UI Box Office: 2 ಲಕ್ಷಕ್ಕೂ ಅಧಿಕ ಟಿಕೆಟ್ ಸೇಲ್.. ಮೊದಲ ದಿನದ ಲೆಕ್ಕಾಚಾರವೇನು?

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾ 'ಯುಐ' ಮೇಲೆ ಎಲ್ಲರ ಕಣ್ಣು ಇದೆ. ದಿಗ್ಗಜರೇ ಸೇರಿಕೊಂಡು ನಿರ್ಮಿಸಿರುವ 'ಯುಐ' ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಒಂದ್ಕಡೆ ಉಪೇಂದ್ರ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅದೇ ಇನ್ನೊಂದು ಕಡೆ ಸ್ಯಾಂಡಲ್‌ವುಡ್‌ನ ಅನುಭವಿ ನಿರ್ಮಾಪಕರು ಕೆ.ಪಿ ಶ್ರೀಕಾಂತ್, ಜಿ.ಮನೋಹರನ್ 'ಯುಐ' ಸಿನಿಮಾದ ಹಿಂದಿದ್ದಾರೆ.

'ಯುಐ' ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದರಿಂದ ಕೆಲವು ದಿನಗಳ ಹಿಂದೆನೇ ಐದು ಭಾಷೆಯಲ್ಲೂ ಬುಕಿಂಗ್ ಓಪನ್ ಆಗಿತ್ತು. ನಿರೀಕ್ಷೆಯಂತೆ ಕನ್ನಡದಲ್ಲಿ 'ಯುಐ' ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಡ್ವಾನ್ಸ್ ಬುಕಿಂಗ್‌ಗೆ ಪ್ರೇಕ್ಷಕರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಹೀಗಾಗಿ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.

Upendra and Reeshma Nanaiah movie UI Day 1 box office collection prediction

ಅಡ್ವಾನ್ಸ್ ಬುಕಿಂಗ್‌ಗೆ ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬೆಳಗ್ಗೆ 6.30ಕ್ಕೆ ಫ್ಯಾನ್ಸ್ ಶೋ ಇದೆ. ಇದಕ್ಕೆ ಈಗಾಗಲೇ ಶೇ.85ರಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಎನ್ನಲಾಗಿದೆ. ಇನ್ನು ವಿತರಣಾ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಅಧಿಕೃತವಾಗಿ ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ ಅನ್ನೋದನ್ನು ರಿವೀಲ್ ಮಾಡಿದೆ. ಹೀಗಾಗಿ ಇದನ್ನು ನೋಡಿ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಬಾಕ್ಸಾಫೀಸ್‌ ಲೆಕ್ಕಾಚಾರ ಹಾಕಿದ್ದಾರೆ.

ಎಷ್ಟು ಟಿಕೆಟ್‌ಗಳು ಸೇಲ್?

ಉಪೇಂದ್ರ, ರೀಷ್ಮಾ ನಾಣಯ್ಯ ನಟನೆಯ ಸಿನಿಮಾ 'ಯುಐ' ಅನ್ನು ಕರ್ನಾಟಕದಾದ್ಯಂತ 'ಟಾಕ್ಸಿಕ್' ನಿರ್ಮಾಣ ಸಂಸ್ಥೆ ಕೆವಿಎನ್ ವಿತರಣೆ ಮಾಡುತ್ತಿದೆ. ಮೊದಲ ದಿನ ಕರ್ನಾಟಕದಾದ್ಯಂತ ಸುಮಾರು 2.22 ಲಕ್ಷ ಟಿಕೆಟ್‌ಗಳು ಈಗಾಗಲೇ ಬುಕಿಂಗ್ ಆಗಿರುವುದಾಗಿ ಕೆವಿಎನ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದೆ. ಈ ಕಾರಣಕ್ಕೆ 'ಯುಐ' ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಟ್ರೇಡ್‌ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ.

ಮೊದಲ ದಿನ ಎಷ್ಟು ಗಳಿಸಬಹುದು?

