UI Box office Day 5: 5ನೇ ದಿನ ಉಪೇಂದ್ರ 'ಯುಐ'ಗೆ ರೆಸ್ಪಾನ್ಸ್ ಹೇಗಿತ್ತು? 25 ಕೋಟಿ ಕ್ಲಬ್ ಸೇರಿತೇ?

ಈ ವರ್ಷ ಕೊನೆಯಲ್ಲಿ ರಿಯಲ್‌ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾ 'ಯುಐ' ರಿಲೀಸ್ ಆಗಿದೆ. ಕಳೆದ ಒಂದೂವರೆ ವರ್ಷದಿಂದ ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ತೀವ್ರ ನಷ್ಟದಲ್ಲಿದ್ದ ಸ್ಯಾಂಡಲ್‌ವುಡ್‌ಗೆ ಈ ವರ್ಷದ ಕೊನೆಯಲ್ಲಿ ಕೆಲವು ಹಿಟ್ ಸಿನಿಮಾಗಳು ಸಿಕ್ಕಿದ್ದವು. ಹಾಗೇ ಕೊನೆಯ ತಿಂಗಳಲ್ಲಿ ನಿರೀಕ್ಷೆಯನ್ನು ಹುಟ್ಟಾಕಿದ್ದ ಚಿತ್ರಗಳು ಬಿಡುಗಡೆಯಾಗಿದ್ದವು. ಅದರಲ್ಲಿ 'ಯುಐ' ಕೂಡ ಒಂದು.

2024ರ ಕೊನೆಯಲ್ಲಿ 'ಯುಐ' ರಿಲೀಸ್ ಆಗುತ್ತಿದೆ ಅನ್ನೋದು ಒಂದು ವಿಷಯವಾಗಿದ್ದರೆ, ಇನ್ನೊಂದು ಕಡೆ ಉಪೇಂದ್ರ ಆಕ್ಷನ್ ಕಟ್‌ ಹೇಳಿದ್ದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿತ್ತು. ಇದೇ ಡಿಸೆಂಬರ್ 20ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ 'ಯುಐ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ.

Upendra directed UI film day 5 Karnataka box office Collection Report finds drop

'ಯುಐ' ಈ ವಾರದ ಆರಂಭದಿಂದ ಕಲೆಕ್ಷನ್‌ನಲ್ಲಿ ಹಿನ್ನಡೆ ಕಂಡಿದೆ. ಇಂಡಸ್ಟ್ರಿ ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಡಾಟ್ ಕಾಮ್ ಪ್ರಕಾರ 'ಯುಐ' ಐದನೇ ದಿನದಲ್ಲಿ ಶೇ.60ರಷ್ಟು ಇಳಿಕೆ ಕಂಡಿದೆ. ಇನ್ನು ಕರ್ನಾಟಕದ ವಿತರಕರ ಲೆಕ್ಕಾಚಾರ ಕೂಡ ಇದರಿಂದ ಹೊರತಾಗಿ ಏನೂ ಇಲ್ಲ. ಹಾಗಿದ್ದರೆ, ಐದನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? 25 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೆಷ್ಟು ಬೇಕು?

5ನೇ ಸಿನಿಮಾ 'ಯುಐ' ಕಲೆಕ್ಷನ್

ರಿಯಲ್ ಸ್ಟಾರ್ ಉಪ್ಪಿ ನಿರ್ದೇಶಿಸುವ ಚಿತ್ರಗಳು ರೆಗ್ಯೂಲರ್ ಸಿನಿಮಾಗಳಿಗಿಂತ ಭಿನ್ನವಾಗಿ ಇರುತ್ತವೆ. ಹಾಗೇ ಲವ್ ಸ್ಟೋರಿ, ಆಕ್ಷನ್, ಸೆಂಟಿಮೆಂಟ್ ಅನ್ನುವಂತಹ ಸಿನಿಮಾಗಳ ಸಾಲಿಗೆ 'ಯುಐ' ಸೇರಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಉಪ್ಪಿ ಆಕ್ಷನ್ ಕಟ್ ಹೇಳುವ ಸಿನಿಮಾಗಳಿಗೆ ಅವರದ್ದೇ ಫ್ಯಾನ್ ಫಾಲೋವಿಂಗ್ ಇದೆ. 5ನೇ ದಿನ ಅಂದರೆ ಮಂಗಳವಾರ (ಡಿಸೆಂಬರ್ 24) 'ಯುಐ' ಸಿನಿಮಾದಲ್ಲಿ ಡ್ರಾಪ್ ಕಂಡಿದೆ. ಐದನೇ ದಿನವೇ 2.30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬ ಲೆಕ್ಕ ವಿತರಕರ ವಲಯದಲ್ಲಿ ಓಡಾಡುತ್ತಿದೆ.

