UI Box office Day 4: ಸೋಮವಾರದ ಪರೀಕ್ಷೆಯಲ್ಲಿ 'ಯುಐ' ರಿಸಲ್ಟ್ ಏನು? ಪಾಸಾ-ಫೇಲಾ?
ರಿಯಲ್ ಸ್ಟಾರ್ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ಅನ್ನೋ ಚಿಕ್ಕದೊಂದು ಸುಳಿವು ಸಿಕ್ಕರೂ ಸಾಕು ಸಿನಿಮಾ ಮಂದಿ ಅಲರ್ಟ್ ಆಗಿಬಿಡ್ತಾರೆ. ಇನ್ನು ಅವರ ಅಭಿಮಾನಿಗಳನ್ನು ಕೇಳಬೇಕಾ? ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳು ಆ ಮಟ್ಟಿಗೆ ಸದ್ದು ಮಾಡಿವೆ. ಹಾಗೇ 'ಯುಐ' ಕೂಡ ಇರುತ್ತೆ ಅಂತ ಥಿಯೇಟರ್‌ಗೆ ಹೋದವರಲ್ಲಿ ಕೆಲವರಿಗೆ ಕೊಂಚ ಮಟ್ಟಿಗೆ ನಿರಾಸೆ ಆಗಿದ್ದು ನಿಜ.
ಸಾಮಾನ್ಯ ಯಾವುದೇ ಸಿನಿಮಾ ನೋಡಿದರೂ ಸೂಪರ್, 100 ಡೇಸ್ ಅಂತ ಹೇಳಿಕೊಂಡು ಬರುತ್ತಿದ್ದ ಪ್ರೇಕ್ಷಕರು ತಲೆ ಕೆಡಿಸಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿಗೆ ಥಿಯೇಟರ್‌ನಿಂದ ಹೊರಬಂದು ಕೆಲವರು ಸಿನಿಮಾ ಅರ್ಥ ಆಗಿಲ್ಲ, ಫೋಕಸ್ ಸಿಕ್ಕಿಲ್ಲ, ಅಂತ ಹೇಳಿಕೊಂಡು ಹೊರಬಂದಿದ್ದರು. ಹೀಗಾಗಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಅಂತ ನಿರ್ಧರಿಸಿದ್ದರು.

ಆದರೆ, ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ರೆಸ್ಪಾನ್ಸ್ ಬೇರೆಯದ್ದೇ ಇತ್ತು. ಮೊದಲ ಮೂರು ದಿನಗಳ ಸರಾಸರಿ ಬಾಕ್ಸಾಫೀಸ್ 6 ಕೋಟಿ ರೂಪಾಯಿ ಇತ್ತು. ಇದು ಸ್ಯಾಂಡಲ್‌ವುಡ್ ಮಟ್ಟಿಗೆ ಒಳ್ಳೆಯ ಕಲೆಕ್ಷನ್ ಅಂತ ಟ್ರೇಡ್ ಎಕ್ಸ್‌ಪರ್ಟ್‌ಗಳೇ ಸರ್ಟಿಫಿಕೇಟ್ ಕೊಟ್ಟು ಬಿಟ್ಟಿದ್ದಾರೆ. ಆದರೆ, ಅಸಲಿ ಪರೀಕ್ಷೆ ಅಂಥ ಇದ್ದಿದ್ದು ನಾಲ್ಕನೇ ದಿನ. ಯಾಕಂದ್ರೆ ಸೋಮವಾರದ ಪರೀಕ್ಷೆಯಲ್ಲಿ ಸಿನಿಮಾ ಗೆದ್ದರೇ ಇನ್ನೊಂದು ವಾರ ತಲೆ ಭರ್ಜರಿ ಕಲೆಕ್ಷನ್ ಆಗುತ್ತೆ ಅಂತ ಲೆಕ್ಕ ಹಾಕಬಹುದು.
ಮೊದಲ ಸೋಮವಾರ 'ಯುಐ' ಗಳಿಸಿದ್ದೆಷ್ಟು?
ರಿಯಲ್ ಸ್ಟಾರ್ ಸಿನಿಮಾ ಪ್ರೇಕ್ಷಕರಿಗೆ ಮೊದಲ ದಿನವೇ ಕಿಕ್ ಕೊಟ್ಟಿದ್ದರೆ, ಸೋಮವಾರ ಲೆಕ್ಕಕ್ಕೆ ಇರುತ್ತಿರಲಿಲ್ಲ. ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆಸ ವ್ಯಕ್ತವಾಗಿದ್ದರಿಂದ ಮೊದಲ ಸೋಮವಾರದ ಮೇಲೆ ಎಲ್ಲರ ಕಣ್ಣು ಇತ್ತು. ನಿರೀಕ್ಷೆಯಂತೆ ನಾಲ್ಕನೇ ದಿನ ಕಲೆಕ್ಷನ್ ಡ್ರಾಪ್ ಆಗಿದೆ. ಶೇ.50ರಷ್ಟು ಕಲೆಕ್ಷನ್ ಡ್ರಾಪ್ ಆಗಿದೆ ಎಂದು sacnilk.com ವರದಿ ಮಾಡಿದೆ. ಅಂದರೆ, 4ನೇ ದಿನ ಈ ಸಿನಿಮಾ 2.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ.
