UI Box office Day 7: 'ಯುಐ' ರಿಲೀಸ್ ಆಗಿ ಏಳು ಆಗೋಯ್ತು; ವಾರದೊಳಗೆ ಬಜೆಟ್ ರಿಕವರಿ ಆಯ್ತಾ?

ರಿಯಲ್‌ಸ್ಟಾರ್ ಉಪೇಂದ್ರ 9 ವರ್ಷಗಳ ಬಳಿಕ ನಿರ್ದೇಶಿಸಿದ ಸಿನಿಮಾ 'ಯುಐ' ರಿಲೀಸ್ ಆಗಿ ಒಂದು ವಾರ ಆಗೋಗಿದೆ. ಉಪ್ಪಿ ಸಿನಿಮಾ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಅರ್ಥ ಆಗದೇ ಹೋದರೂ ಪದೇ ಪದೆ ನೋಡಲು ಇಷ್ಟ ಪಡುತ್ತಾರೆ. ಆ ಸಿನಿಮಾದಲ್ಲಿ ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳು ಕೂಡ ಹೀಗೆ ತಲೆಗೆ ಹುಳ ಬಿಟ್ಟಿದ್ದವು. ಈಗ 'ಯುಐ' ರಿಲೀಸ್ ಆಗಿದ್ದು, ಪ್ರೇಕ್ಷಕರಿಗೆ ಸಂದೇಶ ನೀಡುವುದಕ್ಕೆ ಮುಂದಾಗಿದ್ದರು. ಆದರೆ, ಮೊದಲ ದಿನವೇ ಸಿನಿಮಾ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ ಮೊದಲ ನಾಲ್ಕೈದು ದಿನ ಕಲೆಕ್ಷನ್ ಚೆನ್ನಾಗಿಯೇ ಇತ್ತು. ಆದರೆ, ಏಳನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ ಡ್ರಾಪ್ ಆಗಿದೆ.

Upendra-directed UI film Day 7 Karnataka box office collection report is affected by Sudeep Max

ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ರಿಲೀಸ್ ಆದ ಬಳಿಕ ಉಪ್ಪಿಯ 'ಯುಐ' ಕಲೆಕ್ಷನ್‌ಗೆ ಏಟು ಬಿದ್ದಿರುವುದು ನಿಜ. ಉಪೇಂದ್ರ ನಿರ್ದೇಶಿಸಿದ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದ ಪ್ರೇಕ್ಷಕರು ಈ ಬಾರಿ ಯಾಕೋ ಹಿಂದೇಟು ಹಾಕಿದಂತೆ ಇದೆ. ಬಹುಶ: ವೀಕೆಂಡ್‌ನಲ್ಲಿ ಮತ್ತೆ 'ಯುಐ' ಕಲೆಕ್ಷನ್‌ನಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ. ಸದ್ಯಕ್ಕೆ ಏಳನೇ ದಿನದ ಕಲೆಕ್ಷನ್ ಎಷ್ಟು? ಬಾಕ್ಸಾಫೀಸ್‌ನಲ್ಲಿ ಎಷ್ಟು ಡ್ರಾಪ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಯುಐ' 7ನೇ ದಿನದ ಕಲೆಕ್ಷನ್

'ಯುಐ' ಒಂದು ಸೈಕಾಲಜಿಕಲ್ ಸಿನಿಮಾ. ತಮ್ಮ ಸಿನಿಮಾ ಮೂಲಕ ಉಪ್ಪಿ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಅದರಂತೆ ಈ ಬಾರಿ ಅದ್ಯಾಕೋ ಪರಿಣಾಮಕಾರಿಯಾಗಿ ತಲುಪಿದಂತೆ ಕಾಣುತ್ತಿಲ್ಲ. ಅದೇನೇ ಇದ್ದರೂ ಏಳನೇ ಇದೆ. 'ಯುಐ' ಕಲೆಕ್ಷನ್ 1.10 ಕೋಟಿ ರೂಪಾಯಿ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಆರನೇ ದಿನಕ್ಕೆ ಹೋಲಿಕೆ ಮಾಡಿದರೆ, ಸಿನಿಮಾದ ಕಲೆಕ್ಷನ್ ಶೇ.50ರಷ್ಟು ಡ್ರಾಪ್ ಆಗಿದೆ.

