"ವ್ಯಾಪಾರ ಎಂದಾಗ ನಾನು ರಾಕ್ಷಸ.. ಜೇಬಿಗೆ ಕೈ ಹಾಕಿ ಕಿತ್ಕೊಳ್ಳೋದು ಗೊತ್ತಿದೆ"- ನಿರ್ಮಾಪಕ ಉಮಾಪತಿ

ಚಿಕ್ಕಣ್ಣ ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ 'ಉಪಾಧ್ಯಕ್ಷ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಪ್ರೇಕ್ಷಕರು 'ಉಪಾಧ್ಯಕ್ಷ' ಕಾಮಿಡಿಗೆ ಮನಸೋತಿದ್ದಾರೆ. ಇದೇ ಖುಷಿಯಲ್ಲಿ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಇಡೀ ಚಿತ್ರತಂಡ ಯಶಸ್ಸಿನ ಖುಷಿಯನ್ನು ಹಂಚಿಕೊಂಡಿದೆ.

ಈ ವೇಳೆ ನಿರ್ಮಾಪಕ ಉಮಾಪತಿ ಹಲವು ಗಂಭೀರ ವಿಷಯಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. 'ಉಪಾಧ್ಯಕ್ಷ' ಸಿನಿಮಾ ಆರಂಭದ ವೇಳೆ ಹಲವು ಅಡೆ ತಡೆಗಳಾಗಿದ್ದವು. ಅಲ್ಲದೆ, ಚಿಕ್ಕಣ್ಣ ಫ್ಲಾಪ್ ಅನ್ನುವ ಪದವನ್ನು ಕೇಳೀ ಶೇಕ್ ಆಗಿದ್ದು, ಟಿಕೆಟ್ ಕೊಡದೇ ಕಲೆಕ್ಷನ್ ಮಾಡುತ್ತಿದ್ದದ್ದು, ಬಗ್ಗೆ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾ ಎಷ್ಟು ಕಲೆಕ್ಷನ್ ಮಾಡಿರಬಹುದು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ನಿರ್ಮಾಪಕ ಉಮಾಪತಿ ಮಾತಿನ ಝಲಕ್ ಇಲ್ಲಿದೆ.

Upadhyaksha Producer Umapathy

ಫ್ಲಾಪ್ ಪದ ಕೇಳಿದ್ರೆ ಚಿಕ್ಕಣ್ಣ ಶೇಕ್ ಆಗ್ತಿದ್ರು

"ಚಿಕ್ಕಣ್ಣ ಯಾವಾಗಲೂ ಅಬ್ಸೆನ್ಸ್ ಮೈಂಡ್‌ನಲ್ಲಿ ಇರೋರು. ಅಪ್ಪಾಜಿ ಎಲ್ಲರೂ ಹೆದರಿಸುತ್ತಾರೆ. ಸಿನಿಮಾ ರಿಲೀಸ್ ಆದಾಗ ಹೆಂಗೆ? ಪ್ಲಾಪ್ ಆಗ್ಬಿಟ್ರೆ ಹೆಂಗೆ? ಚಿಕ್ಕಣ್ಣನಿಗೆ ಫ್ಲಾಪ್ ಅನ್ನುವ ಪದ ಕೇಳಿದರೆ ಸಾಕು ಶೇಕ್ ಆಗ್ಬಿಡೋರು. ಅಪ್ಪಾಜಿ ನೆಗೆಟಿವ್ ಮಾತ್ರ ಮಾಡೋದು ಬೇಡ. ಪಾಸಿಟಿವ್ ಮಾತ್ರ ಮಾತಾಡೋಣ ಅಂತಿದ್ರು." ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

"ಅವಮಾನವನ್ನು ಚಾಲೆಂಜ್ ಆಗಿ ತೆಗೆದುಕೊಂಡ್ವಿ"

"ಸೀಕ್ರೆಟ್ ಅನ್ನೋದು ಏನಿಲ್ಲ. ಅವಮಾನವನ್ನು ಚಾಲೆಂಜ್ ಆಗಿ ತೆಗೆದುಕೊಂಡ್ವಿ ಅಷ್ಟೇ. ಚಿಕ್ಕಣ್ಣ ಅವರಿಗೆ ಭಯ ಪಡಿಸಿದ ಕಾಲೆಳೆದಿರೋರು ಬಹಳಷ್ಟು ಜನ ಇದ್ದಾರೆ. ಇವತ್ತು ಕಾಲೆಳೆದಿರೋರು ಕಾಲ್‌ಶೀಟ್ ಕೇಳುತ್ತಿದ್ದಾರೆ. ಬಹಳ ಖುಷಿ ಆಯ್ತು. ಅದು ಸಾಧನೆ. ಅವತ್ತು ಕಾಲು ಎಳೆದಿದ್ರು ಏನು ಪರ್ವಾಗಿಲ್ಲ. ನಿಮಗೆ ನಮಗೆ ಹಣೆಬರಹ ಬರೆಯೋ ಶಕ್ತಿ ಕೊಟ್ಟಿದ್ದಾರೆ." ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

