ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆ ಇನ್ನುಂದೆ ಅಧಿಕೃತವಲ್ಲ: ನೀಲಿ ಟಿಕ್ ತೆಗೆದು ಹಾಕಿದ್ದಕ್ಕೆ ಫ್ಯಾನ್ಸ್ ಆಕ್ರೋಶ?

ಸೆಲೆಬ್ರೆಟಿಗಳಿಗೂ ಹಾಗೂ ಅಭಿಮಾನಿಗಳಿಗೂ ಸಾಮಾನ್ಯವಾಗಿ ಕೊಂಡಿಯಾಗಿರೋದು ಸೋಶಿಯಲ್ ಮೀಡಿಯಾ. ತಮ್ಮ ಸಿನಿಮಾ ಬಗ್ಗೆ, ಕೆಲಸದ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಟ್ವಿಟರ್, ಇನ್‌ಸ್ಟಾಗ್ರಾಂ ಇಲ್ಲವೇ ಫೇಸ್‌ಬುಕ್ ಮೊರೆ ಹೋಗುತ್ತಾರೆ.

Recommended Video

Puneeth Rajkumar ಇಲ್ಲ ಅಂತ ಟ್ವಿಟರ್ ಈ ರೀತಿ ಮಾಡಬಾರದಿತ್ತು? ಅಪ್ಪು ಫ್ಯಾನ್ಸ್ ಫುಲ್ ಗರಂ *Entertainment

ಇತ್ತ ಅಭಿಮಾನಿಗಳೂ ಕೂಡ ಸೋಶಿಯಲ್‌ ಮೀಡಿಯಾ ಮೂಲಕವೇ ತಮ್ಮ ನೆಚ್ಚಿನ ನಟ-ನಟಿಯರ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾ ಸಂಸ್ಥೆಗಳು ಸೆಲೆಬ್ರೆಟಿಗಳ ಖಾತೆಯ ಮುಂದೊಂದು ನೀಲಿ ಟಿಕ್ ಅನ್ನು ನೀಡಿರುತ್ತಾರೆ.

ಈಗ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಿಂದ ಆ ನೀಲ್ ಟಿಕ್ ಮಾಯವಾಗಿದೆ. ಈ ಬೆಳವಣಿಗೆ ಬಳಿಕ ಅಪ್ಪು ಅಭಿಮಾನಿಗಳ ರಿಯಾಕ್ಷನ್ ಏನು? ನೀಲಿ ಟಿಕ್ ಅನ್ನು ಟ್ವಿಟರ್ ತೆಗೆದು ಹಾಕಿದ್ದು ಯಾಕೆ? ಈ ವಿಷಯವನ್ನು ತಿಳಿದುಕೊಳ್ಳಲು ಮುಂದೆ ಓದಿ.

ಅಪ್ಪು ಟ್ವಿಟರ್ ಖಾತೆಯಲ್ಲಿ ನೀಲಿ ಟಿಕ್ ಇಲ್ಲ

ಅಪ್ಪು ಟ್ವಿಟರ್ ಖಾತೆಯಲ್ಲಿ ನೀಲಿ ಟಿಕ್ ಇಲ್ಲ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 9 ತಿಂಗಳುಗಳಾಗುತ್ತಿದೆ. ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಒಂದಲ್ಲಾ ಒಂದು ಉತ್ತಮ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಬೇಸರ ಆಗುವಂತಹ ಸಂಗತಿಯೊಂದು ಎದುರಾಗಿದೆ. ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಈಗ ಮಾಯವಾಗಿದೆ. ಈ ಬೆಳವಣಿಗೆಯನ್ನು ನೋಡಿ ಪವರ್‌ಸ್ಟಾರ್ ಫ್ಯಾನ್ಸ್ ಮತ್ತಷ್ಟು ನೋವು ಅನುಭವಿಸುವಂತಾಗಿದೆ.

ಈ ನೀಲಿ ಟಿಕ್ ಯಾಕೆ ಇತ್ತು?

ಸೆಲೆಬ್ರೆಟಿಗಳು ಅಂದ್ಮೇಲೆ ಅವರ ಖಾತೆಯನ್ನು ನಕಲು ಮಾಡುವ ಮಂದಿ ಇರುತ್ತಾರೆ. ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿಯೇ ಬೇರೆಯವರು ಖಾತೆಯನ್ನು ತೆರೆಯಬಹುದು. ಈ ಕಾರಣಕ್ಕೆ ಟ್ವಿಟರ್ ತನ್ನ ಬಳಕೆದಾರರಿಗೆ ಅವರ ಖಾತೆಯ ಮುಂದೆ ನೀಲಿ ಟಿಕ್ ಅನ್ನು ನೀಡುತ್ತೆ. ಈ ಮೂಲಕ ಇದು ಅವರ ಅಧಿಕೃತ ಖಾತೆ ಎಂದು ದೃಢೀಕರಿಸುತ್ತೆ. ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಖಾತೆಯ ಮುಂದೆನೂ ಟ್ವಿಟರ್ ನೀಲಿ ಟಿಕ್ ಅನ್ನುನೀಡಿತ್ತು. ಈಗ ಅದನ್ನು ತೆಗೆದು ಹಾಕಿದೆ.

ನೀಲಿ ಟಿಕ್ ತೆಗೆದು ಹಾಕಿದ್ದೇಕೆ?

ನೀಲಿ ಟಿಕ್ ತೆಗೆದು ಹಾಕಿದ್ದೇಕೆ?

ಪುನೀತ್ ರಾಜ್‌ಕುಮಾರ್ ಟ್ವಿಟಲ್ ಖಾತೆಯಿಂದ ನೀಲಿ ಟಿಕ್ ತೆಗೆದುಹಾಕಲು ಸಾಕಷ್ಟು ಕಾರಣವಿದೆ. ಅಪ್ಪು ಅಗಲಿದ ಬಳಿಕ ಅವರ ಟ್ವಿಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಅಲ್ಲದೆ ಕಳೆದ 8 ತಿಂಗಳಿಂದ ಅವರ ಖಾತೆಯನ್ನು ಆಕ್ಟಿವ್ ಆಗಿಲ್ಲ. ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಿಂದ ನೀಲಿ ಟಿಕ್ ಅನ್ನು ತೆಗೆದು ಹಾಕಲಾಗಿದೆ.

ಅಪ್ಪು ಅಭಿಮಾನಿಗಳಿಗೆ ನೋವು

ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳು ಟ್ವಿಟರ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಾಲಿವುಡ್‌ನ ಸಿದ್ಧಾರ್ಥ್ ಶುಕ್ಲಾ ಅವರ ಟ್ವಿಟರ್ ಖಾತೆಯಲ್ಲಿ ನೀಲಿ ಟಿಕ್ ಇದೆ ಆದರೆ, ಅಪ್ಪು ಖಾತೆಯಿಂದ ನೀಲಿ ಟಿಕ್ ತೆಗೆದಿದ್ದು ಯಾಕೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಅಭಿಮಾನ ಮಾಡಲು ಪವರ್‌ಸ್ಟಾರ್ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

More from Filmibeat

English summary
Twitter Removed Blue Tick from Actor Puneeth Rajkumar Twitter Account, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X