ಯಶ್ ಬರ್ತ್‌ಡೇಗೆ ಸರ್ಪ್ರೈಸ್; 'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಾ? ಫಸ್ಟ್ ಲುಕ್ ಆಗುತ್ತಾ?

ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದ್ಮೇಲೆ ಬರ್ತ್‌ಡೇ ಕೇಜ್ ದುಪ್ಪಟ್ಟಾಗಿದೆ. ಈಗ ಕೇವಲ ಕರ್ನಾಟಕ ಅಷ್ಟೇ ಅಲ್ಲ. ಇಡೀ ಇಂಡಿಯಾದಲ್ಲೂ ಅವರು ಹುಟ್ಟುಹಬ್ಬ ಆಚರಿಸುವ ಆಗಾಗಿದೆ. ಆದರೆ, ಕರ್ನಾಟಕದಲ್ಲಿನ ಅಭಿಮಾನಿಗಳ ಸಂಭ್ರಮವೇ ಬೇರೆ ಲೆವೆಲ್. ಇನ್ನೇನು ರಾಕಿ ಬಾಯ್ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಸಂಭ್ರಮ ಶುರುವಾಗಿದೆ.

ಅಭಿಮಾನಿಗಳು ನಿರೀಕ್ಷೆ ಮಾಡಿದಂತೆ ಯಶ್ 'ಟಾಕ್ಸಿಕ್' ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ, ಅಂದರೆ ಜನವರಿ 8ರಂದು ಬೆಳಗ್ಗೆ 10.25 ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಡಲಿದ್ದಾರೆ. ತನ್ನ ಇನ್‌ಸ್ಟಾಗ್ರಾಂನಲ್ಲಿ ಇಂತಹದ್ದೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ 'ಟಾಕ್ಸಿಕ್' ಚಿತ್ರದ ಟೀಸರ್ ಇರಬಹುದಾ? ಅಥವಾ ಫಸ್ಟ್ ಲುಕ್ ಅನ್ನೋದು ಆ ದಿನದಂದೇ ಗೊತ್ತಾಗಲಿದೆ.

Toxic star Yash Birthday Rocking Star fans revealed common Dp may release first look

ಸೂಪರ್‌ಸ್ಟಾರ್‌ಗಳ ಬರ್ತ್‌ಡೇ ಸಂಭ್ರಮ ಅಂದರೇನೆ ಹಾಗೆ. ಅವರ ಅಭಿಮಾನಿಗಳು ತಿಂಗಳು ಮುಂಚೆನೇ ಅಖಾಡಕ್ಕೆ ಇಳಿದು ಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಟನ ಬಗ್ಗೆ ಸೆಲೆಬ್ರೆಷನ್ ಶುರುವಿಟ್ಟುಕೊಳ್ಳುತ್ತಾರೆ. ಯಶ್ ಫ್ಯಾನ್ಸ್ ಕೂಡ ತಿಂಗಳ ಹಿಂದೆನೇ ಬರ್ತ್‌ಡೇಗೆ ಏನು ಮಾಡಬೇಕು ಅಂತ ಪ್ಲಾನ್ ಮಾಡಿದ್ದರು. ಅದರಂತೆ ಇನ್ನು ಎರಡು ದಿನ ಉಳಿದುಕೊಂಡಿರುವಾಗಲೇ ಕಾಮನ್ ಡಿಪಿಯನ್ನು ರಿವೀಲ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇ ವಿಶೇಷವಾಗಿ ಕಾಮನ್ ಡಿಪಿ ಹೊರಬಿದ್ದಿದೆ. ಈ ಡಿಪಿಯನ್ನು ರಾಕಿ ಭಾಯ್ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಬಾರಿಗೆ ರಾಕಿ ಭಾಯ್ ಬರ್ತ್‌ಡೇ ಡಿಪಿಯ ಹೈಲೈಟ್ ಏನು? ಈ ಡಿಪಿಯಲ್ಲಿ ಏನೆಲ್ಲಾ ಇದೆ? ಬರ್ತ್‌ಡೇ 'ಟಾಕ್ಸಿಕ್' ಅಪ್‌ಡೇಡ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಾಮಾನ್ಯವಾಗಿ ಸ್ಟಾರ್‌ಗಳ ಡಿಪಿ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತೆ. ಯಾವುದಾರೂ ಸಿನಿಮಾ ರಿಲೀಸ್ ಆಗುತ್ತಿದ್ದರೆ ಅದರ ಫೋಟೋಗಳನ್ನು ಇಟ್ಟುಕೊಂಡು ಡಿಪಿ ಮಾಡುತ್ತಾರೆ. ಇಲ್ಲಾ ಅಂದರೆ, ಇದೂವರೆಗೂ ನಟಿಸಿದ ಫೇವರಿಟ್ ಸಿನಿಮಾಗಳ ಫೋಟೊಗಳನ್ನು ಇಟ್ಟುಕೊಂಡು ಕ್ರಿಯೇಟಿವ್ ಆಗಿ ಕಾಮನ್ ಡಿಪಿಗಳನ್ನು ಮಾಡುತ್ತಾರೆ. ಹಾಗೇ ಯಶ್‌ ಬರ್ತ್‌ಡೇ ಡಿಪಿ ಕೂಡ 'ಟಾಕ್ಸಿಕ್' ಲುಕ್‌ ಇಟ್ಟುಕೊಂಡು ಡಿಸೈನ್ ಮಾಡಲಾಗಿದೆ.

