'A' ಚಿತ್ರದ ಆ ಒಂದು ದೃಶ್ಯದಲ್ಲಿ ನಟಿಸಿದ್ದ ಉಪ್ಪಿ ಅಣ್ಣನ ಮಗ ನಿರಂಜನ್ ಈಗ ಸ್ಯಾಂಡಲ್‌ವುಡ್‌ಗೆ 'ಹಂಟರ್'

ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟನೆಯ ಮತ್ತೊಂದು ಸಿನಿಮಾ 'ಹಂಟರ್'. ಈ​ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಅಣ್ಣ ಮಗನಿಗೆ ಸದಾ ಬೆಂಬಲವಾಗಿ ನಿಂತಿರುವ ಉಪೇಂದ್ರ ಇದೇ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಅನ್ನು ರಿಲೀಸ್ ಮಾಡಿದ್ದರು. ಈ ಬಾರಿ ಫಸ್ಟ್ ಲುಕ್ ಟೀಸರ್ ಅನ್ನು ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಜೊತೆಯಾಗಿ ರಿಲೀಸ್ ಮಾಡಿ, ಶುಭ ಹಾರೈಸಿದ್ದಾರೆ.

ನಿರಂಜನ್ ಸುಧೀಂದ್ರ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಬ್ಯುಸಿ. ನಿರಂಜನ್ ಅಭಿನಯದ ಒಂದೇ ಒಂದು ಸಿನಿಮಾ ಬಿಡುಗಡೆಯಾಗಿಲ್ಲ. ಆಗಲೇ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕನ್ನಡದ ಯಾವುದೇ ನಟನಿಗೂ ಇಂತಹದ್ದೊಂದು ಅವಕಾಶ ಸಿಕ್ಕಿದ್ದು ತೀರಾ ವಿರಳ. ನಿರಂಜನ್ ಹೈಟ್, ಪರ್ಸನಾಲಿಟಿ ಹಾಗೂ ನಟನೆಗೆ ಮರುಳಾಗಿರುವ ಕನ್ನಡ ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿದ್ದಾರೆ. ಅದರಲ್ಲೊಂದು 'ಹಂಟರ್'.

'ಹಂಟರ್' ಅಡ್ಡದಲ್ಲಿ 'A' ಸಿನಿಮಾದ ಮೆಲುಕು

ಉಪೇಂದ್ರ ತಮ್ಮ ಅಣ್ಣನ ಮಗನ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ್ದಷ್ಟೇ ಅಲ್ಲದೆ, ಇಂಟ್ರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ಉಪ್ಪಿ ನಾಯಕನಾಗಿ ನಟಿಸಿದ 'A' ಸಿನಿಮಾದ ಒಂದು ದೃಶ್ಯದಲ್ಲಿ ನಿರಂಜನ್ ನಟಿಸಿರುವ ಗುಟ್ಟನ್ನು ಈಗ ರಿವೀಲ್ ಮಾಡಿದ್ದಾರೆ. ತಮ್ಮ ವಿಭಿನ್ನ ಸ್ಟೈಲ್‌ನಲ್ಲೇ ಉಪ್ಪಿ ಅಣ್ಣನ ಮಗ ನಿರಂಜನ್ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ. "ನಿರಂಜನ್ ಬಗ್ಗೆ ಹೇಳುವುದಾದರೆ ಅವನು ಚಿಕ್ಕ ವಯಸ್ಸಿನಲ್ಲೇ ನಟ. ನಾನು ನಟಿಸಿದ 'A' ಚಿತ್ರದಲ್ಲಿ ಚಿಕ್ಕ ಮಗು ಮಲಗಿರುವ ಒಂದು ದೃಶ್ಯವಿದೆ. ಆ ಮಗುನೇ ನಮ್ಮ ನಿರಂಜನ್. ಇಲ್ಲಿಂದ ಇವನಿಗೆ ಸಿನಿಮಾದಲ್ಲಿ ಆಸಕ್ತಿ. ನಾಟಕ, ಸಿನಿಮಾ ಇದರ ಮೇಲೆ ಅವನ ಆಸಕ್ತಿ ಬೆಳೆದಿದೆ. ನಟನಾಗಲು ಅಷ್ಟೇ ಶ್ರಮ ಪಡುತ್ತಿದ್ದಾನೆ." ಎಂದು 'A' ಸಿನಿಮಾದ ನೆನಪು ಮೆಲುಕು ಹಾಕಿದ್ದಾರೆ ಉಪೇಂದ್ರ.

