ಐತಿಹಾಸಿಕ ಕಪಾಲಿ ಚಿತ್ರಮಂದಿರ ಸಮೀಪದ ಕಟ್ಟಡಗಳ ಕುಸಿತ
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿದ್ದ ಕಪಾಲಿ ಚಿತ್ರಮಂದಿರ ಸಮೀಪದ ಎರಡು ಕಟ್ಟಡಗಳು ಕುಸಿದುಬಿದ್ದಿವೆ. ಮೂರು ವರ್ಷಗಳ ಹಿಂದೆ ಕಪಾಲಿ ಚಿತ್ರಮಂದಿರವನ್ನು ಮುಚ್ಚಿ ಅದನ್ನು ಒಡೆದುಹಾಕಲಾಗಿತ್ತು. ಬೇರೆ ಕಟ್ಟಡ ನಿರ್ಮಿಸಲು ಅದಕ್ಕೆ ಗುಂಡಿ ತೆಗೆಯಲಾಗಿತ್ತು. ಆದರೆ ಆ ಗುಂಡಿಯ ಕಾರಣದಿಂದ ಎರಡು ಬಹುಮಹಡಿ ಕಟ್ಟಡಗಳು ಮಂಗಳವಾರ ಸಂಜೆ ನೆಲಕಚ್ಚಿವೆ.
Recommended Video
ನಾಲ್ಕು ಮಹಡಿಯ ವಾಣಿಜ್ಯ ಕಟ್ಟಡ ಮತ್ತು ಮೂರು ಮಹಡಿಯ ಪಿಜಿ ಎರಡೂ ಕಪಾಲಿ ಚಿತ್ರಮಂದಿರ ಇದ್ದ ಜಾಗದ ಗುಂಡಿಗೆ ಉರುಳಿ ಬಿದ್ದಿವೆ. ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ. ಕಪಾಲಿ ಚಿತ್ರಮಂದಿರವನ್ನು ತೆರವುಗೊಳಿಸಿ ಅಲ್ಲಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಕಟ್ಟಡ ಸುರಕ್ಷತಾ ನಿಯಮಗಳನ್ನು ಕೈಗೊಳ್ಳದೆ ಆ ಜಾಗದಲ್ಲಿ ಆಳವಾದ ಗುಂಡಿ ತೆಗೆಯಲಾಗಿತ್ತು. ಮುಂದೆ ಓದಿ...

ರಾತ್ರಿ ಸಂಭವಿಸಿದ ಅವಘಡ
ನಗರದ ಅತಿ ಹೆಳೆಯ ಚಿತ್ರಮಂದಿರಗಳಲ್ಲಿ ಒಂದಾದ ಕಪಾಲಿ ಚಿತ್ರಮಂದಿರ 2017ರಲ್ಲಿ ಕೊನೆಯ ಪ್ರದರ್ಶನ ಕಂಡಿತ್ತು. ಈ ಜಾಗದಲ್ಲಿ ಮಾಲ್ ಮತ್ತು ಮಲ್ಟಿಪ್ಲೆಕ್ಸ್ ನಿರ್ಮಿಸಲು ಕಾರ್ಯ ನಡೆಸಲಾಗುತ್ತಿತ್ತು. ಸುಮಾರು 80 ಅಡಿಯ ಗುಂಡಿ ತೆಗೆಯಲಾಗಿತ್ತು. ರಾತ್ರಿ 9.45ರ ವೇಳೆಗೆ ಪಕ್ಕದ ಎರಡು ಕಟ್ಟಡಗಳು ಉರುಳಿಬಿದ್ದಿವೆ.

ಎಂಜಿನಿಯರ್ ಬಂಧನ
ಪಕ್ಕದ ಕಟ್ಟಡದಲ್ಲಿ ಬಿರುಕು ಕಂಡ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆಯೇ ಆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ. ಕಪಾಲಿ ಚಿತ್ರಮಂದಿರದ ಸ್ಥಳದಲ್ಲಿ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಎಂಜಿನಿಯರ್ ಮುಸ್ತಫಾ ಅವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಗಂಗಾರಾಮ್ ಕಟ್ಟಡ ಕುಸಿತ
1983ರ ಸೆಪ್ಟೆಂಬರ್ 12ರಂದು 'ಭಕ್ತ ಪ್ರಹ್ಲಾದ' ಚಿತ್ರದ ಪ್ರದರ್ಶನ ನಡೆಯುವ ಸಂದರ್ಭದಲ್ಲಿ ಕಪಾಲಿ ಚಿತ್ರಮಂದಿರ ಸಮೀಪದ ಗಂಗಾರಾಮ್ ಕಟ್ಟಡ ಕುಸಿದುಬಿದ್ದಿದ್ದರಿಂದ ಕಪಾಲಿ ಚಿತ್ರಮಂದಿರಕ್ಕೂ ಹಾನಿಯಾಗಿತ್ತು. ಆಗ ಸಾವು ನೋವು ಸಂಭವಿಸಿತ್ತು.

ಮಣ್ಣಿನ ಮಗ ಮೊದಲ ಚಿತ್ರ
1968 ರಲ್ಲಿ ಉದ್ಘಾಟನೆಗೊಂಡ ಕಪಾಲಿ ಚಿತ್ರಮಂದಿರದಲ್ಲಿ ರಾಜ್‌ಕುಮಾರ್ ಅವರ 'ಮಣ್ಣಿನ ಮಗ' ಸಿನಿಮಾ ಮೊದಲಿಗೆ ಪ್ರದರ್ಶನವಾಗಿತ್ತು. ಅನೇಕ ಕನ್ನಡ ಸಿನಿಮಾಗಳು ಈ ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸಿದ್ದವು.


Click it and Unblock the Notifications











