ಏಳು ಭಾಷೆಗಳಲ್ಲಿ 'ಕಬ್ಜ' ಸಿನಿಮಾದ ಡಬ್ಬಿಂಗ್ ಆರಂಭ: ಯಾವಾಗ ರಿಲೀಸ್?
ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾಗಿದೆ. 'ಕೆಜಿಎಫ್ 2' ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಕ್ರೇಜ್‌ನಲ್ಲಿ ಸೆಟ್ಟೇರಿದ್ದ ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಸಿನಿಮಾ 'ಕಬ್ಜ'.
'ಕಬ್ಜ' ಹಲವು ದಿನಗಳಿಂದ ಶೂಟಿಂಗ್ ನಡೆಯುತ್ತಲೇ ಇದೆ. ಈ ಸಿನಿಮಾವನ್ನು ಏಳು ಭಾಷೆಯಲ್ಲಿ ಬಿಡುಗಡೆ ಮಾಡಲು ನಿರ್ದೇಶಕ ಆರ್ ಚಂದ್ರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ಕಬ್ಜ' ಸಿನಿಮಾದ ಶೂಟಿಂಗ್ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎಂದು ಆರ್ ಚಂದ್ರು ಹೇಳಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನಿಮಾ ಡಬ್ಬಿಂಗ್ ಆರಂಭಿಸಿದ್ದಾರೆ.
7 ಭಾಷೆಯಲ್ಲಿ 'ಕಬ್ಜ' ಡಬ್ಬಿಂಗ್ ಆರಂಭ
ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು 'ಕಬ್ಜ'. ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಸಿನಿಮಾ ಹೈಲೈಟ್. ಇನ್ನೊಂದು ಕಡೆ ಏಳು ಭಾಷೆಯಲ್ಲಿ 'ಕಬ್ಜ' ಸಿನಿಮಾ ಬಿಡುಗಡೆಯಾಗಲಿದೆ ಎಂದು ಈ ಹಿಂದೆಯೇ ಆರ್ ಚಂದ್ರು ಹೇಳಿದ್ದಾರೆ. ಅದರಂತೆಯೇ ಈಗ ಸಿನಿಮಾ ಶೂಟಿಂಗ್ ಕೂಡ ಆರಂಭ ಮಾಡಿದ್ದಾರೆ.

ಅಂದ್ಹಾಗೆ ಏಳು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಜೊತೆಗೆ ಮರಾಠಿ ಹಾಗೂ ಬೆಂಗಾಲಿ ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ 'ಕಬ್ಜ' ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಆದರೆ, ಶೂಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಿನಿಮಾದ ಬಗ್ಗೆ ಸಿನಿಪ್ರಿಯರಲ್ಲಿ ಗೊಂದಲ ಮೂಡಿದೆ. ಆದಷ್ಟು ಬೇಗ 'ಕಬ್ಜ' ರಿಲೀಸ್ ಆಗಲಿ ಅಂತ ಸಿನಿಪ್ರಿಯರು ಕಾದು ಕೂತಿದ್ದಾರೆ.
ಉಪ್ಪಿ ಜೊತೆ ಕಿಚ್ಚ ಸುದೀಪ್: ಶೂಟಿಂಗ್ ಮುಗೀತಾ?
'ಕಬ್ಜ' ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇ ಬಾರಿಗೆ ಸುದೀಪ್ ಹಾಗೂ ಉಪೇಂದ್ರ ಕಾಂಬಿನೇಷನ್ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ. ಆದರೆ, ಇನ್ನೂ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಟಾಕಿ ಪೋಷನ್ ಎಲ್ಲಾ ಮುಕ್ತಾಯವಾಗಿದೆ ಎನ್ನುತ್ತಿದೆ ಚಿತ್ರತಂಡ.
ಇನ್ನೊಂದು ಕಡೆ 'ಕಬ್ಜ' ಸಿನಿಮಾ ಏಕಕಾಲದಲ್ಲಿ ಏಳು ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸಿದ್ಧತೆಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಡಬ್ಬಿಂಗ್ ಕೂಡ ಏಕಕಾಲದಲ್ಲಿ ಮಾಡಲಾಗುತ್ತಿದೆ.

'ಕಬ್ಜ' ಸಿನಿಮಾ 40ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಅಂಡರ್‌ವರ್ಲ್ಡ್ ಬ್ಯಾಕ್‌ಗ್ರೌಂಡ್‌ನಲ್ಲಿ ಸಾಗುವ ಕಥೆಯಾಗಿದ್ದರಿಂದ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಸದ್ಯ ಚಿತ್ರತಂಡ ಕೇವಲ ಮೋಷನ್ ಪೋಸ್ಟರ್ ಅಷ್ಟೇ ರಿಲೀಸ್ ಮಾಡಿದೆ. ಆದರೆ, ಫ್ಯಾನ್ಸ್ ಟೀಸರ್ ರಿಲೀಸ್ ಮಾಡುವಂತೆ ಕೇಳಿಕೊಂಡರೂ. ಆರ್ ಚಂದ್ರ ಮಾತ್ರ ಇನ್ನೂ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲ. ಅದ್ಯಾವಾಗ, ಈ ಸಿನಿಮಾದ ಟೀಸರ್ ರಿಲೀಸ್ ಆಗುತ್ತೋ? ಅನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.


Click it and Unblock the Notifications











