UI Box Office Day 1:ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಉಪ್ಪಿ 'ಯುಐ' ಸಿನಿಮಾ ಗಳಿಸಿದ್ದೆಷ್ಟು? ಹೊಸ ದಾಖಲೆ ಎನಾದ್ರೂ ಮಾಡುತ್ತಾ?

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚು. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾವನ್ನು ಸಿನಿಮಪ್ರಿಯರು ಮುಗಿಬಿದ್ದು ನೋಡಿದ್ದಾರೆ. ಹಾಗೇ ಉಪೇಂದ್ರ ಕೂಡ ನಿರ್ದೇಶನದ ವಿಚಾರದಲ್ಲಿ ಇದೂವರೆಗೂ ಸಿನಿಪ್ರಿಯರಿಗೆ ಮೋಸ ಮಾಡಿಲ್ಲ. ಈಗ ಅವರ ನಿರ್ದೇಶನ ಮತ್ತೊಂದು ಸಿನಿಮಾ 'ಯುಐ' ರಿಲೀಸ್ ಆಗಿದೆ.

'ಯುಐ' ಮೇಲೆ ಕನ್ನಡ ಚಿತ್ರರಂಗ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ, ಮೊದಲ ದಿನವೇ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಉಪ್ಪಿ ಬರೀ ಹುಳ ಬಿಟ್ಟಿದ್ದಾರೆ ಅನ್ನೋ ಅಭಿಪ್ರಾಯ ಕೂಡ ಕೇಳಿ ಬರುತ್ತಿದೆ. ಈ ವಾರ ಮುಗಿಯುವುದರೊಳಗೆ ಸಿನಿಮಾ ಬಗ್ಗೆ ಅಸಲಿ ರಿಪೋರ್ಟ್ ಸಿಗಬಹುದು.

Upendra directed movie UI day 1 Karnataka box office Collection Report

ಉಪ್ಪಿಯ 'ಯುಐ' ಸಿನಿಮಾಗೆ ಅಡ್ವಾನ್ಸ್ ಬುಕಿಂಗ್‌ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಮೊದಲ ದಿನದ ಕಲೆಕ್ಷನ್ ಅನ್ನು 8 ರಿಂದ 10 ಕೋಟಿ ರೂ. ಆಗಬಹುದೆಂದು ಇಂಡಸ್ಟ್ರಿ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದರು. ಕೊನೆಗೂ 'ಯುಐ' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್‌ ಹೊರಬಿದ್ದಿದೆ. ಇಂಡಸ್ಟ್ರಿ ಟ್ರ್ಯಾಕರ್ sacnilk.com ಮೊದಲ ದಿನದ ಅಂದಾಜು ಮೊತ್ತ ಎಷ್ಟು ಅನ್ನೋದನ್ನು ರಿವೀಲ್ ಮಾಡಿದೆ. ಹಾಗೇ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ರಿವೀಲ್ ಮಾಡಿದೆ.

'ಯುಐ' ಮೊದಲ ದಿನದ ಗಳಿಕೆ ಎಷ್ಟು?

ಉಪೇಂದ್ರ ಸಿನಿಮಾಗೂ ಮುನ್ನ ಏನನ್ನೂ ಬಿಟ್ಟು ಕೊಡುವುದಿಲ್ಲ. ಈ ಬಾರಿ ಚಿಕ್ಕದೊಂದು ತುಣುಕು ಹಾಗು ಹಾಡುಗಳನ್ನು ರಿಲೀಸ್ ಮಾಡಿ ಕುತೂಹಲ ಕೆರಳಿಸಿದ್ದರು. ಎಂದಿನಂತೆ ಈ ಬಾರಿ ಕೂಡ ಸಿನಿಮಾ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತೆ ಅಂತಲೇ ಭಾವಿಸಲಾಗಿತ್ತು. ನಿರೀಕ್ಷೆಯಂತೆ 'ಯುಐ' ರಿಲೀಸ್ ಆದರೂ, ಸಿನಿಮಾ ಮಿಶ್ರ ಪತ್ರಿಕ್ರಿಯೆ ಸಿಕ್ಕಿದೆ. sacnilk.com ಪ್ರಕಾರ, 'ಯುಐ' ಮೊದಲ ದಿನ 6.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಫಸ್ಟ್ ರಿಪೋರ್ಟ್ ಆಗಿದ್ದರಿಂದ ಮಧ್ಯಾಹ್ನದ ವೇಳೆಗೆ 7 ರಿಂದ 7.5 ಕೋಟಿ ರೂ. ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.

