಂದಲೇ ಶಿವಣ್ಣನ 131ನೇ ಸಿನಿಮಾದ ಶೂಟಿಂಗ್ ಸ್ಪಾಟ್‌ಗೆ ಭೇಟಿ ಕೊಟ್ಟು ಯೋಗಕ್ಷೇಮ ವಿಚಾರಿಸಿದ್ದಾರೆ.

ಕೆಲ ಹೊತ್ತು ಶಿವಣ್ಣನ 131ನೇ ಸಿನಿಮಾದ ತಂಡದೊಂದಿಗೆ ಯಶ್ ಸಮಯ ಕಳೆದಿದ್ದಾರೆ. ಕೆಲವು ಕಾಲ ಶಿವಣ್ಣನೊಂದಿಗೆ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. ಬಳಿಕ ಇಡೀ ತಂಡವನ್ನು ಮಾತಾಡಿಸಿ ಯಶ್ ತಮ್ಮ ಸಿನಿಮಾದ ಶೂಟಿಂಗ್‌ಗೆ ತೆರಳಿದ್ದಾರೆ. ಈ ವೇಳೆ ತೆಗೆದ ಕೆಲವು ಫೋಟೊಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯದಲ್ಲಿ ಹರಿದಾಡುತ್ತಿದೆ.
ಈ ಮೂಲಕ 131ನೇ ಸಿನಿಮಾದಲ್ಲಿ ಶಿವಣ್ಣನ ಗೆಟಪ್ ಹೇಗಿರುತ್ತೆ? ಅನ್ನೋದು ರಿವೀಲ್ ಆಗಿದೆ. ಈ ಚಿತ್ರದಲ್ಲಿ ಶಿವಣ್ಣ ದೇವ ಅನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಶಿವಣ್ಣ ಗೆಟಪ್ ಬದಲಾಗಿದೆ. ಪಕ್ಕಾ ಮಾಸ್ ಲುಕ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ಮಾಸ್ ಅವತಾರವನ್ನು ನೋಡಿ ಶಿವಣ್ಣ ಹಾಗೂ ಯಶ್ ಅಭಿಮಾನಿಗಳು ಥ್ರಿಲ್ ಆಗಿ ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
"ಯಶ್ ಸಖತ್ ಸ್ಲಿಮ್ ಆಗಿ ಫಿಟ್ ಅಂಡ್ ಫೈನ್ ಆಗಿ ಕಾಣಿಸುತ್ತಿದ್ದಾರೆ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಶಿವಣ್ಣ ಲುಕ್ ನೋಡಿ, "ಶಿವಣ್ಣನ ಮತ್ತೊಂದು ಮಾಸ್ ಅವತಾರವನ್ನು ನೋಡುವುದಕ್ಕೆ ಕಾಯುತ್ತಿದ್ದೇವೆ" ಎಂದು ಶಿವಣ್ಣನ ಫ್ಯಾನ್ಸ್ ಥ್ರಿಲ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾಗಾಗಿ ಇಬ್ಬರ ಲುಕ್ ನೋಡಿ ಇಬ್ಬರ ಅಭಿಮಾನಿಗಳು ಫಿದಾ ಆಗಿರುವುದಂತೂ ನಿಜ.


Click it and Unblock the Notifications