ಮೊದಲ ನಾಲ್ಕು ದಿನಗಳ ಕಲೆಕ್ಷನ್ ಏನು?
'ಯುಐ' ಮೊದಲ ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಆಗಿತ್ತು. ಆದರೆ, ನಾಲ್ಕನೇ ದಿನ ಕಲೆಕ್ಷನ್ ಡ್ರಾಪ್ ಆಗಿದ್ದರಿಂದ ಕಲೆಕ್ಷನ್ ನಿರೀಕ್ಷೆ ಮಾಡಿದಷ್ಟು ರೀಚ್ ಆಗಲಿಲ್ಲ. ಇದು ಎಲ್ಲಾ ಸೂಪರ್‌ಸ್ಟಾರ್ ಸಿನಿಮಾ ಆಗುತ್ತೆ. ಈ ಹೀಗಾಗಿ ಸೋಮವಾರದ ಕಲೆಕ್ಷನ್‌ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ತೃಪ್ತಿ ಕೊಟ್ಟಿದೆ. sacnilk ವರದಿ ಪ್ರಕಾರ ನಾಲ್ಕು ದಿನಗಳ ಕಲೆಕ್ಷನ್ ಹೀಗಿದೆ.
ನಾಲ್ಕು ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ 6.95 ಕೋಟಿ ರೂ.
ಎರಡನೇ ದಿನ 5.60 ಕೋಟಿ ರೂ.
ಮೂರನೇ ದಿನ 5.95 ಕೋಟಿ ರೂ.
ನಾಲ್ಕುನೇ ದಿನ 2.35 ಕೋಟಿ ರೂ.
ಒಟ್ಟು 20.85 ಕೋಟಿ ರೂ.
ಇಯರ್ ಎಂಡ್ ಲಾಭ ಸಿಗುತ್ತಾ?
'ಯುಐ'ಗೆ ಇಯರ್ ಎಂಡ್ ಲಾಭ ಪಡೆದುಕೊಳ್ಳುವ ಅವಕಾಶವಿತ್ತು. ಜನರು ಜಾಲಿ ಮೂಡ್‌ನಲ್ಲಿ ಇದ್ದು, ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ನುಗ್ಗುತ್ತಿದ್ದರು. ಎ, ಉಪೇಂದ್ರ ರೀತಿ ಬಿಡುಗಡೆ ಬಳಿಕ 'ಯುಐ' ಸಿನಿಮಾನೂ ಕ್ರೇಜ್ ಹುಟ್ಟಾಕಿದ್ದರೆ, ಸಂಪೂರ್ಣವಾಗಿ ಲಾಭವನ್ನು ಪಡೆಯಬಹುದಿತ್ತು. ಕ್ರಿಸ್‌ಮಸ್, ಇಯರ್ ಎಂಡ್ ಲಾಭ ಪಡೆದುಕೊಳ್ಳುವುದಕ್ಕೆ ಇನ್ನೂ ಅವಕಾಶವಿದೆ. ಇದೇ ರೀತಿ ಇನ್ನೊಂದು ವಾರ ಕಲೆಕ್ಷನ್ ಆದರೆ, ನಿರ್ಮಾಪಕರು ಲಾಭದಲ್ಲಿ ಇರುತ್ತಾರೆ.
'ಮ್ಯಾಕ್ಸ್' ಎಫೆಕ್ಟ್ ಆಗುತ್ತಾ?
ಕ್ರಿಸ್‌ಮಸ್‌ಗೆ 'ಮ್ಯಾಕ್ಸ್' ರಿಲೀಸ್ ಆಗುತ್ತಿರೋದು ಖಂಡಿತವಾಗಿಯೂ 'ಯುಐ' ಎಫೆಕ್ಟ್ ಆಗಬಹುದು. ಒಂದು ವೇಳೆ 'ಮ್ಯಾಕ್ಸ್' ಪ್ರೇಕ್ಷಕರಿಗೆ ಇಷ್ಟ ಆದರೆ, ಎಲ್ಲರ ಗಮನ ಆ ಕಡೆಗೆ ಹೋಗಬಹುದು. ಇದು 'ಯುಐ'ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಏನಕ್ಕೂ ಡಿಸೆಂಬರ್ 25ಕ್ಕೆ ಇದೆಲ್ಲದಕ್ಕೂ ಒಂದು ಕ್ಲಾರಿಟಿ ಅಂತೂ ಸಿಗಲಿದೆ. ಸದ್ಯ 'ಯುಐ' 25 ಕೋಟಿ ಕ್ಲಬ್ ಸೇರುವ ಸನಿಹದಲ್ಲಿ ಇದೆ. ಈ ವಾರದ ಕೊನೆಯಲ್ಲಿ ಆರಾಮಾಗಿ 25 ಕೋಟಿ ರೂ. ಕಲೆಕ್ಷನ್ ಮಾಡುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