ಮೊದಲ ದಿನ 2.22 ಲಕ್ಷ ಟಿಕೆಟ್‌ಗಳು ಬುಕಿಂಗ್ ಆಗಿವೆ. ಹಾಗಂತ ಇದೇ ಅಂತಿಮ ಅಲ್ಲ. ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಸಾಮಾನ್ಯವಾಗಿ ಥಿಯೇಟರ್‌ಗೆ ಹೋಗಿ ಟಿಕೆಟ್‌ಗಳನ್ನು ಖರೀದಿ ಮಾಡುತ್ತಾರೆ. ಹೀಗಾಗಿ ನಾಳೆ ಇಡೀ ದಿನ ಎಷ್ಟು ಟಿಕೆಟ್‌ಗಳನು ಸೇಲ್ ಆಗುತ್ತವೆ ಅನ್ನೋದರ ಮೇಲೆ 'ಯುಐ' ಕಲೆಕ್ಷನ್ ನಿರ್ಧಾರ ಆಗಲಿದೆ. ಅಡ್ವಾನ್ಸ್ ಬುಕಿಂಗ್ ಆಧಾರದ ಮೇಲೆ ಮೊದಲ ದಿನ ಅಂದಾಜು 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಕರ್ನಾಟಕದ ವಿತರಕರ ವಲಯ ನಿರೀಕ್ಷೆ ಮಾಡಿದೆ.

Upendra and Reeshma Nanaiah movie UI Day 1 box office collection prediction

ಬೇರೆ ಭಾಷೆಯಲ್ಲಿ ಹೇಗಿದೆ ರೆಸ್ಪಾನ್ಸ್?

ರಿಯಲ್ ಸ್ಟಾರ್ ಉಪೇಂದ್ರ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲೂ ಪರಿಚಯವಿರುವ ನಟ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ತೆಲುಗು ಮಂದಿಗೆ ಚಿರಪರಿಚಿತ. ಅದರಲ್ಲೂ ಉಪ್ಪಿ ನಿರ್ದೇಶನದ ಸಿನಿಮಾ ಅವರಿಗೆ ಇಷ್ಟ. ಇನ್ನೊಂದು ಕಡೆ ತಮಿಳಿನಲ್ಲೂ ಉಪ್ಪಿ ನಟಿಸಿದ್ದಾರೆ. ಹಾಗೇ ರಜನಿಕಾಂತ್ ನಟಿಸುತ್ತಿರುವ 'ಕೂಲಿ' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ನಿರೀಕ್ಷೆ ಮಾಡಲಾಗಿದೆ.

ಹಿಂದಿ ಏರಿಯಾ ಮೇಲೆ ನಿರೀಕ್ಷೆ

'ಯುಐ' ಟಿಪಿಕಲ್ ಉಪೇಂದ್ರ ಸಿನಿಮಾ. ಹಿಂದಿ ಆಡಿಯನ್ಸ್ ತಲೆಗೆ ಹುಳ ಬಿಟ್ಟುಕೊಂಡು ಸಿನಿಮಾ ನೋಡುವುದಿಲ್ಲ. ಈ ಕಾರಣಕ್ಕೆ ಹಿಂದಿ ಏರಿಯಾದಲ್ಲಿ 'ಯುಐ' ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮೊದಲ ದಿನ ಹೆಚ್ಚು ಟಿಕೆಟ್‌ಗಳು ಸೇಲ್ ಆಗದೇ ಹೋದರೂ, ಫಸ್ಟ್ ಡೇ ರಿಪೋರ್ಟ್ ಮೇಲೆ 'ಯುಐ' ಭವಿಷ್ಯ ನಿಂತಿದೆ. ಹಿಂದಿ ಬೆಲ್ಟ್‌ನಲ್ಲಿ ಅದ್ಭುತ ಕಲೆಕ್ಷನ್‌ ಆದರೆ, 'ಯುಐ' ದಾಖಲೆ ಮಾಡೋದು ಗ್ಯಾರಂಟಿ.

More from Filmibeat

English summary
Upendra and Reeshma Nanaiah movie UI Day 1 box office collection prediction;
Read more about: upendra ui box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X