UI Box office Day 8: 8ನೇ ದಿನ ಉಪ್ಪಿ 'ಯುಐ' ಕಲೆಕ್ಷನ್ ಏರಿಕೆ ಆಯ್ತಾ? ವೀಕೆಂಡ್‌ನಲ್ಲಿ ಬಾಕ್ಸಾಫೀಸ್ ಲೂಟಿ ಆಗುತ್ತಾ?

ರಿಯಲ್‌ಸ್ಟಾರ್ ಉಪೇಂದ್ರ ಡೈರೆಕ್ಷನ್ ಮಾಡುತ್ತಾರೆ ಅನ್ನೋದು ಸುದ್ದಿನೇ ಸಾಕು. ಸಿನಿಪ್ರಿಯರು ಕಿವಿ ಅರಳಿ ಬಿಡುತ್ತೆ. 20 ವರ್ಷಗಳ ಹಿಂದೆ ನಿರ್ದೇಶಿಸಿದ ಸಿನಿಮಾಗಳನ್ನು ಇಂದಿಗೂ ಡಿಕೋಡ್ ಮಾಡಿಕೊಂಡು ಕೂತಿದ್ದಾರೆ. ಹೀಗಿರುವಾಗ ಇದೇ ತಿಂಗಳು ತೆರೆಕಂಡಿರುವ 'ಯುಐ' ಸಿನಿಮಾದ ಕಾನ್ಸೆಪ್ಟ್ ಅದ್ಯಾವಾಗ ಡಿಕೋಡ್ ಆಗುತ್ತೋ ಗೊತ್ತಿಲ್ಲ.

ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಇಟ್ಟುಕೊಂಡು ಉಪೇಂದ್ರ ತಮ್ಮ ಸ್ಟೈಲ್‌ನಲ್ಲಿ ಕಥೆಯನ್ನು ಹೇಳುತ್ತಾರೆ. ಅದನ್ನು ಡಿಕೋಡ್ ಮಾಡುವುದಕ್ಕೆ ಅಂತಾನೇ ಅವರ ಅಭಿಮಾನಿಗಳು ಎರಡು-ಮೂರು ಸಾರಿ ಸಿನಿಮಾ ನೋಡುತ್ತಾರೆ. ಇದು ಉಪ್ಪಿ ಸಿನಿಮಾದ ಸ್ಟೈಲ್. 'ಯುಐ' ಸಿನಿಮಾ ಕೂಡ ಇದೇ ಐಡಿಯಾ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

Upendra-directed UI film Day 8 Karnataka box office collection report in second friday

ಆದರೆ, ಇಂದಿನ ಪೀಳಿಗೆ ಯಾಕೋ ಐಡಿಯಾವನ್ನು ಅಷ್ಟಾಗಿ ಇಷ್ಟ ಪಟ್ಟಂತೆ ಕಾಣುತ್ತಿಲ್ಲ. 'ಯುಐ' ಸಿನಿಮಾ ರಿಲೀಸ್‌ ಆಗಿ 9ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ (ಡಿಸೆಂಬರ್ 27) 'ಯುಐ' ರಿಲೀಸ್ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಅಷ್ಟರಲ್ಲಿ ಸಿನಿಮಾ ಕಲೆಕ್ಷನ್‌ನಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಹಾಗಿದ್ರೆ ಎರಡನೇ ಶುಕ್ರವಾರ 'ಯುಐ' ಗಳಿಸಿದ್ದು ಎಷ್ಟು? ಇಲ್ಲಿವರೆಗೂ ಈ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಯುಐ' 8ನೇ ದಿನ ಗಳಿಸಿದ್ದೆಷ್ಟು?

ಸೈಕಾಲಜಿಕಲ್ ಸಿನಿಮಾ 'ಯುಐ' ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, 7ನೇ ದಿನದಿಂದ ಗಳಿಕೆಯಲ್ಲಿ ಡ್ರಾಪ್‌ ಆಗಿರುವುದು ಗೊತ್ತಾಗುತ್ತಿದೆ. ಬಾಕ್ಸಾಫೀಸ್ ಕ್ರ್ಯಾಟ್ ಮಾಡುವ ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಎಂಟನೇ ದಿನ ಈ ಸಿನಿಮಾ 87 ಲಕ್ಷ ರೂಪಾಯಿ (Nett)ಕಲೆಕ್ಷನ್ ಮಾಡಿದೆ. ಅದೇ ರೀತಿ ಬಾಕ್ಸಾಫೀಸ್ ಇಂಡೆಕ್ಸ್ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಎಂಟನೇ ದಿನ ಕಲೆಕ್ಷನ್‌ನಲ್ಲಿ ಕೊಂಚ ಗೊಂದಲವಿದ್ದರೂ ಗಳಿಕೆಯಲ್ಲಿ ಇಳಿಕೆ ಆಗಿದ್ದು ಗೊತ್ತಾಗುತ್ತಿದೆ.