ಯಶ್ ಬರ್ತ್‌ಡೇ ಡಿಯಲ್ಲಿ ರಾಕಿ ಭಾಯ್ 'ಟಾಕ್ಸಿಕ್' ಲುಕ್ ಇದೆ. ಸಿನಿಮಾದಲ್ಲೂ ಇದೇ ಲುಕ್ ಇರುತ್ತಾ? ಅಥವಾ ಕ್ರಿಯೇಟ್ ಮಾಡಿದ್ದಾ? ಅನ್ನೋದು ವಿಷಯ ಇನ್ನೂ ಹೊರಬಿದ್ದಿಲ್ಲ. ಒಂದು ಕೋಟೆ ಮುಂದೆ ಸಿಂಹಾಸದ ಮೇಲೆ ಯಶ್ 'ಟಾಕ್ಸಿಕ್' ಲುಕ್‌ನಲ್ಲಿ ಕೂತಿದ್ದಾರೆ. ಜಗಮಗಿಸುತ್ತಿರುವ ಬೆಳಕಿನಲ್ಲಿ ರಾಕಿ ಭಾಯ್ ಆಟಿಟ್ಯೂಡ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ಹಾಗೇ ಬ್ಯಾಕ್‌ಗ್ರೌಂಡ್‌ನಲ್ಲಿರುವ ಕೋಟೆಯ ಮೇಲೆ ಯಶ್ ಬಾಸ್ ಬಾವುಟ ಹಾರಾಡುತ್ತಿದೆ.

ಈ ಡಿಪಿಯನ್ನು ಡಿಕೋಡ್ ಮಾಡುತ್ತಾ ಹೋದರೆ, ಯಶ್ ತಮ್ಮ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಒಂದು ಸಂದೇಶವನ್ನು ಕೊಟ್ಟಿರುವ ಹಾಗಿದೆ. ಸಿಂಹಾಸನದ ಮೇಲೆ 'ಟಾಕ್ಸಿಕ್' ಲುಕ್‌ನಲ್ಲಿ ಕೂತಿರುವ ಯಶ್ ಮುಂದೆ 'ಕೆಜಿಎಫ್' ಲುಕ್‌ನಲ್ಲಿ ಯಶ್ ನಿಂತಿರುವ ಫೋಟೊ ಇದೆ. ಈ ಮೂಲಕ 'ಕೆಜಿಎಫ್‌ 2'ಗಿಂತಲೂ 'ಟಾಕ್ಸಿಕ್' ಎಷ್ಟು ದೊಡ್ಡದು ಅನ್ನೋದನ್ನು ಹೇಳಿರಬಹುದೇ? ಈ ಪ್ರಶ್ನೆ ಡಿಪಿ ನೋಡಿದ ಮೇಲೆ ಹಲವರಲ್ಲಿ ಹುಟ್ಟಿಕೊಂಡಿದೆ.

ಇನ್ನು ಬರ್ತ್‌ಡೇಗೆ 'ಟಾಕ್ಸಿಕ್' ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುತ್ತೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಅದೇ ಇನ್ನು ಕೆಲವು ಮೂಲಗಳು ಫಸ್ಟ್ ಲುಕ್ ಅಷ್ಟೇ ರಿವೀಲ್ ಆಗಲಿದೆ ಅಂತಾನೂ ಹೇಳುತ್ತಿದ್ದಾರೆ. ಮತ್ತೆ ಕೆಲವರು ಟೀಸರ್ ಹಾಗೂ ಫಸ್ಟ್ ಲುಕ್ ಎರಡು ರೆಡಿಯಿದ್ದು, ಯಾವುದು ರಿಲೀಸ್ ಮಾಡುತ್ತಾರೋ ಅದೆಲ್ಲವೂ ಯಶ್ ಮೇಲೆ ನಿರ್ಧಾರ ಆಗಿದೆ ಅನ್ನೋ ಸುದ್ದಿ ಅಂತೂ ಓಡಾಡುತ್ತಿದೆ.

More from Filmibeat

English summary
Toxic star Yash Birthday Rocking Star fans revealed common Dp may release first look
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X