Upendra directed UI film day 5 Karnataka box office Collection Report finds drop

ಒಟ್ಟು ಐದು ದಿನಗಳಲ್ಲಿ ಗಳಿಸಿದ್ದಿಷ್ಟು?

ಐದು ದಿನಗಳಲ್ಲಿ ಮೊದಲ ಮೂರು ದಿನಗಳು ಸರಾಸರಿ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ನಾಲ್ಕನೇ ದಿನದಿಂದ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿತ್ತು. ಈ ಡ್ರಾಪ್ ಎಲ್ಲಾ ಸೂಪರ್‌ಸ್ಟಾರ್‌ ಸಿನಿಮಾಗಳಿಗೂ ಆಗುವುದರಿಂದ ಚಿತ್ರತಂಡ ಹೆಚ್ಚೇನು ತಲೆ ಕೆಡಿಸಿಕೊಂಡಿಲ್ಲ. ಈ ಐದು ದಿನಗಳ ಬಾಕ್ಸ್‌ ಆಫೀಸ್ ಕಲೆಕ್ಷನ್ ಹೀಗಿದೆ.

ಐದು ದಿನಗಳ ಕಲೆಕ್ಷನ್ ಹೀಗಿದೆ.

ಮೊದಲ ದಿನ 6.95 ಕೋಟಿ ರೂ
​ಎರಡನೇ ದಿನ 5.60 ಕೋಟಿ ರೂ.
ಮೂರನೇ ದಿನ 5.95 ಕೋಟಿ ರೂ.
​ನಾಲ್ಕುನೇ ದಿನ 2.30 ಕೋಟಿ ರೂ.
​ಐದನೇ ದಿನ 2.15 ಕೋಟಿ ರೂ.
ಒಟ್ಟು 22.95 ಕೋಟಿ ರೂ.

ಕ್ರಿಸ್‌ಮಸ್‌ಗೆ 25 ಕೋಟಿ ಕ್ಲಬ್

ಉಪೇಂದ್ರ ಸಿನಿಮಾ 'ಯುಐ' ಆರನೇ ದಿನಕ್ಕೆ 25 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ. ಇಂದು (ಡಿಸೆಂಬರ್ 25) ಕ್ರಿಸ್‌ಮಸ್ ಆಗಿರುವುದರಿಂದ ರಜೆಯ ದಿನದಂದು ಬಾಕ್ಸಾಫೀಸ್‌ನಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಒಂದು ವೇಳೆ ಎರಡು ಕೋಟಿಯನ್ನು ಮೀರಿದರೆ, ಆರೇ ದಿನ 25 ಕೋಟಿ ರೂ. ಕ್ಲಬ್ ಸೇರುವುದು ಪಕ್ಕಾ.

ಲೈಫ್‌ ಟೈಮ್ ಲೆಕ್ಕಾಚಾರ ಎಷ್ಟು?

'ಯುಐ' ಸಿನಿಮಾ ಲೈಫ್ ಟೈಮ್ ಕಲೆಕ್ಷನ್ ಕುತೂಹಲ ಹುಟ್ಟಿಸಿದೆ. ಒಂದು ವೇಳೆ ಇಯರ್ ಎಂಡ್ ಹಾಗೂ ನ್ಯೂ ಇಯರ್ ವರ್ಕ್‌ಔಟ್ ಆದರೆ, ಇನ್ನೊಂದು ಹತ್ತು ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದು. ಲೈಫ್ ಟೈಮ್ ಕಲೆಕ್ಷನ್ 35 ಕೋಟಿ ರೂಪಾಯಿಯಿಂದ 40 ಕೋಟಿ ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಸಂಕ್ರಾಂತಿ ವರೆಗೂ ಉತ್ತಮ ರೆಸ್ಪಾನ್ಸ್ ಸಿಕ್ಕರೆ 50 ಕೋಟಿ ಕ್ಲಬ್ ಸೇರಬಹುದೆಂಬ ಮಾತು ಕೇಳಿ ಬರುತ್ತಿದೆ.

Disclaimer: ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ವರದಿ ಮಾಡಲಾಗಿದೆ. 'ಯುಐ' ಚಿತ್ರತಂಡ ಇನ್ನೂ ತಮ್ಮ ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ ಬಗ್ಗೆ ಇನ್ನೂ ಮಾಹಿತಿ ನೀಡಬೇಕಿದೆ.

More from Filmibeat

English summary
Upendra directed UI film day 5 Karnataka box office Collection Report finds drop;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X