UI Box office Day 6: 'ಮ್ಯಾಕ್ಸ್' ರಿಲೀಸ್ ಬಳಿಕ 'ಯುಐ' ಕಲೆಕ್ಷನ್ ಹೇಗಿದೆ? 6ನೇ ದಿನದ ಬಾಕ್ಸಾಫೀಸ್ ಲೆಕ್ಕವೇನು?
ವರ್ಷದ ಕೊನೆಯಲ್ಲಿ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಪೈಪೋಟಿಗೆ ಇಳಿದಿದ್ದು ಹೊಸ ವಿಷಯವೇನಲ್ಲ. ಆದರೆ, ಕೇವಲ ಐದು ದಿನಗಳ ಅಂತರದಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾಗಳು ರಿಲೀಸ್ ಆಗಿದ್ದು ಗಳಿಕೆ ಮೇಲೆ ಎಫೆಕ್ಟ್ ಆಯ್ತಾ? ಆತಂಕ ಏನಿತ್ತೋ ಅದೇ ನಡೆದು ಹೋಯ್ತಾ? ಈ ಎರಡು ಪ್ರಶ್ನೆಗಳಿಗೆ ನಿನ್ನೆ ( ಡಿಸೆಂಬರ್ 25) ಉತ್ತರ ಸಿಕ್ಕಿದೆ.
ಉಪ್ಪಿಯ 'ಯುಐ' ಹಾಗೂ ಕಿಚ್ಚನ 'ಮ್ಯಾಕ್ಸ್' ಈ ಎರಡು ಸಿನಿಮಾಗಳು ಐದು ದಿನಗಳ ಅಂತರದಲ್ಲಿ ರಿಲೀಸ್ ಆಗುತ್ತೆ ಅಂದಾಗ ಸ್ಯಾಂಡಲ್‌ವುಡ್ ಮಂದಿಯಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕೆಲವರು 'ಯುಐ' ಗಳಿಕೆ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಪೆಟ್ಟು ಬೀಳುತ್ತೆ ಅಂತ ವಾದಿಸಿದ್ದರು. ಇನ್ನು ಕೆಲವರು ಎರಡೂ ಸಿನಿಮಾಗಳನ್ನು ಜನರು ನೋಡುತ್ತಾರೆ ಅಂದಿದ್ದರು.

ಈ ವಿಭಿನ್ನ ಅಭಿಪ್ರಾಯಗಳಿಗೆ 'ಯುಐ' ರಿಲೀಸ್ ಆದ ಆರನೇ ದಿನಕ್ಕೆ ಉತ್ತರ ಸಿಕ್ಕಿದೆ. ಡಿಸೆಂಬರ್ 25 ವಾರದ ಮಧ್ಯದಲ್ಲಿ ಬಂದಿರುವ ಈ ರಜೆ ಉಪ್ಪಿಯ 'ಯುಐ'ಗೆ ವರದಾನವಾಯ್ತಾ? ಇಲ್ಲಿ ಪ್ರೇಕ್ಷಕರು ಸಂಪೂರ್ಣವಾಗಿ ಕಿಚ್ಚನ 'ಮ್ಯಾಕ್ಸ್' ಕಡೆಗೆ ವಾಲಿದರಾ? 6ನೇ ದಿನ ಉಪೇಂದ್ರ ಸಿನಿಮಾ 'ಯುಐ' ಗಳಿಸಿದ್ದು ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.
6ನೇ ದಿನ 'ಯುಐ' ಕಲೆಕ್ಷನ್ ಹೇಗಿದೆ?
ಉಪೇಂದ್ರ 9 ವರ್ಷಗಳ ಬಳಿಕ ನಿರ್ದೇಶಿಸಿದ ಮೂವಿ 'ಯುಐ' ತೆರೆಕಂಡು ಏಳನೇ ದಿನಕ್ಕೆ ಕಾಲಿಟ್ಟಿದೆ. 6ನೇ ದಿನವಾದ ನಿನ್ನೆ (ಡಿಸೆಂಬರ್ 25) ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. ಕ್ರಿಸ್‌ಮಸ್ ರಜೆ ಇದ್ದಿದ್ದರಿಂದ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಡಾಟ್ ಕಾಮ್ ಪ್ರಕಾರ ಉಪ್ಪಿ ಸಿನಿಮಾ ಆರನೇ ದಿನಕ್ಕೆ 2.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕ್ರಿಸ್‌ಮಸ್ ರಜೆ 'ಯುಐ'ಗೆ ತಕ್ಕಮಟ್ಟಿಗೆ ಅನುಕೂಲ ಆಗಿದೆ.
'ಮ್ಯಾಕ್ಸ್' ರಿಲೀಸ್ ಎಫೆಕ್ಟ್ ಏನು?
'ಯುಐ' ರಿಲೀಸ್ ಆದ ಐದು ದಿನಗಳ ಹಿಂದೇನೆ 'ಮ್ಯಾಕ್ಸ್' ರಿಲೀಸ್ ಆಗಿದ್ದು ಎಫೆಕ್ಟ್ ಮಾಡಿದೆ. ಎರಡೂ ಸಿನಿಮಾಗಳಿಗೂ ಒಂದೆರಡು ಕೋಟಿ ಅಂತೂ ನಷ್ಟ ಆಗಿದೆ. 'ಯುಐ' ನೋಡಬೇಕು ಅಂತಿದ್ದವರು 'ಮ್ಯಾಕ್ಸ್' ಕಡೆಗೆ ಹೊರಳಿದ್ದಾರೆ. ಇಲ್ಲದೇ ಹೋಗಿದ್ದ 6ನೇ ದಿನ 3 ಕೋಟಿ ರೂ. ಮೇಲೆ ಕಲೆಕ್ಷನ್ ಆಗುತ್ತಿತ್ತು ಅನ್ನೋದು ಎಕ್ಸ್‌ಪರ್ಟ್‌ಗಳ ವಾದ. ಅದೇ ಮತ್ತೊಂದು ಕಡೆ 'ಮ್ಯಾಕ್ಸ್' ತಡವಾಗಿ ರಿಲೀಸ್ ಆಗಿದ್ದರೆ, ಸರಿಯಾದ ಥಿಯೇಟರ್‌ಗಳು ಸಿಗುತ್ತಿದ್ದವು. ಹೀಗಾಗಿ ಮೊದಲ ದಿನ ಕನಿಷ್ಠ ಅಂದರೂ ಒಂದೂವರೆ ಎರಡು ಕೋಟಿ ಕಮ್ಮಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