ಬೇರೆ ಭಾಷೆಯಲ್ಲಿ ಹೇಗಿದೆ ಕಲೆಕ್ಷನ್?

ಉಪೇಂದ್ರ ಇಲ್ಲಿವರೆಗೂ ನಿರ್ದೇಶಿಸಿದ ಸಿನಿಮಾಗಳು ಕೇವಲ ಕರ್ನಾಟಕದಲ್ಲಷ್ಟೇ ರಿಲೀಸ್ ಆಗುತ್ತಿತ್ತು. ಆದರೆ 'ಯುಐ' ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ರಿಲೀಸ್ ಆಗಿದೆ. ಬೇರೆ ಭಾಷೆಗಳಲ್ಲಿ ಈ ಸಿನಿಮಾಗೆ ಸಾಧಾರಣ ಓಪನಿಂಗ್ ಸಿಕ್ಕಿದೆ. ತೆಲುಗಿನಲ್ಲಿ 70ಲಕ್ಷ ರೂಪಾಯಿ, ತಮಿಳಿನಲ್ಲಿ 4 ಲಕ್ಷ ರೂ. ಹಾಗೂ ಹಿಂದಿಯಲ್ಲಿ 1 ಲಕ್ಷ ರೂ. ಎಂದು sacnilk.com ರಿಪೋರ್ಟ್‌ನಲ್ಲಿ ಹೇಳಿದೆ.

ಮಿಶ್ರ ಪ್ರತಿಕ್ರಿಯೆ ಎಫೆಕ್ಟ್ ಆಗುತ್ತಾ?

ರಿಯಲ್‌ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾಗಳಿಗೆ ಟೀಕೆಗಳು ಬರೋದು ಹೊಸದೇನು ಅಲ್ಲ. ಇದು ಅವರು ನಿರ್ದೇಶಿಸಿದ ಮೊದಲ ಸಿನಿಮಾದಿಂದಲೂ ಇದೆ. ಅಷ್ಟೇ ಯಾಕೆ ಹೀರೋ ಆಗಿ ನಟಿಸಿದ್ದ 'ಎ', 'ಉಪೇಂದ್ರ' ಅಂತಹ ಸಿನಿಮಾಗಳಿಗೂ ಟೀಕೆ ವ್ಯಕ್ತವಾಗಿದ್ದವು. ಆದರೆ. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಇಂದಿಗೆ ಆ ಸಿನಿಮಾ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. 'ಯುಐ' ಕೂಡ ಹಾಗೇ ಆಗಬಹುದೆಂಬ ನಿರೀಕ್ಷೆಯಿತ್ತು.

ವೀಕೆಂಡ್ ಮೇಲೆ ಕಣ್ಣು

ಯಾರು ಏನೇ ಅಂದರೂ ಉಪೇಂದ್ರ ನಿರ್ದೇಶನದ ಸಿನಿಮಾ ಒಂದು ರೇಂಜ್‌ಗೆ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ. ಶನಿವಾರ ಹಾಗೂ ಭಾನುವಾರ ಹೆಚ್ಚು ಕಲೆಕ್ಷನ್ ಮಾಡಬಹುದು. ಯುವಕರನ್ನು ಹೆಚ್ಚಾಗಿ ಈ ಸಿನಿಮಾ ಸೆಳೆಯಬಹುದೆಂದು ನಿರೀಕ್ಷೆ ಮಾಡಲಾಗಿದೆ. ಒಂದು ವೇಳೆ ವೀಕೆಂಡ್‌ನಲ್ಲಿ ಸೂಪರ್ ಕಲೆಕ್ಷನ್ ಆದರೆ, 20 ರಿಂದ 25 ಕೋಟಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿದೆ.

Disclaimer: ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಸಿನಿಮಾ ತಂಡ ಅಧಿಕೃತವಾಗಿ ಇನ್ನೂ ಅನೌನ್ಸ್ ಮಾಡಿಲ್ಲ.

More from Filmibeat

English summary
Upendra directed movie UI day 1 Karnataka box office Collection Report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X