"ದೇವರಂತಹ ತಾಯಿ.. ತಾಯಿಗೂ ಅಂತಹದ್ದೇ ಮಗ": ನಟಿ ಉಮಾಶ್ರೀ ಮೆಚ್ಚುಗೆ ಮಾತು
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಳಿ ವಯಸ್ಸಿನಲ್ಲೂ ಚೈತನ್ಯದಿಂದ ಇದ್ದಾರೆ. ವಯ ಸಹಜ ಸಮಸ್ಯೆಗಳಿದ್ದರೂ ಮನೆಗೆ ಬಂದ ಅತಿಥಿಗಳನ್ನು ಗುರುತಿಸುತ್ತಾರೆ. ಅವರೊಂದಿಗೆ ಲವಲವಿಕೆಯಿಂದ ಮಾತಾಡಿಸುತ್ತಾರೆ.
ನಿನ್ನೆ(ಜುಲೈ 9) ಕನ್ನಡ ಚಿತ್ರರಂಗದ ಮತ್ತೊಬ್ಬ ನಟಿ ಉಮಾಶ್ರೀ ಹಿರಿಯ ನಟಿ ಉಮಾಶ್ರೀ ಅವರ ಮನೆಗೆ ತೆರಳಿದ್ದರು. ಲೀಲಾವತಿಯವರೊಂದಿಗೆ ಕೆಲ ಕಾಲ ಕಳೆದು, ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆ ಲೀಲಾವತಿಯವರ ಜೊತೆ ಪುತ್ರ ವಿನೋದ್ ರಾಜ್ ಜೊತೆನೂ ಕೆಲ ಕಾಲ ಮಾಡಿದ್ದಾರೆ.

ಬಹಳ ದಿನಗಳಿಂದ ಲೀಲಾವತಿಯವರನ್ನು ಭೇಟಿ ಮಾಡಬೇಕು ಅಂತ ಆಸೆಯಿತ್ತು. ಆದ್ರೀಗ ಆ ಕಾಲ ಕೂಡಿದೆ ಬಂದಿದೆ ಎಂದು ಉಮಾಶ್ರೀ ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚಿತ್ರರಂಗದ ಗಣ್ಯರು ಕೂಡ ಲೀಲಾವತಿಯವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದರು. ಈಗ ಉಮಾಶ್ರೀಯವರು ಭೇಟಿ ಮಾಡಿದ್ದಾ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಈ ವೇಳೆ ಹಿರಿಯ ನಟಿಯ ಬಗ್ಗೆ ಉಮಾಶ್ರೀ ಹೀಗಂದಿದ್ದಾರೆ.
"ಕನ್ನಡ ಚಿತ್ರರಂಗದ ತಾಯಿ"
ಹಿರಿಯ ನಟಿ ಲೀಲಾವತಿಯವರನ್ನು ನಟಿ ಪದ್ಮಾವಸಂತಿಯವರೊಂದಿಗೆ ಹೋಗಿ ಉಮಾಶ್ರೀ ಭೇಟಿ ಮಾಡಿದ್ದರು. ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಬಳಿಕ ಉಮಾಶ್ರೀ ಮನತುಂಬಿ ಮಾತಾಡಿದ್ದಾರೆ.