6 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಏನೇ ಅಡೆತಡೆಗಳಿದ್ದರೂ ಒಟ್ಟು ಆರು ದಿನಗಳ 'ಯುಐ' ಕಲೆಕ್ಷನ್ ಭರ್ಜರಿಯಾಗಿಯೇ ಇದೆ. ವಾರದ ಮಧ್ಯದಲ್ಲಿ ಈ ಸಿನಿಮಾ ಡಲ್ ಹೊಡೆಯುತ್ತೆ ಅಂತ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಮೂಡ್‌ನಲ್ಲಿ ಇರುವ ಜನರು ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಾರೆ. ಒಟ್ಟು ಆರು ದಿನಗಳ ಕಲೆಕ್ಷನ್ ಹೀಗಿದೆ.
ಆರು ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ 6.95 ಕೋಟಿ ರೂ.
ಎರಡನೇ ದಿನ 5.60 ಕೋಟಿ ರೂ.
ಮೂರನೇ ದಿನ 5.95 ಕೋಟಿ ರೂ.
ನಾಲ್ಕುನೇ ದಿನ 2.30 ಕೋಟಿ ರೂ.
ಐದನೇ ದಿನ 2.15 ಕೋಟಿ ರೂ.
ಆರನೇ ದಿನ 2.24 ಕೋಟಿ ರೂ.
ಒಟ್ಟು 25.19 ಕೋಟಿ ರೂ.
ವೀಕೆಂಡ್‌ನಲ್ಲಿ ಮೇಲೆ ನಿರೀಕ್ಷೆ?
'ಯುಐ' ವೀಕೆಂಡ್‌ನಲ್ಲೂ ಹೀಗೆ ಕಲೆಕ್ಷನ್ ಆದರೆ, ಇನ್ನೂ ಮೂರು ದಿನಗಳಲ್ಲಿ 10 ಕೋಟಿ ರೂಪಾಯಿ ಕಲೆ ಹಾಕಬಹುದು. ಈ ವಾರದ ಅಂತ್ಯದ ವೇಳೆ 33 ರಿಂದ 35 ಕೋಟಿ ರೂಪಾಯಿ ಕಲೆಕ್ಷನ್ ನಿರೀಕ್ಷೆ ಮಾಡಬಹುದು. ಎರಡನೇ ವಾರದಲ್ಲಿ ಸಹಜವಾಗಿ ಕಲೆಕ್ಷನ್ ಡ್ರಾಪ್ ಆಗುತ್ತೆ. ಒಟ್ಟು 40 ರಿಂದ 45 ಕೋಟಿ ರೂಪಾಯಿ ಒಟ್ಟು ಗಳಿಕೆ ಆಗಬಹುದು. ಎಂದು ಎಕ್ಸ್‌ಪೆಕ್ಟ್ ಮಾಡಲಾಗುತ್ತಿದೆ.
Disclaimer:ಈ ಸಿನಿಮಾದ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಯುಐ' ತಂಡ ಅಧಿಕೃತವಾಗಿ ಇನ್ನೂ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಅನೌನ್ಸ್ ಮಾಡಬೇಕಿದೆ.


Click it and Unblock the Notifications