Upendra-directed UI film Day 8 Karnataka box office collection report in second friday

8 ದಿನಗಳ ಒಟ್ಟು ಕಲೆಕ್ಷನ್

ರಿಯಲ್‌ ಸ್ಟಾರ್ ನಟಿಸಿದ ಸಿನಿಮಾಗೊಂಡು ಕ್ರೇಜ್ ಇರುತ್ತೆ. ಡೈರೆಕ್ಟ್ ಮಾಡಿದ ಸಿನಿಮಾಗೊಂದು ಕ್ರೇಜ್ ಇರುತ್ತೆ. ಹಾಗೇ ಬಾಕ್ಸಾಫೀಸ್ ಕೂಡ ಅಷ್ಟೇ. ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ ಅಂತ ಗೊತ್ತಾದರೆ ತಾನಾಗೇ ಕ್ರೇಜ್ ಬಿಲ್ಡ್ ಆಗುತ್ತಾ ಹೋಗುತ್ತೆ. ಸದ್ಯಕ್ಕೆ 'ಯುಐ' ಒಂದು ವಾರದೊಳಗೆ 25 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಆದರೆ, ಈ ಸಿನಿಮಾ 35 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಮಾಡಬಹುದಾದ ಸಾಧ್ಯತೆಯಿತ್ತು.

ಎಂಟು ದಿನಗಳ ಕಲೆಕ್ಷನ್ ಹೀಗಿದೆ.

ಮೊದಲ ದಿನ 6.95 ಕೋಟಿ ರೂ
​ಎರಡನೇ ದಿನ 5.60 ಕೋಟಿ ರೂ.
ಮೂರನೇ ದಿನ 5.95 ಕೋಟಿ ರೂ.
​ನಾಲ್ಕುನೇ ದಿನ 2.30 ಕೋಟಿ ರೂ.
​ಐದನೇ ದಿನ 2.15 ಕೋಟಿ ರೂ.
​ಆರನೇ ದಿನ 2.24 ಕೋಟಿ ರೂ.
ಏಳನೇ ದಿನ 1.10 ಕೋಟಿ ರೂ.
​ಎಂಟನೇ ದಿನ 1.00 ಕೋಟಿ ರೂ.
​ಒಟ್ಟು 27.29 ಕೋಟಿ ರೂ.

ವೀಕೆಂಡ್‌ನಲ್ಲಿ 30 ಕೋಟಿ ಕ್ಲಬ್?

ರಿಯಲ್‌ಸ್ಟಾರ್ ಉಪೇಂದ್ರ ಸಿನಿಮಾ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಎರಡು ದಿನಗಳಲ್ಲಿ ಮೂರು ಕೋಟಿ ರೂಪಾಯಿಗೂ ಅಧಿಕ ಗಳಿಸಿದರೆ, 30 ಕೋಟಿ ದಾಟಲಿದೆ. ಇನ್ನು ಜನರು ನ್ಯೂ ಇಯರ್ ಮೂಡಿಗೆ ಜಾರುವುದರಿಂದ ಬಾಕ್ಸಾಫೀಸ್ ಕಲೆಕ್ಷನ್ ಹೀಗೆ ಇರುತ್ತೆ ಅಂತ ಊಹಿಸುವುದು ಕಷ್ಟ. ಸದ್ಯ ಯುವಕರು ಥಿಯೇಟರ್‌ಗೆ ನುಗ್ಗುತ್ತಿದ್ದು, ವೀಕೆಂಡ್‌ನಲ್ಲಿ ಫ್ಯಾಮಿಲಿ ಬಂದರೆ ಮತ್ತೆ ಕಲೆಕ್ಷನ್‌ನಲ್ಲಿ ಏರಿಕೆ ಆಗೋದು ಗ್ಯಾರಂಟಿ.

'ಯುಐ' ಮುಂದೇನು?

ಸಂಕ್ರಾಂತಿವರೆಗೂ ದೊಡ್ಡ ಸಿನಿಮಾ ಯಾವುದೂ ರಿಲೀಸ್ ಆಗುತ್ತಿಲ್ಲ. ಈ ಕಾರಣಕ್ಕೆ ಇನ್ನೂ ಎರಡು ವಾರ ಥಿಯೇಟರ್‌ನಲ್ಲಿ ಈ ಸಿನಿಮಾ ಇರುತ್ತೆ. ಅಷ್ಟರಲ್ಲಿ ಮತ್ತೊಂದು ಸುತ್ತಿನ ಪ್ರಚಾರ ಮಾಡಿದರೆ, ಇನ್ನೊಂದಿಷ್ಟು ಮಂದಿ ಥಿಯೇಟರ್‌ಗೆ ಬರಬಹುದು. ಅಲ್ಲದೆ ಸಿನಿಮಾದ ಕೆಲವು ಇಂಟ್ರೆಸ್ಟಿಂಗ್ ತುಣುಕುಗಳನ್ನು ರಿಲೀಸ್ ಮಾಡಿದರೂ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಬಹುದು.

Disclaimer:ಈ ಸಿನಿಮಾದ ಬಾಕ್ಸಾಫೀಸ್‌ ಗಳಿಕೆಯ ಅಂಕಿ ಅಂಶಗಳನ್ನು ಚಿತ್ರರಂಗದ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಯುಐ' ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ನೀಡಬೇಕಿದೆ.

More from Filmibeat

English summary
Upendra-directed UI film Day 8 Karnataka box office collection report in second friday;
Read more about: ui box office filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X