twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಸ್ಮರಣೆಯಲ್ಲಿ ಬೆಂಗಳೂರು ಪೊಲೀಸರಿಂದ ಸೈಕಲ್ ಜಾಥ

    |

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದ ನೋವು ರಾಜ್ಯದ ಜನತೆಯನ್ನು ಕಾಡುತ್ತಲೇ ಇದೆ. ಹೀಗಾಗಿ ಇಡೀ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಅಪ್ಪು ಸ್ಮರಣೆ ಮಾಡಲಾಗುತ್ತಿದೆ. ಈಗ ಬೆಂಗಳೂರು ಪೊಲೀಸರು ಅಪ್ಪು ಸ್ಮರಣಾರ್ಥ ಸೈಕಲ್ ಜಾಥಾ ಮಾಡಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಜಂಟಿಯಾಗಿ 66 ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಸೈಕಲ್ ಜಾಥಾ ಹಮ್ಮಿಕೊಂಡಿತ್ತು.

    ಈ ಸೈಕಲ್ ಜಾಥದಲ್ಲಿ ಸಂಚಾರಿಪೊಲೀಸ್ ಜಂಟಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ, ಕರ್ನಾಟಕ ರಾಜ್ಯ ಮೀಸಲು ಪಡೆಯ ಅಪಾರ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಈ ಸೈಕಲ್ ಜಾಥದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪುನೀತ್ ರಾಜ್‌ಕುಮಾರ್ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಅಪ್ಪುಗಿದ್ದ ಸೈಕಲ್ ಮೇಲಿನ ಪ್ರೀತಿಯನ್ನು ಸ್ಮರಿಸಲಾಯಿತು.

    ಅಪ್ಪು ನನಗೆ ಅಣ್ಣನಾಗಿ ಹೋಗಿದ್ದಾನೆ

    ಅಪ್ಪು ನನಗೆ ಅಣ್ಣನಾಗಿ ಹೋಗಿದ್ದಾನೆ

    ಸೈಕಲ್ ಜಾಥ ಉದ್ಘಾಟನೆ ಮಾಡಿದ ಬಳಿಕ ಪುನೀತ್‌ಗೆ ಸೈಕಲ್ ರೈಡ್ ಬಗ್ಗೆ ಇದ್ದ ಆಸಕ್ತಿಯನ್ನು ಶಿವರಾಜ್‌ಕುಮಾರ್ ನೆನಪಿಸಿಕೊಂಡಿದ್ದಾರೆ. " ಸೈಕಲ್ ರೈಡ್ ಅಂದರೆ ಅಪ್ಪುಗೆ ತುಂಬಾ ಇಷ್ಟ. ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾನೆ. ಇರ್ತಾನೆ. ಎಲ್ಲರ ಹೃದಯದಲ್ಲೂ ಅಪ್ಪು ಶಾಶ್ವತ. ಅಪ್ಪು ನನಗೆ ಅಣ್ಣನಾಗಿ ಹೋಗಿದ್ದಾನೆ. ನನ್ನ ಹುಟ್ಟುಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ ಮಾಡಿದ್ದ. ಈ 50 ಕಿಮೀ ಜಾಥಾದಲ್ಲಿ ಅಪ್ಪು ಇದ್ದಿದ್ದರೆ ಖಂಡಿತ ಭಾಗವಹಿಸುತ್ತಿದ್ದ." ಎಂದು ಶಿವಣ್ಣ ಭಾವುಕರಾಗಿದ್ದಾರೆ.

    ಬೊಂಬೆ ಹೇಳುತೈತೆ ಹಾಡು ಹಾಡಿದ ಅಲೋಕ್ ಕುಮಾರ್

    ಬೊಂಬೆ ಹೇಳುತೈತೆ ಹಾಡು ಹಾಡಿದ ಅಲೋಕ್ ಕುಮಾರ್

    "ನಾವು ಪೊಲೀಸ್ ಹಾಕಿ ಆಯೋಜನೆ ಮಾಡಬೇಕಿತ್ತು. ಇದಕ್ಕೆ ಅಪ್ಪುರನ್ನ ಕರೆಯಿಸಿ ಅವರಿಂದಲೇ ಚಾಲನೆ ಕೊಡಿಸಬೇಕಿತ್ತು. ಅವರು ಒಂದೇ ಒಂದು ಮಾತಿಗೆ ಒಪ್ಪಿಕೊಂಡಿದ್ದರು. ಆದರೆ ಮರು ದಿನವೇ ಅವರು ವಿಧಿವಶರಾದರು.‌ ಅಪ್ಪು ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವು ತಂದಿದೆ. ನಾನು ಸಾಕಷ್ಟು ಜನರ ಅಂತಿಮ ದರ್ಶನ ನೋಡಿದ್ದೀನಿ. ವಿಷ್ಣುವರ್ಧನ್, ಅಂಬರೀಶ್ ರಂತಹ ಸ್ಟಾರ್ ಗಳ ಅಂತಿಮ‌ ದರ್ಶನ ನೋಡಿದ್ದೀನಿ. ಆದರೆ, ಪುನೀತ್ ಅವರ ಅಂತಿಮ‌ ದರ್ಶನ ಕೂಡ ನೋಡಿದೆ. ಪುನೀತ್ ಅವರ ಅಂತಿಮ ದರ್ಶನಕ್ಕೆ ಜನರ ರೆಸ್ಪಾನ್ಸ್ ನೋಡಿ ಆಶ್ಚರ್ಯ ಆಯ್ತು." ಎಂದು ಕರ್ನಾಟಕ ರಾಜ್ಯ ಮೀಸಲು ಪಡೆಯ ಅಪಾರ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಭಾವುಕ ಮಾತುಗಳನ್ನು ಆಡಿದರು. ಇದೇ ವೇಳೆ ವೇದಿಕೆ ಮೇಲೆ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡು ಹಾಡಿ ಪುನೀತ್ ಸ್ಮರಣೆ ಮಾಡಿದರು.