Upendra-directed UI film Day 7 Karnataka box office collection report is affected by Sudeep Max

7 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಕ್ರಿಸ್‌ಮಸ್ ದಿನದಂದು 'ಯುಐ' ಕಲೆಕ್ಷನ್ ಏರಿಕೆಯಾಗಿತ್ತು. ಆದರೆ, ಮಾರನೇ ದಿನವೇ ಮತ್ತೆ ಡ್ರಾಪ್ ಆಗಿದೆ. ಸಹಜವಾಗಿ ನಾಲ್ಕೈದು ದಿನಗಳ ಬಳಿಕ ಕಲೆಕ್ಷನ್ ಡ್ರಾಪ್ ಆಗುತ್ತೆ. ಆದರೆ, ಏಳು ದಿನಗಳ ಬಳಿಕ ದಿಢೀರನೇ ಗಳಿಕೆ ಕಂಡು ಬಂದಿದೆ. ಇನ್ನು ವೀಕೆಂಡ್‌ನಲ್ಲಿ ಸಿನಿಮಾ ಮತ್ತೆ ಚೇತರಿಕೆ ಕಾಣಬಹುದು ಎನ್ನುವ ನಿರೀಕ್ಷೆಯಿದೆ. ಸದ್ಯ ಏಳು ದಿನಗಳ ಕಲೆಕ್ಷನ್ ಹೀಗಿದೆ.

ಏಳು ದಿನಗಳ ಕಲೆಕ್ಷನ್ ಹೀಗಿದೆ.

ಮೊದಲ ದಿನ - 6.95 ಕೋಟಿ ರೂ.
ಎರಡನೇ ದಿನ - 5.60 ಕೋಟಿ ರೂ.
ಮೂರನೇ ದಿನ - 5.95 ಕೋಟಿ ರೂ.
ನಾಲ್ಕುನೇ ದಿನ - 2.30 ಕೋಟಿ ರೂ.
ಐದನೇ ದಿನ - 2.15 ಕೋಟಿ ರೂ.
ಆರನೇ ದಿನ - 2.24 ಕೋಟಿ ರೂ.
ಏಳನೇ ದಿನ - 1.10 ಕೋಟಿ ರೂ.
ಒಟ್ಟು - 26.29 ಕೋಟಿ ರೂ.

ಯಾವ ಜಿಲ್ಲೆಯಲ್ಲಿ ಹೇಗಿದೆ ರೆಸ್ಪಾನ್ಸ್?

'ಯುಐ' ಸಿನಿಮಾಗೆ ಬೆಂಗಳೂರು ಬಿಟ್ಟು ಕೆಲವು ಜಿಲ್ಲೆಗಳಲ್ಲಿ ಇನ್ನೂ ಮಸ್ತ್ ರೆಸ್ಪಾನ್ಸ್ ಸಿಗುತ್ತಿದೆ. ಅದರಲ್ಲೂ ರಾಯಚೂರಿನಲ್ಲಿ ಶೇ.72.33ರಷ್ಟು ಥಿಯೇಟರ್‌ ಆಕ್ಯೂಪೆನ್ಸಿ ಇದ್ದರೆ, ತುಮಕೂರಿನಲ್ಲಿ ಶೇ.63ರಷ್ಟು ಚಿತ್ರಮಂದಿರ ತುಂಬಿದೆ. ಅದು ಬಿಟ್ಟರೆ ಕುಂದಾಪುರ ಹಾಗೂ ಕಲಬುರ್ಗಿಯಲ್ಲಿ ಸಾಧಾರಾಣ ಪ್ರತಿಕ್ರಿಯೆ ಇದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬರುವ ಸಂಖ್ಯೆ ಕಡಿಮೆಯಾಗಿದೆ.

ಲೈಫ್ ಟೈಮ್ ಕಲೆಕ್ಷನ್ ಎಷ್ಟು?

'ಯುಐ' ಸಿನಿಮಾ ಈಗಾಗಲೇ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವೀಕೆಂಡ್‌ನಲ್ಲಿ 30 ಕೋಟಿ ರೂಪಾಯಿ ದಾಟ ಬಹುದು. ಕನ್ನಡದ ಮಟ್ಟಿಗೆ ಇದು ಒಳ್ಳೆಯ ಕಲೆಕ್ಷನ್ ಎಂದೇ ಹೇಳಬಹುದು. ಆದರೆ, ಉಪ್ಪಿ ನಿರ್ದೇಶಿಸಿದ ಸಿನಿಮಾ 50 ಕೋಟಿ ರೂಪಾಯಿ ಕೇವಲ ಕರ್ನಾಟಕದಲ್ಲಿಯೇ ಆಗಬಹುದು ಅಂತ ನಿರೀಕ್ಷೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ 50 ಕೋಟಿ ಕ್ಲಬ್ ಸೇರುತ್ತಾ? ಅನ್ನೋದು ನೋಡಬೇಕಿದೆ.

Disclaimer:ಈ ಸಿನಿಮಾದ ಬಾಕ್ಸಾಫೀಸ್ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'UI' ತಂಡ ಅಧಿಕೃತವಾಗಿ ಇನ್ನೂ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಘೋಷಣೆ ಮಾಡಬೇಕಿದೆ.

More from Filmibeat

English summary
Upendra-directed UI film Day 7 Karnataka box office collection report is affected by Sudeep Max;
Read more about: ui box office filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X