Upendra Brother Sudheendra Son Niranjan Starrer Hunter First Look Released

'ಪರಿ' ಹಾಗೂ 'ಸೀಜರ್' ಸಿನಿಮಾದ ಬಳಿಕ 'ಹಂಟರ್' ಚಿತ್ರವನ್ನು ತ್ರಿವಿಕ್ರಮ್ ನಿರ್ಮಿಸಿದ್ದಾರೆ. 'ಸೀಜರ್' ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಂಟರ್ ನಿರ್ದೇಶಕರಿಗೆ ಎರಡನೇ ಚಿತ್ರ. 'ಹಂಟರ್' ಚಿತ್ರ ಎಲ್ಲರಿಗೂ ಹಿಡಿಸಲಿದೆ. ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡುತ್ತದೆ. ಕಳೆದ ಆರು ತಿಂಗಳಿಂದ ಈ ಚಿತ್ರಕ್ಕಾಗಿ ನಿರಂಜನ್ ಸಾಕಷ್ಟು ತಯಾರಿ ನಡೆಸಿದ್ದಾರೆ. ಕೇರಳದ ಸೌಮ್ಯಾ ಮೆನನ್ ಈ ಚಿತ್ರದ ನಾಯಕಿ." ಎಂದು ವಿನಯ್ ಕೃಷ್ಣ ಮಾಹಿತಿ ನೀಡಿದ್ದಾರೆ.

ನಾನು ನಟಿಸಿದ ಯಾವುದೇ ಸಿನಿಮಾ ತೆರೆಕಂಡಿಲ್ಲ

'ಹಂಟರ್' ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ವೇಳೆ ನಿರಂಜನ್ ತಮ್ಮ ಸಿನಿಮಾ ಜರ್ನಿ ಮನಬಿಚ್ಚಿ ಮಾತಾಡಿದ್ದಾರೆ "ನಾನು ನಾಯಕನಾಗಿ ನಟಿಸಿರುವ ಯಾವುದೇ ಸಿನಿಮಾ ತೆರೆಕಂಡಿಲ್ಲ. ನಿರ್ದೇಶಕ ವಿನಯ್ ಕೃಷ್ಣ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಚಂದನ್ ಶೆಟ್ಟಿ ಸಂಗೀತ ನೀಡುತ್ತಿರುವುದರಿಂದ ಎಲ್ಲಾ ಹಾಡುಗಳು ಚಂದವಾಗಿರುತ್ತೆ. ನಾಯಕಿ ಸೌಮ್ಯಾಗೆ ಈ ಸಿನಿಮಾ ಮುಗಿಯುವಷ್ಟರಲ್ಲಿ ಕನ್ನಡ ಕಲಿಸುತ್ತೇನೆ. ಈ ಚಿತ್ರದಲ್ಲಿ ನಾನು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. " ಎನ್ನುತ್ತಾರೆ ನಿರಂಜನ್ ಸುಧೀಂದ್ರ.

Upendra Brother Sudheendra Son Niranjan Starrer Hunter First Look Released

'ಹಂಟರ್' ಸಿನಿಮಾದಲ್ಲಿ ದೊಡ್ಡ ದೊಡ್ಡ ಕಲಾವಿದರೇ ಇದ್ದಾರೆ. ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಲೋಕಿಲ ನಟಿಸುತ್ತಿದ್ದಾರೆ. ಮಹೇಶ್ ಕ್ಯಾಮರಾ ಹಿಡಿದಿದ್ದರೆ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಈ ಚಿತ್ರವನ್ನು ಎಡಿಟ್ ಮಾಡುತ್ತಿದ್ದಾರೆ. ಜಯಂತ ಕಾಯ್ಕಿಣಿ, ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಚಂದನ್ ಶೆಟ್ಟಿ ಒಂದೊಂದು ಹಾಡನ್ನು ಬರೆದಿದ್ದಾರೆ.

More from Filmibeat

English summary
Upendra brother Sudheendra Son Niranjan starrer Hunter first look released. Upendra and Priyanka released the first look teaser of Hunter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X