ಚಿಕ್ಕಣ್ಣ-ಉಮಾಪತಿ ಸೋಲಬೇಕು ಕಾಯ್ತಿದ್ರು

"ನಾನು ನೇರವಾಗಿ ಹೇಳುತ್ತೇನೆ. ಸೋತಿದ್ರೆ ನಾಲ್ಕು ಜನನೂ ಇರುತ್ತಿರಲಿಲ್ಲ. ಗೆದ್ದಿದ್ದೀವಿ 10 ಜನ ಜೊತೆಯಲ್ಲಿ ಇದ್ದೇವೆ. ಧೈರ್ಯವಾಗಿ ಹೇಳಿಕೊಳ್ಳುವುದಕ್ಕೆ ನಾವೇನು ತಲೆಕೆಡಿಸಿಕೊಳ್ಳಬೇಕಿಲ್ಲ. ಚಿಕ್ಕಣ್ಣ ಸೋಲಬೇಕು. ಉಮಾಪತಿ ಸೋಲಬೇಕು ಅಂತ ಬೇಕಾದಷ್ಟು ಜನ ಕಾಯ್ತಿದ್ರು. ನಮ್ಮ ತಂದೆ, ಅವ್ರ ತಂದೆ ಜೀವಂತವಾಗಿ ಇರದೇ ಇದ್ದರೂ ಅವರ ಆತ್ಮ ನಮ್ಮನ್ನು ಕಾಪಾಡುತ್ತಿದೆ. ಎಲ್ಲಿಲ್ಲ ಸಮಸ್ಯೆ ಅದನ್ನು ನಾವು ಭೇದಿಸಿಕೊಂಡು ಹೋಗಬೇಕಷ್ಟೆ." ಎಂದಿದ್ದಾರೆ.

ಕೊಪ್ಪಳ ಜಿಲ್ಲೆಯವರು ಟಿಕೆಟ್ ಹರಿಯಲ್ಲ ಅಂತಾರೆ

"ವ್ಯಾಪಾರ ಅಂತ ಬಂದಾಗ ನಾನು ರಾಕ್ಷಸ. ನಾನು ಯಾರಿಗೂ ಪ್ಲೀಸ್ ಮಾಡಿ ಕೂತುಕೊಳ್ಳಬೇಕಾಗಿಲ್ಲ. ನನಗೆ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳೋದು ಗೊತ್ತಿದೆ. ಜೀವನ ಕಿತ್ತುಕೊಳ್ಳುವುದೂ ಗೊತ್ತಿದೆ. ಯಾಕಂದ್ರೆ, ನಾವು ಈ ಲೆವೆಲ್‌ಗೆ ಬರೋಕೆ ಬಹಳಷ್ಟು ಕಷ್ಟ ಪಟ್ಟಿದ್ದೀವಿ. ಅದಕ್ಕೆ ಯಾರೇ ನಮಗೆ ಬರೋದನ್ನು ತಡೆ ಹಾಕಿದ್ರೂ ಬಿಡೋದಿಲ್ಲ ಕಿತ್ತುಕೊಳ್ಳುತ್ತೇನೆ. ನಾನು ಹೇಳುವುದಿಷ್ಟೇ ಒಂದು ಥಿಯೇಟರ್‌ನಲ್ಲಿ ಏನಾದ್ರು ಬರ್ತಿದೆ ಅಂದ್ರೆ ಖುಷಿ ಪಡಬೇಕಷ್ಟೇ. ಯಾರೋ ಒಂದೆರಡು ಥಿಯೇಟರ್ ಮಾಡೋ ಕೆಲಸಕ್ಕೆ ಎಲ್ಲರಿಗೂ ಕೆಟ್ಟ ಹೆಸರು. ಕೊಪ್ಪಳ ಜಿಲ್ಲೆಯವರು ನಾವು ಹಿಂಗೆನೇ ಟಿಕೆಟ್ ಹರಿಯಲ್ಲ ಅಂತಾನೆ. ನಾನು ಭಂಡ ಅದಕ್ಕೆ ಅಂತ ಕಡೆ ಸಿನಿಮಾನೇ ಹಾಕಲ್ಲ." ಎಂದು ಆಕ್ರೋಶ ಹೊರ ಹಾಕಿದ್ರು.

More from Filmibeat

English summary
Upadhyaksha Producer Umapathy said he is monster when it comes to business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X