ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ?: ಬರ್ತ್‌ಡೇಯಂದೇ ಉಪ್ಪಿ ಕೊಟ್ಟ ಸುಳಿವೇನು?

ರಿಯಲ್ ಸ್ಟಾರ್ ಸಿನಿಮಾ ಅಂದರೆ ಡಿಫ್ರೆಂಟ್. ಉಪೇಂದ್ರ ಡೈರೆಕ್ಷನ್ ಕ್ಯಾಪ್ ತೊಟ್ಮೇಲೆ ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಶೂಟ್ ಶಾಟ್ ಅಂತಲೇ. ಈಗ ರಿಯಲ್ ಸ್ಟಾರ್ ಮತ್ತೆ ನಿರ್ದೇಶನಕ್ಕೆ ಮರಳಿರೋದು ಗೊತ್ತೇ ಇದೆ. ಈಗಾಗಲೇ ಕೆಲವು ಶೂಟಿಂಗ್ ಕೂಡ ಮಾಡಿದ್ದಾರೆ.

ಇಂದು (ಸೆಪ್ಟೆಂಬರ್ 18) ರಿಯಲ್ ಸ್ಟಾರ್ ಉಪೇಂದ್ರ ಬರ್ತ್‌ಡೇ. ಹೀಗಾಗಿ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ರಾತ್ರಿಯಿಂದಲೇ ಫ್ಯಾನ್ಸ್ ಉಪ್ಪಿಗೆ ಬರ್ತ್‌ಡೇ ವಿಶ್ ಮಾಡುತ್ತಿದ್ದಾರೆ. ಈ ಬಾರಿ ಉಪ್ಪಿ ನಿರ್ದೇಶನಕ್ಕೆ ಮರಳಿರೋದು ಅವರ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ಕೊಟ್ಟಂತಾಗಿದೆ.

ಉಪೇಂದ್ರ ಬರ್ತ್‌ಡೇ ಅಂದ್ಮೇಲೆ ಸರ್ಪ್ರೈಸ್ ಇರಲೇಬೇಕು. ಅದರಲ್ಲೂ ಅವರೇ ನಿರ್ದೇಶನ ಮಾಡುತ್ತಿರುವ ಸಿನಿಮಾ ಅಂದ್ಮೇಲೆ ಏನಾದರೂ ಸೀಕ್ರೆಟ್ ಇಟ್ಟೇ ಇಟ್ಟಿರುತ್ತಾರೆ. ಸದ್ಯ ಉಪ್ಪಿ ನಿರ್ದೇಶನದ 'ಯುಐ' ಸಿನಿಮಾ ತಂಡ ವಿಶಿಷ್ಟವಾಗಿ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಉಪ್ಪಿ ಚಿಕ್ಕದೊಂದು ಸುಳಿವು ನೀಡಿದ್ದಾರೆ.

'ಯುಐ' ತಂಡದ ವಿಶಿಷ್ಟ ವಿಡಿಯೋ

'ಯುಐ' ತಂಡದ ವಿಶಿಷ್ಟ ವಿಡಿಯೋ

ರಿಯಲ್ ಸ್ಟಾರ್ ಬರ್ತ್‌ಡೇಗೆ 'ಯುಐ' ತಂಡ ಸಖತ್ತಾಗಿರೋ ವಿಡಿಯೋ ಒಂದನ್ನು ಬಿಟ್ಟಿದೆ. ಈ ವಿಡಿಯೋದಲ್ಲಿ ಉಪೇಂದ್ರ ಮಾನಿಟರ್ ಒಳಗೆ ಮುಳುಗಿ ಹೋಗಿದ್ದಾರೆ. ಇದರಲ್ಲಿ ಏನು ವಿಶೇಷ ಅಂತಿರಾ? ಪ್ರೇಮ್ ಒಳಗೊಂದು ಪ್ರೇಮ್ ಇಟ್ಟು ತೋರಿಸುವ ತಂಡ ಬ್ಯಾಕ್‌ ಗ್ರೌಂಡ್‌ನಲ್ಲಿ ಡೈಲಾಗ್ ಬಿಡೋವರೆಗೂ ಉಪೇಂದ್ರರನ್ನು ತೋರಿಸೋದಿಲ್ಲ. ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ? ಅಂತ ಡೈಲಾಗ್ ಬಿದ್ದಾಗಲೇ ಉಪ್ಪಿ ತಿರುಗಿ ನೋಡೋದು. ಅಷ್ಟಕ್ಕೂ ಉಪ್ಪಿ ಕೊನೆಯಲ್ಲಿ ತಲೆಗೊಂದು ಹುಳ ಬಿಟ್ಟಿದ್ದಾರೆ.

ಉಪ್ಪಿ ಕೊಟ್ಟ ಸುಳಿವೇನು?

ಉಪ್ಪಿ ಕೊಟ್ಟ ಸುಳಿವೇನು?