"ಲೀಲಾವತಿ ಅಮ್ಮನವರು ನಮ್ಮ ಚಿತ್ರರಂಗದ ಹಿರಿಯರು. ಇಡೀ ಕನ್ನಡ ಚಿತ್ರರಂಗದ ತಾಯಿ ಅಂದರೂ ಕೂಡ ಅತಿಶಯೋಕ್ತಿಯೇನಲ್ಲ. ಅವರನ್ನು ಸುಮಾರು ಎರಡು ವರ್ಷಗಳಿಂದ ಅವರನ್ನು ಭೇಟಿ ಮಾಡಬೇಕು ಅಂತ ಅನಿಸುತ್ತಿತ್ತು. ಆದರೆ, ಯಾಕೋ ಸರಿಯಾದ ಸಮಯ ಕೂಡಿ ಬಂದಿರಲಿಲ್ಲ. ಈಗ ಆ ಸಮಯ ಒದಗಿ ಬಂದಿದೆ. ಇದು ನನಗೆ ಸುಸಮಯ. ನಾನೆಷ್ಟು ಪುಣ್ಯ ಮಾಡಬೇಕು ಅಂತ ಅನಿಸಿತು. ಆ ದೇವರ ಇನ್ನೂ ಆರೋಗ್ಯ ಭಾಗ್ಯ ಕೊಡಲಿ. ಶತಾಯುಷಿಯಾಗಿ ಇರಲಿ ಅಂತ ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ." ಎಂದು ಉಮಾಶ್ರೀ ಹೇಳಿದ್ದಾರೆ.
"ದೇವರಂತಹ ತಾಯಿ.. ತಾಯಿಗೂ ಅಂತಹದ್ದೇ ಮಗ"
ಹಿರಿಯ ನಟಿ ಲೀಲಾವತಿಯವರನ್ನು ಪುತ್ರ ವಿನೋದ್ ರಾಜ್ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. ಇಡೀ ಚಿತ್ರರಂಗವೇ ಅಮ್ಮ-ಮಗನ ಬಾಂಧವ್ಯ ಕಂಡು ಖುಷಿ ವ್ಯಕ್ತಪಡಿಸಿತ್ತು. ಈಗ ಉಮಾಶ್ರೀ ಕೂಡ ಅದೇ ಮಾತು ವ್ಯಕ್ತಪಡಿಸಿದ್ದಾರೆ.
"ತಾಯಿಯನ್ನ ದೇವರಿಗೆ ಸಮನಾಗಿ ನೋಡುವಂತಹ ಒಬ್ಬ ಮಗನನ್ನು ನೋಡುತ್ತಿದ್ದೇನೆ. ಬಹಳ ಖುಷಿ ಬಹಳ ಹೆಮ್ಮೆ ಆಗುತ್ತೆ. ಜಗತ್ತಿನಲ್ಲಿ ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತ ಪದಗಳಲ್ಲಿ ಹೇಳ್ತೀವಿ. ಅವರು ದೇವರು ಅಂತಲೇ ತಿಳಿದುಕೊಂಡು ಸೇವೆ ಮಾಡುವಂತಹ ಮಗ ಸಿಗೋದು ತುಂಬಾ ವಿರಳ. ಅಂತಹ ಮಗನನ್ನು ತಾಯಿ ಪಡೆದುಕೊಂಡಿದ್ದಾರೆ. ದೇವರಂತಹ ತಾಯಿಯನ್ನು ಮಗ ಪಡೆದುಕೊಂಡಿದ್ದಾನೆ." ಎಂದು ಉಮಾಶ್ರೀ ಹೇಳಿದ್ದಾರೆ.
ಶೂಟಿಂಗ್ ಸ್ಪಾಟ್‌ನಲ್ಲೇ ಅಡುಗೆ ಮಾಡ್ತಿದ್ರು
ಲೀಲಾವತಿಯವರು ಇಳಿ ವಯಸ್ಸಿನಲ್ಲೂ ಚೈತ್ಯನ್ಯದಿಂದರಲು ಅವರ ಜೀವನ ಶೈಲಿಯೇ ಕಾರಣವೆಂದು ಹೇಳಿದ್ದಾರೆ. ಶೂಟಿಂಗ್‌ಗೆ ಬಂದಾಗಲೂ ಅಲ್ಲೇ ರೈತರು ಬೆಳೆದ ಸೊಪ್ಪು ತರಕಾರಿಗಳನ್ನು ತೆಗೆದುಕೊಂಡು ಅಡುಗೆ ಮಾಡುತ್ತಿದ್ದರು. ಅದೇ ಅವರ ಆರೋಗ್ಯದ ಗುಟ್ಟು ಎಂದು ಹೇಳಿದ್ದಾರೆ.
"ಲೀಲಾವತಿ ಅಮ್ಮನವರು ಶೂಟಿಂಗ್ ಸೆಟ್ಟಿನಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡೋರು. ಈಗಿನವರಂತೆ ಪಿಜ್ಞಾ ಬರ್ಗರ್ ಅದೆಲ್ಲ ಇರಲಿಲ್ಲ. ಅದರಕ್ಕೆ ಇಷ್ಟು ವಯಸ್ಸಾದರೂ ಅವರ ಮುಖದಲ್ಲಿ ಏನು ಕಳೆಯಿದೆ. ಕಲಾವಿದರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದನ್ನು ಡಾ.ರಾಜ್‌ಕುಮಾರ್ ಹಾಗೂ ಲೀಲಾವತಿ ಅಮ್ಮನವರನ್ನು ನೋಡಿ ಕಲಿಯೋದಿದೆ." ಎಂದು ಉಮಾಶ್ರೀ ಹೇಳಿದ್ದಾರೆ.


Click it and Unblock the Notifications











