Ugramm Manju Wedding: ವಿವಾಹ ಸಂಭ್ರಮದಲ್ಲಿ ಉಗ್ರಂ ಮಂಜು; ಹಳದಿಯಲ್ಲಿ ಮಿಂದೆದ್ದ ಮದುಮಗ
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಿಗ್ ಬಾಸ್‌ಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಬ್ಯಾಚುಲರ್ ಆಗಿದ್ದ ಮಂಜು, 11ನೇ ಸೀಸನ್ ಮುಗಿಸಿ ಹೊರಬರುತ್ತಿದ್ದಂತೆ ಸಾಯಿ ಪಲ್ಲವಿ ಅವರೊಂದಿಗೆ ಎಂಗೇಜ್ ಆಗಿದ್ದರು. ರಿಯಾಲಿಟಿ ಶೋಗೆ ತೆರಳುವುದಕ್ಕೂ ಮುನ್ನ ಕಿಚ್ಚ ಸುದೀಪ್ ಮುಂದೆ ವೇದಿಕೆ ಮೇಲೆ ಮದುವೆ ಆಗುವುದಾಗಿ ಹೇಳಿದ್ದರು. ಈಗ ಅದಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಉಗ್ರಂ ಮಂಜು ಪೋಷಕರು ಕೂಡ ಕಿಚ್ಚ ಸುದೀಪ್ ಬಳಿಕ ಮದುವೆಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡಿದ್ದರು. ಕೊನೆಗೂ ಉಗ್ರಂ ಮಂಜು ತನ್ನ ಬಾಳ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ. ಇನ್ನೇನು ಇದೇ ತಿಂಗಳು (ಜನವರಿ 23) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮುನ್ನ ಅವರ ಮನೆಯಲ್ಲಿ ಹಳದಿ ಶಾಸ್ತ್ರ ನಡೆದಿದೆ. ಅದರ ಫೋಟೊಗಳು ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ಪೋಷಕ ನಟರಲ್ಲಿ ಉಗ್ರಂ ಮಂಜು ಕೂಡ ಒಬ್ಬರು. 'ಉಗ್ರಂ' ಸಿನಿಮಾ ಇವರ ವೃತ್ತಿ ಬದುಕಿಗೆ ಒಂದೊಳ್ಳೆ ಹೆಸರನ್ನು ತಂದುಕೊಟ್ಟಿತ್ತು. ಆದರೆ, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಹೋದ ಬಳಿಕ ಇವರ ಜನಪ್ರಿಯತೆ ಇನ್ನಷ್ಟು ದುಪ್ಪಟ್ಟಾಯ್ತು. ಈ ರಿಯಾಲಿಟಿ ಶೋಗೆ ಬರುವುದಕ್ಕೂ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಇರುವವರು ತಾವು ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಮದುವೆ, ಸಂಸಾರ ಅಂತ ತಲೆ ಕೆಡಿಸುವುದಿಲ್ಲ. ಉಗ್ರಂ ಮಂಜು ಕೂಡ ಈ ಕಾರಣಕ್ಕೆ ಮದುವೆ ಆಗಿರದೆ ಇರಬಹುದೆಂದು ಹಲವು ಮಂದಿ ಅಂದುಕೊಂಡಿದ್ದರು. ಆದರೆ, ಉಗ್ರಂ ಮಂಜು ಬಿಗ್ ಬಾಸ್ ವೇದಿಕೆ ಮೇಲೆ ಮದುವೆ ತಡವಾಗಿದ್ದಕ್ಕೆ ಕಾರಣಗಳನ್ನು ತಿಳಿಸಿದ್ದರು. ಸಹೋದರಿಯರ ಮದುವೆ, ಜವಾಬ್ದಾರಿ ಅಂತ ಬ್ಯುಸಿಯಾಗಿದ್ದರು. ಹೀಗಾಗಿ ಅವರ ಮದುವೆ ತಡವಾಯ್ತು ಎಂದು ಹೇಳಿಕೊಂಡಿದ್ದರು.
ಆದರೆ, ಬಿಗ್ ಬಾಸ್ ಮುಗಿಸಿ ಹೊರ ಬರುತ್ತಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದ್ದರು. ಅದಂತೆ ಜನವರಿ 23ರಂದು ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಉಗ್ರಂ ಮಂಜು ಮನೆಯಲ್ಲಿ ಅವರ ಮದುವೆಯ ಅರಿಶಿಣ ಶಾಸ್ತ್ರ ಕಾರ್ಯಕ್ರಮ ಸರಳವಾಗಿ ನಡೆದಿವೆ. ಈ ವಿಡಿಯೋಗಳನ್ನು ಉಗ್ರಂ ಮಂಜು ಹಾಗೂ ಅವರ ಆಪ್ತರು ಹಂಚಿಕೊಂಡಿದ್ದಾರೆ.

ಈ ಅರಿಶಿಣ ಶಾಸ್ತ್ರದಲ್ಲಿ ಉಗ್ರಂ ಮಂಜು ಅವರ ಕುಟುಂಬ ಹಾಗೂ ಬಂಧು-ಮಿತ್ರರು, ಆಪ್ತರು ಸೇರಿದಂತೆ ಗೆಳೆಯರ ಮುಂದೆ ಅರಿಶಿಣ ಶಾಸ್ತ್ರವನ್ನು ಮಾಡಿಕೊಂಡಿದ್ದಾರೆ. ಉಗ್ರಂ ಮಂಜು ಅರಿಶಿಣ ಶಾಸ್ತ್ರದಲ್ಲಿ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಅರಿಶಿಣ ಶಾಸ್ತ್ರದ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ. ಹಾಡುಗಳಿಗೆ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ. ಮಂಜು ಜೊತೆ ಅಲ್ಲಿ ನೆರೆದಿದ್ದವರು ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.
ಇನ್ನು ಉಗ್ರಂ ಮಂಜು ಜೊತೆ ಹಸೆಮಣೆ ತುಳಿಯುತ್ತಿರೋದು ಸಾಯಿ ಸಂಧ್ಯಾ. ಕೆಲವು ದಿನಗಳ ಹಿಂದಷ್ಟೇ ಇಬ್ಬರ ನಿಶ್ಚಿತಾರ್ಥ ಹಿರಿಯ ಸಮ್ಮುಖದಲ್ಲಿ ನಡೆದಿತ್ತು. ಅಂದ್ಹಾಗೆ ಸಾಯಿ ಸಂಧ್ಯಾ ಅವರು ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಗೆ ಈಗಾಗಲೇ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇತ್ತೀಚೆಗೆ ಉಗ್ರಂ ಮಂಜು ಎರಡನೇ ಬಾರಿಗೆ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸದಸ್ಯರೊಂದಿಗೆ ತಮ್ಮ ಬ್ಯಾಚುಲರ್ ಪಾರ್ಟಿಯನ್ನು ಸಹ ಮಾಡಿಕೊಂಡಿದ್ದರು. ಇನ್ನು ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಧರ್ಮಸ್ಥಳದಲ್ಲಿ ಸರಳವಾಗಿ ಆಪ್ತರು ಹಾಗೂ ಕುಟುಂಬದ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.


Click it and Unblock the Notifications