'ಯುಐ' ವಿಡಿಯೋ ತೀರಾ ದೊಡ್ಡದೇನು ಅಲ್ಲ. ಆದರೆ, ವಿಶಿಷ್ಠವಾಗಿ ಉಪ್ಪಿ ಶೈಲಿಯಲ್ಲಿಯೇ ಶೂಟ್ ಮಾಡಲಾಗಿದೆ. "ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ? ಸ್ವಲ್ಪ ಆಚೆ ಬನ್ನಿ. ಇವತ್ತು ನಿಮ್ಮ ಅಭಿಮಾನಿಗಳ ದಿನ. ಪ್ರಜಾ ಪ್ರಭುಗಳು ನಿಮಗೋಸ್ಕರ ಕಾಯ್ತಿದ್ದಾರೆ. ಬನ್ನಿ ಸಾರ್" ಕ್ಯಾಮರಾ ಹಿಂದಿಂದ ಡೈಲಾಗ್ ಬರ್ತಿದ್ದಂತೆ ಉಪ್ಪಿ ಥಮ್ಸ್ ಅಪ್ ಮಾಡುತ್ತಾರೆ. ಅದರ ಹಿಂದೆನೇ "ಕಮಿಂಗ್ ಸೂನ್" ಅಂತ ಉಪ್ಪಿ ಹೇಳಿದ್ದು, ಫ್ಯಾನ್ಸ್‌ಗಳಿಗೆ ಟ್ರಿಗರ್ ಆಗಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತೆ ಅಂತನಾ? ಇಲ್ಲಾ ಟೀಸರ್ ಬಿಡ್ತಾರಾ? ಟ್ರೈಲರ್ ಬಿಡ್ತಾರಾ? ಹೀಗೆ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ತಲೆಗೆ ಹುಳ ಬಿಡ್ತಾರೆ ಉಪ್ಪಿ

ತಲೆಗೆ ಹುಳ ಬಿಡ್ತಾರೆ ಉಪ್ಪಿ

ಉಪೇಂದ್ರ ನಿರ್ದೇಶನ ಮಾಡುವ ಸಿನಿಮಾ ಕಾಮನ್ ಅಲ್ಲ. ಈ ಹಿಂದೆ ಅವರು ನಿರ್ದೇಶಿಸಿದ ಸಿನಿಮಾಗಳೆಲ್ಲವೂ ಇಂತಹ ಅನುಭವಗಳನ್ನು ನೀಡಿದೆ. "ಯುಐ' ಕೂಡ ಸಿನಿಪ್ರಿಯರನ್ನು ಆಲೋಚನೆಗೀಡು ಮಾಡುವ ಸಿನಿಮಾ" ಅಂತ ಉಪ್ಪಿ ಸಿನಿಮಾ ಆರಂಭ ಮಾಡುವಾಗ ಹೇಳಿದ್ದರು. ಈ ಮೂಲಕ ಅದ್ಭುತವಾದ ಸಿನಿಮ್ಯಾಟಿಕ್‌ ಎಕ್ಸ್‌ಪಿರಿಯನ್ಸ್‌ ಅನ್ನು 'ಯುಐ'ನಲ್ಲಿ ನಿರೀಕ್ಷೆ ಮಾಡಬಹುದಾಗಿದೆ.

ಪ್ಯಾನ್ ಇಂಡಿಯಾ ರಿಲೀಸ್

ಪ್ಯಾನ್ ಇಂಡಿಯಾ ರಿಲೀಸ್

'ಕಬ್ಜ' ಸಿನಿಮಾ ಜೊತೆ ಉಪೇಂದ್ರ ಪ್ಯಾನ್ ಇಂಡಿಯಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದರ ಹಿಂದೆನೇ ತಾವೇ ನಿರ್ದೇಶಿಸಿದ 'ಯುಐ' ಸಿನಿಮಾವನ್ನೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತೆ. ಈಗಾಗಲೇ ಉಪೇಂದ್ರ ತೆಲುಗು ಹಾಗೂ ತಮಿಳಿನಲ್ಲಿ ಚಿರಪರಿಚಿತ. ಹೀಗಾಗಿ 'ಯುಐ' ಬಾಕ್ಸಾಫೀಸ್‌ ಮೇಲೆ ಎಲ್ಲರ ಕಣ್ಣಿದೆ. ವಿಡಿಯೋದಲ್ಲಿ ಸುಳಿವು ಕೊಟ್ಟಂತೆ ಇದೇ ವರ್ಷ ಸಿನಿಮಾ ರಿಲೀಸ್ ಮಾಡುತ್ತಾರಾ? ಅನ್ನೋದನ್ನು ಎದುರು ನೋಡಬೇಕಿದೆ.

More from Filmibeat

English summary
Upendra Birthday: UI Movie Team Special Wish For Real Star, Know More.
Read more about: upendra sandalwood kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X