    ಅಪ್ಪು ಸಾವಿನ ಸುದ್ದಿ ತಡೆದುಕೊಳ್ಳಲು ಆಗಿಲ್ಲ

    ಅಪ್ಪು ಸಾವಿನ ಸುದ್ದಿ ತಡೆದುಕೊಳ್ಳಲು ಆಗಿಲ್ಲ

    ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೈಕಲ್ ಜಾಥ ವೇಳೆ ಪುನೀತ್‌ರನ್ನು ನೆನಪಿಸಿಕೊಂಡಿದ್ದಾರೆ. "ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವು ತಂದಿದೆ. ಅಪ್ಪು ಜೊತೆ ನನಗೆ ಒಳ್ಳೆ ಬಾಂಧವ್ಯ ಇತ್ತು.ಅವರಿಲ್ಲ ಅನ್ನುವ ಸುದ್ಧಿ ಕೇಳಿ ನನಗೆ ಶಾಕ್ ಆಯ್ತು. ಒಬ್ಬ ಐಪಿಎಸ್ ಆಫೀಸರ್ ಆಗಿಯೂ ನಾನು ನನ್ನ ಪತ್ನಿ ಇಬ್ಬರೂ ದುಃಖದಿಂದ ಅತ್ತಿದ್ದೀವಿ. ನನ್ನ ಕುಟುಂಬದವರೇ ಹೋದ್ರೇನೋ ಅನ್ನೋವಷ್ಟು ನೋವಾಯ್ತು." ಎಂದು ಅಪ್ಪು ಸ್ಮರಣೆ ಮಾಡಿದರು.

     ಅಪ್ಪು ನೆನಪಲ್ಲಿ 50 ಕಿ.ಮೀ ಸೈಕಲ್ ಜಾಥ

    ಅಪ್ಪು ನೆನಪಲ್ಲಿ 50 ಕಿ.ಮೀ ಸೈಕಲ್ ಜಾಥ

    ಕೆಎಸ್‌ಆರ್‌ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರಿಂದ ನಟ ಪುನೀತ್ ರಾಜ್‍ಕುಮಾರ್ ಪುಣ್ಯ ನೆನಪಿನಲ್ಲಿ ಸೈಕಲ್ ಜಾಥ ಆಯೋಜನೆ ಮಾಡಲಾಗಿತ್ತು. ಕಂಠೀರವ ಸ್ಟೇಡಿಯಂ ನಿಂದ ಆರಂಭ ಆಗಿ ಸುಮಾರು 50 ಕಿಲೋಮೀಟರ್ ಸೈಕಲ್ ಜಾಥ ನಡೆಸಲಾಗಿದೆ. ನಟ ಶಿವರಾಜ್ ಕುಮಾರ್ ಈ ಜಾಥಕ್ಕೆ ಚಾಲನೆ ನೀಡಿದರು. ನಟ ಪುನೀತ್ ರಾಜ್‍ಕುಮಾರ್ ನೆನಪು ಹಾಗೂ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಎಂಬ ಘೋಷ ವಾಕ್ಯದಡಿ ಕನ್ನಡ ರಾಜ್ಯೋತ್ಸವವನ್ನು ಸೈಕಲ್ ಜಾಥದ ಮೂಲಕ ಹಮ್ಮಿಕೊಳ್ಳಲಾಗಿತ್ತು. ಕಂಠೀರವ ಸ್ಟೇಡಿಯಂನಿಂದ ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್‌, ಹೆಬ್ಬಾಳ, ಬಿಇಎಲ್ ಸರ್ಕಲ್, ಗೋರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ಕಡೆಗೆ ಸಾಗಿ, ಪುನೀತ್ ಸಮಾಧಿ ಬಳಿ ಬ್ರೇಕ್ ಪಡೆದು ನಾಗರಭಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಮೇಯೋ ಹಾಲ್, ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್‌ನಲ್ಲಿ ಸೈಕಲ್ ಜಾಥ ಅಂತ್ಯಗೊಳ್ಳಲಿದೆ. ಒಟ್ಟು 50 ಕಿಲೋಮೀಟರ್ ಸಾಗಲಿರುವ ಸೈಕಲ್ ಜಾಥ.

    English summary
    50 KM bicycle Jatha was organized by police department to tribute Puneeth Rajkumar. Shivarajkumar inaugurated bicycle jatha police officials Alok kumar and ravikanthe gowda are present in the program.
    Sunday, November 21, 2021, 11:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X